ಕಾಂಗ್ರೆಸ್ ಸರ್ಕಾರವು ತೆಲಂಗಾಣದಲ್ಲಿ ತನ್ನ ಚುನಾವಣಾ ‘ಗ್ಯಾರಂಟಿ’ ಭರವಸೆಯಾದ ‘ಮಹಾ ಲಕ್ಷ್ಮಿ ಯೋಜನೆ’ಯನ್ನು ಜಾರಿಗೆ ತಂದು ನುಡಿದಂತೆ ನಡೆದುಕೊಂಡಿದೆ.
ಇಂದು ಮಧ್ಯಾಹ್ನದಿಂದಲೇ ತೆಲಂಗಾಣದಲ್ಲಿ ಕರ್ನಾಟಕದ ಮಾದರಿಯಲ್ಲಿಯೇ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ಬಂದಿದೆ. ತೆಲಂಗಾಣ CM ರೇವಂತ್ ರೆಡ್ಡಿ ಯೋಜನೆಗೆ ಚಾಲನೆ ನೀಡಿದರು.
ಈ ಮೂಲಕ ತೆಲಂಗಾಣದಲ್ಲಿ ಇನ್ನು ಮುಂದೆ ಟಿಎಸ್‌ಆರ್‌ಟಿಸಿ ಬಸ್ ಗಳಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಮತ್ತು ತೃತೀಯ ಲಿಂಗಿಗಳು ಉಚಿತ ಪ್ರಯಾಣ ಮಾಡಲಿದ್ದಾರೆ. ಮೊದಲ ದಿನವಾದ ಇಂದೇ ತೆಲಂಗಾಣದ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು.