
ಉತ್ತರ ಪ್ರದೇಶ : ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಮಹಿಳಾ ಶಿಕ್ಷಕಿಯ ಅಶ್ಲೀಲ ಚಿತ್ರವನ್ನು ಮಾರ್ಫ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಾಗಿದೆ..

ಈ ಬಗ್ಗೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಮನೀಷ್ ಅವರು ಮಾತನಾಡಿದ್ದು , ಎಐ ಮೂಲಕ ಶಿಕ್ಷಕಿಯ ಅಶ್ಲೀಲ ಚಿತ್ರ ಮಾಡಿರುವ ಇಬ್ಬರು ಅಪ್ರಾಪ್ತ ಆರೋಪಿಗಳ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಇಂದು ಹೇಳಿದರು.
ಯಾವುದೋ ಕಾರಣಕ್ಕೆ ಶಿಕ್ಷಕಿಯ ಫೋಟೋವನ್ನು ವಾಟ್ಸ್ ಆಯಪ್ ನಿಂದ ತೆಗೆದು ಅದನ್ನು ಅಶ್ಲೀಲಗೊಳಿಸಿ ಬಳಿಕ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಗಳು ಪೋಸ್ಟ್ ಮಾಡಿದ್ದಾರೆ.
ಸದ್ಯ ಶಿಕ್ಷಕಿಯ ಫೋಟೋವನ್ನು ವೆಬ್‌ನಿಂದ ಚಿತ್ರವನ್ನು ತೆಗೆದುಹಾಕಲು ಸಹ ಪ್ರಯತ್ನಗಳನ್ನು ಮಾಡುತ್ತಿದ್ದು, ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ.