• Home
  • About Us
  • ಕರ್ನಾಟಕ
Tuesday, October 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕಾಶ್ಮೀರದಲ್ಲಿ ಮತ್ತೆ ಪಂಡಿತರ ಮೇಲೆ ಉಗ್ರರ ದಾಳಿ: ಪಲಾಯನಕ್ಕೆ ಕರೆಕೊಟ್ಟ ಕೆಪಿಎಸ್‌ಎಸ್

ಪ್ರತಿಧ್ವನಿ by ಪ್ರತಿಧ್ವನಿ
August 24, 2022
in ದೇಶ
0
ಕಾಶ್ಮೀರದಲ್ಲಿ ಮತ್ತೆ ಪಂಡಿತರ ಮೇಲೆ ಉಗ್ರರ ದಾಳಿ: ಪಲಾಯನಕ್ಕೆ ಕರೆಕೊಟ್ಟ ಕೆಪಿಎಸ್‌ಎಸ್
Share on WhatsAppShare on FacebookShare on Telegram

ಇತ್ತೀಚೆಗಷ್ಟೇ ಸುನಿಲ್ ಕುಮಾರ್ ನಾಥ್ (45) ಮತ್ತು ಅವರ ಸಹೋದರ ಪಿಂಟೂ ಕುಮಾರ್ ಅವರು ಕಾಶ್ಮೀರದ ಶಾಪಿಯಾನ್ ಜಿಲ್ಲೆಯ ಚೋಟಿಗಾಮ್ ಗ್ರಾಮದ ಹಣ್ಣಿನ ತೋಟವೊಂದರಲ್ಲಿ ಕೆಲಸ ಮಾಡುತ್ತಿರುವಾಗ ಮೋಟಾರ್ ಸೈಕಲ್‌ನಲ್ಲಿ ಬಂದ ಉಗ್ರಗಾಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಸುನಿಲ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರೆ ಪಿಂಟೂ ಕುಮಾರ್ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿದ್ದಾರೆ. ಇದೇ ವರ್ಷ ಏಪ್ರಿಲ್ 4 ರಂದು ಮತ್ತೊಬ್ಬ ಪಂಡಿತ್ ಸೋನು ಕುಮಾರ್ ಅವರು ಅದೇ ಹಳ್ಳಿಯಲ್ಲಿನ ತನ್ನ ಅಂಗಡಿಯಲ್ಲಿರುವಾಗ ಉಗ್ರರು ಗುಂಡಿನ ದಾಳಿ ಮಾಡಿದ್ದರು.‌ ಆದರೆ ಸೋನು ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡರೂ ಸಹ ಅದೃಷ್ಟವಶಾತ್ ಬದುಕುಳಿದಿದ್ದರು. ದಕ್ಷಿಣ ಕಾಶ್ಮೀರದ ಶಾಪಿಯಾನ್ ಜಿಲ್ಲೆಯಲ್ಲಿ ಮತ್ತೆ ಭುಗಿಲೆದ್ದಿರುವ ಈ ಪಂಡಿತರ ಹತ್ಯೆಯು ಕಾಶ್ಮೀರಿ ಪಂಡಿತ ಸಮುದಾಯದಲ್ಲಿ ಭಯದ ಹೊಸ ಅಲೆಯನ್ನು ಹುಟ್ಟುಹಾಕಿದೆ. ‌

ADVERTISEMENT

1990ರಲ್ಲಿ ಪಂಡಿತರ ಸಾಮೂಹಿಕ ವಲಸೆ ನಡೆದಾಗಲೂ ಹದಿನಾರು‌ ಸದಸ್ಯರನ್ನು ಹೊಂದಿರುವ ಮೂರು ಪಂಡಿತ್ ಕುಟುಂಬಗಳು ಆ ಹಳ್ಳಿಯಲ್ಲೇ ಉಳಿದುಕೊಂಡಿದ್ದವು. ಈಗ ಆ ಹಳ್ಳಿಯಲ್ಲೇ ಗುಂಡಿನ ದಾಳಿ,ಚಕಮಕಿಗಳು ನಡೆಯುತ್ತಿರುವುದು ಪಂಡಿತರ ಆತಂಕಕ್ಕೆ ಕಾರಣವಾಗಿದೆ.
ಸೋನು ಅವರ ಸಹೋದರ ಅನಿಲ್ ಕುಮಾರ್ ಅವರು ತಮ್ಮ ಸಹೋದರನ ಮೇಲೆ ಹಲ್ಲೆ ಮಾಡಿದ ನಂತರ, ವಿಭಾಗೀಯ ಕಮಿಷನರ್, ಪಿ ಕೆ ಪೋಲ್ ಸೇರಿದಂತೆ ಹಲವು ಅಧಿಕಾರಿಗಳ ಬಳಿಗೆ ಹೋಗಿ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದರು. ಆದರೆ ಅವರು “ನೀವು ಅದೇ ಗ್ರಾಮದಲ್ಲಿ ಇರಿ ಮತ್ತು ಅಲ್ಲೇ ಸಾಯಿರಿ. ನನ್ನ ಕೈಯಲ್ಲಿ ಏನೂ ಇಲ್ಲ ಮತ್ತು ನಾನು ನಿಮಗಾಗಿ ಏನು ಮಾಡಲೂ ಸಾಧ್ಯವಿಲ್ಲ” ಎಂದು ಹೇಳಿರುವುದಾಗಿ ಅವರು ಆರೋಪಿಸುತ್ತಾರೆ.

ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಲು ಪೋಲ್ ಚೋಟಿಗಾಮ್‌ಗೆ ಭೇಟಿ ನೀಡಿದಾಗ, ಆಕ್ರೋಶವನ್ನು ಹೊರಹಾಕಿದ ಮೃತರ ಸಂಬಂಧಿಕರು ಉಗ್ರಗಾಮಿಗಳ ಕೈಯಲ್ಲಿ ಸಾಯಲು ತಮ್ಮನ್ನು ಬಿಟ್ಟಿದ್ದಾರೆ ಎಂದು ಆರೋಪಿಸುವ ವಿಡಿಯೋ ಸಾಮಾಜಿಕ
ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಧಾನ ಮಂತ್ರಿಗಳ ವಿಶೇಷ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಸುಮಾರು 4000 ವಲಸೆ ಪಂಡಿತರು ಕಾಶ್ಮೀರದಲ್ಲಿ ವಿವಿಧ ನೌಕರಿಗಳಿಗೆ ನೇಮಕಕೊಂಡಿದ್ದಾರೆ. ಮತ್ತು ಜಮ್ಮುವಿನಿಂದ ನೂರಾರು ಹಿಂದೂ ಉದ್ಯೋಗಿಗಳು ಪರಿಶಿಷ್ಟ ಜಾತಿ (SC) ಕೋಟಾದ ಅಡಿಯಲ್ಲಿ ನೇಮಕಗೊಂಡಿದ್ದಾರೆ ಹಾಗೂ ಕಣಿವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈ ವರ್ಷದ ಮೇ ತಿಂಗಳಲ್ಲಿ ಕೇಂದ್ರ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರ ಪ್ರದೇಶದಲ್ಲಿ ರಾಹುಲ್ ಭಟ್ ಎಂಬ ಪಂಡಿತ್ ಉಗ್ರರ ದಾಳಿಯಲ್ಲಿ ಕೊಲ್ಲಲ್ಪಟ್ಟಾಗ, ಪಂಡಿತ ಸಮುದಾಯದ ನೂರಾರು ಮಂದಿ ಕಣಿವೆಯಿಂದ ಮತ್ತೆ ಪಲಾಯನ ಮಾಡಿದರು.

“ನಾವು ಒಬ್ಬೊಬ್ಬರಾಗಿ ಕೊಲ್ಲಲ್ಪಡಲು ಬಯಸುವುದಿಲ್ಲ. ಇಲ್ಲಿ ಉದ್ದೇಶಿತ ಹತ್ಯೆಗಳು ನಿಲ್ಲುತ್ತಿಲ್ಲ ಮತ್ತು ಅಂತಹ ಪ್ರತಿಯೊಂದು ಘಟನೆಯ ನಂತರವೂ ಸರ್ಕಾರವು ನಮಗೆ ಭದ್ರತೆಯ ಭರವಸೆಯನ್ನು ನೀಡುತ್ತದೆ, ಆದರೆ ಅದು ಮತ್ತೆ ಮತ್ತೆ ಸುಳ್ಳು ಎಂದು ಸಾಬೀತಾಗಿದೆ ” ಎನ್ನುತ್ತಾರೆ 1990 ರಲ್ಲಿ ವಲಸೆ ಹೋದ ಪಂಡಿತ್ ಸಂಜಯ್. “1990 ರಲ್ಲಿ, ಶತ್ರುಗಳು (ಉಗ್ರರು) ಗೋಚರಿಸುತ್ತಿದ್ದರು, ಆದರೆ ಈಗ ಎಲ್ಲವೂ ಮರೆಯಲ್ಲಿ ನಡೆಯುತ್ತಿದೆ. ನಾವು ಅದೃಶ್ಯ ಶತ್ರುಗಳನ್ನು ಎದುರಿಸಲು ಸಾಧ್ಯವಿಲ್ಲ”ಎಂದು ಅವರು ಉದ್ದೇಶಿತ ಹತ್ಯೆಗಳನ್ನು ನಡೆಸುತ್ತಿರುವ ‘ಹೈಬ್ರಿಡ್ ಉಗ್ರಗಾಮಿಗಳನ್ನು’ ಉಲ್ಲೇಖಿಸುತ್ತಾ ಹೇಳಿದ್ದಾರೆ

1990 ರ ದಶಕದಲ್ಲಿ ವಲಸೆ ಹೋಗದಿರಲು ನಿರ್ಧರಿಸಿದ ಪಂಡಿತ್ ಕುಟುಂಬಗಳನ್ನು ಪ್ರತಿನಿಧಿಸುವ ಕಾಶ್ಮೀರಿ ಪಂಡಿತ್ ಸಂಘರ್ಷ್ ಸಮಿತಿ (ಕೆಪಿಎಸ್ಎಸ್) ಈಗಾಗಲೇ ಸಮುದಾಯದ ಸಾಮೂಹಿಕ ವಲಸೆಗೆ ಕರೆ ನೀಡಿದೆ.

