ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಚೆನ್ನೈನಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಹವಮಾನ ಇಲಾಖೆ ಇದನ್ನು 2015ರ ಬಳಿಕ ಸುರಿದಿರುವ ಅತೀ ಹೆಚ್ಚು ಮಳೆ ಎಂದು ಹೇಳಿದೆ. ಚೆನ್ನೈ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ತಮಿಳುನಾಡಿನಲ್ಲಿ ನಿನ್ನೆಯಿಂದ ಕುಂಭದ್ರೋಣ ಮಳೆ ಅಬ್ಬರಿಸತೊಡಗಿದೆ. ತಡರಾತ್ರಿಯಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೆಲವೆಡೆ ಪ್ರವಾಹದ ಭೀತಿ ಸೃಷ್ಟಿಯಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೆಲ ಪ್ರದೇಶಗಳು ಜಲಾವೃತವಾಗಿದ್ರೆ. ಇನ್ನೂ ಕೆಲವೆಡೆ ವರುಣ ಭಾರೀ ಅವಾಂತರ ಸೃಷ್ಟಿಸಿದ್ದಾನೆ. ಇಂದು ಕೂಡ ಜಲಧಾರೆಯ ನರ್ತನ ಮುಂದುವರೆಯಲಿದ್ದು, ಮುಂಜಾಗ್ರತ ಕ್ರಮವಾಗಿ ಹವಾಮಾನ ಇಲಾಖೆ ರೆಡ್ ಆಲರ್ಟ್ ಘೋಷಿಸಿದೆ.
ಇನ್ನು, ತಮಿಳುನಾಡಿನಲ್ಲಿ ವರುಣಾರ್ಭಟ ಜೋರಾಗಿದ್ದು, ಚೆನ್ನೈನ ಕೊರಟೂರ್, ಪೆರಂಬೂರ್, ಅಣ್ಣಾಸಲೈ, ಟಿ.ನಗರ, ಗಿಂಡಿ, ಅಡ್ಯಾರ್, ಪೆರುಂಗುಡಿ ಪ್ರದೇಶಗಳು ಜಲಾವೃತವಾಗಿವೆ. ಇನ್ನೂ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಚೆನ್ನೈ ಹಾಗೂ ಎಗ್ಮೋರ್ ರೈಲು ಮಾರ್ಗವನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಗಿಂಡಿ ಹಾಗೂ ಕೋಯಂಬೆಡು ಸಂಚಾರ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಗಳ ಒಳಹರಿವು ಕ್ಷಣಕ್ಷಣಕ್ಕೂ ಹೆಚ್ಚಾಗ್ತಿದ್ದು. ಪೊಂಡಿ ಜಲಾಶಯದಿಂದ 3 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ಚೆಂಬರಂಬಾಕ್ಕಂ ಜಲಾಶಯದಿಂದ 500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಅಡ್ಯಾರ್ ನದಿ ಸಮೀಪದ ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೊಸಸ್ತ ಲೈಯಾರ್ ನದಿ ಪ್ರದೇಶಗಳಲ್ಲಿ ವಾಸಿಸುವ ಜನರು ಸ್ಥಳಾಂತರವಾಗುಂತೆ ಸೂಚನೆ ನೀಡಲಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ಮಂದಿ ಮಹಾಮಳೆಗೆ ಬಲಿಯಾಗಿದ್ದಾರೆ. ಸಾವಿರಾರು ಮನೆಗಳು ಮುಳುಗಿ ಹೋಗಿವೆ.
ವರುಣಾರ್ಭಟಕ್ಕೆ ತಮಿಳುನಾಡು ತತ್ತರ
ನುಂಗಂಬಾಕ್ಕಂನಲ್ಲಿ 215.3 ಮಿ.ಮೀ ಮಳೆಯಾಗಿದೆ
ಮೀನಂಬಾಕ್ಕಂನಲ್ಲಿ 113.6 ಮಿ.ಮೀ ಮಳೆ ಸುರಿದಿದೆ
ತೊಂಡಿಯಾರ್ಪೇಟ್, ಹೈ ರೋಡ್, ಜೀವನ್ಲಾಲ್ ನಗರ
ಗ್ರೇಟ್ ನಾರ್ದರ್ನ್ ರಸ್ತೆ, ಜವಾಹರಲಾಲ್ ನೆಹರು ನಗರ
ಗಣಪತಿ ಶಿವ ನಗರ, ದೀಪನ್ ನಗರ, ರಾಘವೇಂದ್ರ ನಗರ
ಟಿಪಿ ಸ್ಕೀಮ್ ರಸ್ತೆ, ತಿರುವಳ್ಳೂರು ನಗರ, ವಿನೋಭಾ ನಗರ
ಶೋಲಿಂಗನಲ್ಲೂರ್ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಸೃಷ್ಟಿ
ರಕ್ಷಣಾ ಕಾರ್ಯಾಚರಣೆಗೆ 900 ಸಿಬ್ಬಂದಿಯ ನಿಯೋಜನೆ

ಕುಂಭದ್ರೋಣ ಮಳೆಯ ಆರ್ಭಟಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ.
ನುಂಗಂಬಾಕ್ಕಂನಲ್ಲಿ 215.3 ಮಿ.ಮೀ ಮಳೆಯಾಗಿದ್ರೆ, ಮೀನಂಬಾಕ್ಕಂನಲ್ಲಿ 113.6 ಮಿ.ಮೀ ಮಳೆ ಸುರಿದಿದೆ. ಇನ್ನೂ ತೊಂಡಿಯಾರ್ಪೇಟ್, ಹೈ ರೋಡ್, ಜೀವನ್ಲಾಲ್ ನಗರ, ಗ್ರೇಟ್ ನಾರ್ದರ್ನ್ ರಸ್ತೆ, ಜವಾಹರಲಾಲ್ ನೆಹರು ನಗರ, ಗಣಪತಿ ಶಿವ ನಗರ, ದೀಪನ್ ನಗರ, ರಾಘವೇಂದ್ರ ನಗರ, ಟಿಪಿ ಸ್ಕೀಮ್ ರಸ್ತೆ, ತಿರುವಳ್ಳೂರು ನಗರ, ವಿನೋಭಾ ನಗರ ಹಾಗೂ ಶೋಲಿಂಗನಲ್ಲೂರ್ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದೆ. ಮಳೆಗೆ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಗೆ 900 ಸಿಬ್ಬಂದಿಯ ನಿಯೋಜಿಸಲಾಗಿದೆ.
ಈ ಮಳೆಯಿಂದಾಗಿ ಹಾನಿಯಾಗಿರುವ ಪ್ರದೇಶಗಳಿಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಸಂಪುಟ ಸಚಿವರ ಜೊತೆ ಭೇಟಿ ನೀಡಿದ್ದಾರೆ. ಜೊತೆಗೆ ಹಾನಿಗೀಡಾಗಿರುವ ಪ್ರದೇಶಗಳ ಜನರಿಗೆ ಆಶ್ರಯದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನೂ ಚೆನ್ನೈನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಇದುವರೆಗೂ ಯಾವುದೇ ಸಾವು ನೋವು ಸಂಭವಿಸಿಲ್ಲ. ಜೊತೆಗೆ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಉಂಟಾಗಲಿದ್ದು, ಉತ್ತರ ತಮಿಳುನಾಡು ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