“ಕಾಶ್ಮೀರಿ ಪಂಡಿತರ ಮೇಲೆ ಮತ್ತೊಂದು ಮಾರಣಾಂತಿಕ ದಾಳಿಯೊಂದಿಗೆ, ಕಣಿವೆಯಲ್ಲಿ ಎಲ್ಲಾ ಪಂಡಿತರನ್ನು ಕೊಲ್ಲಲಿದ್ದೇವೆ ಎಂದು ಭಯೋತ್ಪಾದಕರು ಸ್ಪಷ್ಟಪಡಿಸಿದ್ದಾರೆ. ವಿಪರ್ಯಾಸವೆಂದರೆ ಸ್ಥಳೀಯ ಕೆಲವರು ಉಗ್ರರೊಂದಿಗೆ ಸೇರಿಕೊಂಡು ತಮ್ಮ ನೆರೆಹೊರೆಯವರನ್ನು ಕೊಲ್ಲಲು ಹಿಂದೆ ಮುಂದೆ ನೋಡುತ್ತಿಲ್ಲ” ಎಂದು ಇತ್ತೀಚಿನ ದಾಳಿಯ ನಂತರ ಹೇಳಿಕೆ ಬಿಡುಗಡೆಗೊಳಿಸಿದ ಕೆಪಿಎಸ್‌ಎಸ್ ತಿಳಿಸಿದೆ.

Tags: BJPCongress Partyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಭವಿಷ್ಯದ ಭಾರತವೂ ಯುವಪೀಳಿಗೆಯ ಸವಾಲುಗಳೂ

Next Post

ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಿಸಲು ಬೆಂಗಳೂರಿಗರ ಹಿಂದೇಟು; ಈವರೆಗೆ ಲಿಂಕ್ ಮಾಡಿರುವುದು ಕೇವಲ 940 ಮಂದಿ

Related Posts

Top Story

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 28, 2025
0

“ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಂಸದ ತೇಜಸ್ವಿ ಸೂರ್ಯ ಅವರು ಕೊಟ್ಟ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ. ಆದರೂ ಅವರ ಸಲಹೆಗಳನ್ನು ಗೌರವಿಸುತ್ತೇನೆ. ಅವುಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ...

Read moreDetails

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

October 28, 2025
ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ 11200 ನಕಲಿ ಮತದಾರರಿದ್ದಾರೆ.ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ 11200 ನಕಲಿ ಮತದಾರರಿದ್ದಾರೆ.ಸಚಿವ ದಿನೇಶ್ ಗುಂಡೂರಾವ್

October 26, 2025
ಹೆಣ್ಣು ಜೀವ – ಎಳೆಯ ಭ್ರೂಣ ಮತ್ತು ಸಾಮಾಜಿಕ ಪ್ರಜ್ಞೆ

ಹೆಣ್ಣು ಜೀವ – ಎಳೆಯ ಭ್ರೂಣ ಮತ್ತು ಸಾಮಾಜಿಕ ಪ್ರಜ್ಞೆ

October 26, 2025
ಶಬರಿಮಲೆ ದೇವಸ್ಥಾನದಲ್ಲಿ ಅರ್ಚಕನಿಂದ ಚಿನ್ನ‌ ಕದ್ದ ಪ್ರಕರಣ..

ಶಬರಿಮಲೆ ದೇವಸ್ಥಾನದಲ್ಲಿ ಅರ್ಚಕನಿಂದ ಚಿನ್ನ‌ ಕದ್ದ ಪ್ರಕರಣ..

October 25, 2025
Next Post
ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಿಸಲು ಬೆಂಗಳೂರಿಗರ ಹಿಂದೇಟು;  ಈವರೆಗೆ ಲಿಂಕ್ ಮಾಡಿರುವುದು ಕೇವಲ 940 ಮಂದಿ

ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಿಸಲು ಬೆಂಗಳೂರಿಗರ ಹಿಂದೇಟು; ಈವರೆಗೆ ಲಿಂಕ್ ಮಾಡಿರುವುದು ಕೇವಲ 940 ಮಂದಿ

Please login to join discussion

Recent News

Top Story

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ
Top Story

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

by ಪ್ರತಿಧ್ವನಿ
October 28, 2025
ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ
Top Story

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

by ಪ್ರತಿಧ್ವನಿ
October 28, 2025
Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ
Top Story

ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

by ಪ್ರತಿಧ್ವನಿ
October 28, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

October 28, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada