Tag: ಬಿಜೆಪಿ ಸರ್ಕಾರ

40% ಕಮಿಷನ್ ಆರೋಪ ನಿರಾಧಾರವಲ್ಲ !! ಪತ್ರಿಕಾ ಪ್ರಕಟಣೆ ಮೂಲಕ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ! 

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಗುತ್ತಿಗೆದಾರದಿಂದ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂಬ ನಿರಂತರ ಆರೋಪವನ್ನು ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಮಾಡಿದ್ದು, ಇದೇ ...

Read moreDetails

ದ್ವೇಷ ರಾಜಕಾರಣ ನಡೆಸಿದ ಬಿಜೆಪಿಗೆ ರಾಜ್ಯದ ಜನತೆಯಿಂದ ತಕ್ಕ ಪಾಠ : ಸಿದ್ದರಾಮಯ್ಯ

ಈ ಬಾರಿ ಕಾಂಗ್ರೆಸ್​ 130 ಸೀಟು ಗೆಲ್ಲೋದು ಪಕ್ಕಾ ಎಂದು ಹೇಳಿದ್ದೆ, ನನ್ನ ಮಾತು ನಿಜವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ವರುಣ ಕ್ಷೇತ್ರದಲ್ಲಿ ಗೆಲುವು ...

Read moreDetails

40 ಪರ್ಸೆಂಟ್​ ಕಮಿಷನ್​ನಲ್ಲಿ ಪ್ರಧಾನಿಗೆಷ್ಟು ಪಾಲು ಸಿಕ್ಕಿದೆ..? : ರಾಹುಲ್​ ಗಾಂಧಿ ಪ್ರಶ್ನೆ

ಆನೇಕಲ್​ : ನಿಮ್ಮ ಸರ್ಕಾರವನ್ನು ಕಳ್ಳತನ ಮಾಡಿ ಮೂರು ವರ್ಷಗಳಾಗಿವೆ ಎಂದು ಹೇಳುವ ಮೂಲಕ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಟಾಂಗ್​ ನೀಡಿದ್ದಾರೆ. ...

Read moreDetails

ಚುನಾವಣೆ ಮುಗಿದ ಮೇಲೆ ಅಮುಲ್​ ಬಗ್ಗೆ ನಿರ್ಧಾರ ಮಾಡಬಹುದಲ್ಲವೇ..? : ಆಮ್​ ಆದ್ಮಿ ಪ್ರಶ್ನೆ

ಬೆಂಗಳೂರು : ಚುನಾವಣೆ ಮುಗಿದ ಮೇಲೆ ಅಮುಲ್ ವಿಚಾರದ ಬಗ್ಗೆ ನಿರ್ಧಾರ ಮಾಡಲು ಸಾಧ್ಯವಿಲ್ಲವೇ? ಎಂದು ಕೇಳುವ ಮೂಲಕ ಆಮ್ ಆದ್ಮಿ ಪಕ್ಷದ ಮುಖಂಡರಾದ ಬ್ರಿಜೇಶ್ ಕಾಳಪ್ಪ ...

Read moreDetails

2008ರಲ್ಲೇ ಬಿಜೆಪಿಯಿಂದ ಕೆಎಂಎಫ್​ ಆಪೋಷನಕ್ಕೆ ಯತ್ನ : ಹೆಚ್​ಡಿಕೆ ಗಂಭೀರ ಆರೋಪ

ಬೆಂಗಳೂರು: ಕೆಎಂಎಫ್ ಆಪೋಷನಕ್ಕೆ ಕೇಂದ್ರ ಬಿಜೆಪಿ ಸರಕಾರ ಮೂರನೇ ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; 2008ರಲ್ಲಿಯೇ ನಂದಿನಿಯನ್ನು ಮುಗಿಸಲು ...

Read moreDetails

ಕಾನ್ಪುರ ಹಿಂಸಾಚಾರದ ಹಿಂದೆ ಸಿಎಎ ವಿರೋಧಿ ಪ್ರತಿಭಟನಾಕಾರರು : ಬಿಜೆಪಿ ಆರೋಪದ ನಡುವೆ ಪೊಲೀಸರು ಹೇಳಿದ್ದೇನು?

ಶುಕ್ರವಾರ ಕಾನ್ಪುರ ನಗರದ ಪರೇಡ್ ಚೌಕ್ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರದ ಹಿಂದೆ ಸ್ಥಳೀಯ ಮುಸ್ಲಿಂ ಮುಖಂಡ ಹಯಾತ್ ಜಾಫರ್ ಹಶ್ಮಿ ಪ್ರಮುಖ ಸಂಚುಕೋರ ಎಂದು ಕಾನ್ಪುರ ಪೊಲೀಸರು ...

Read moreDetails

PSI ನೇಮಕಾತಿಯಲ್ಲಿ ಅಕ್ರಮ : ಯುವಜನರ ಕನಸು ನುಚ್ಚು ನೂರು ಮಾಡಿದ ಬಿಜೆಪಿ ಸರ್ಕಾರ!

ಇತ್ತೀಚೆಗೆ ನಡೆದ ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸರ್ಕಾರ ಒಪ್ಪಿಕೊಂಡು ತನಿಖೆ ನಡೆಸುತ್ತಿದೆ. ಈ ಅಕ್ರಮ ತಾವೇ ಕಂಡುಹಿಡಿದು ದೊಡ್ಡ ಸಾಧನೆ ಮಾಡಿದ್ದೇವೆ ಎಂದು ...

Read moreDetails

ಶಾಲಾ ಪಠ್ಯ ಕ್ರಮದಿಂದ ʻಟಿಪ್ಪು ಸಾಹಸಗಾಥೆʼಗೆ ಕತ್ತರಿ : ವೈಭವೀಕರಣ ಸರಿಯಲ್ಲ ಎನ್ನುತ್ತಿರುವ ಸರ್ಕಾರ !

ಟಿಪ್ಪುವಿನ ಸಾಹಸಗಾಥೆಗಳು ಮಕ್ಕಳ ಮನಸ್ಸಿನಿಂದ ದೂರತಳ್ಳುವ ಕುತಂತ್ರಗಳನ್ನು ಜಾರಿ ಮಾಡಲಾಗಿದೆ. ಬ್ರಿಟೀಷರ ಮುಂದೆ ಕೊನೆಯುಸಿರು ಇರುವವರೆಗೆ ಹೋರಾಡಿ ದೇಶಕ್ಕಾಗಿ ಮಡಿದ ಟಿಪ್ಪುವಿನಂಥಾ ವೀರರ ಯಶೋಗಾಥೆಗಳನ್ನು ವೈಭವೀಕರಿಸಲಾಗಿದೆ ಎಂದು ...

Read moreDetails

ಬಿಜೆಪಿ ಸರ್ಕಾರ ಬರೀ ಕಾರ್ಪೊರೇಟ್ ಕಂಪನಿಗಳ ಪರ : ಸಿದ್ದರಾಮಯ್ಯ

ಬಿಜೆಪಿ ಸರ್ಕಾರ (BJP Goverment) ಬರೀ ಕಾರ್ಪೊರೇಟ್ ಕಂಪನಿಗಳ ಪರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹೌದು, ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟ (ದಸಂಸ ...

Read moreDetails

ಬಿಜೆಪಿ ಸರ್ಕಾರದ 40 % ಕಮಿಷನ್ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ನಿಂದ ಪ್ರತಿಭಟನಾ ಮೆರವಣಿಗೆ

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ 40 % ಕಮಿಷನ್ ಭ್ರಷ್ಟಾಚಾರದ ವಿರುದ್ಧ ಈಗ ಪ್ರತಿಪಕ್ಷಗಳು ಸರ್ಕಾರಕ್ಕೆ ಚಾಟಿ ಬೀಸಲು ಆರಂಭಿಸಿವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ...

Read moreDetails

ಅರಣ್ಯ ಕಾಯ್ದೆ ತಿದ್ದುಪಡಿ: ಮೋದಿ ಸರ್ಕಾರದ ಪ್ರಸ್ತಾವನೆಗೆ ವ್ಯಾಪಕ ವಿರೋಧ

ಅರಣ್ಯನಾಶ, ಪರಿಸರ ಮಾಲಿನ್ಯದ ಕಾರಣಕ್ಕೆ ಅಕಾಲಿಕ ಮಳೆ, ಪ್ರವಾಹ, ಭೂಕುಸಿತ, ಬರ, ಚಂಡಮಾರುತಗಳು ಕಳೆದ ಕೆಲವು ವರ್ಷಗಳಿಂದ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಮನುಷ್ಯನೊಂದಿಗೆ ಇಡೀ ಜೀವಜಾಲವನ್ನೇ ಸಂಚಕಾರಕ್ಕೆ ತಳ್ಳಿವೆ. ಆ ಹಿನ್ನೆಲೆಯಲ್ಲಿ ಇಡೀ ಜಗತ್ತು ಪರಿಸರ ಸಮತೋಲನ ಮತ್ತು ಅದಕ್ಕೆ ಅಗತ್ಯವಾಗಿ ಬೇಕಾದ ಅರಣ್ಯ ಸಂರಕ್ಷಣೆಯ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಆದರೆ,‘ವಿಶ್ವಗುರು’ವಿನ ಜಪ ಮಾಡುವ ಭಾರತ ಮಾತ್ರ, ಬಹುತೇಕ ಇತರೆಲ್ಲಾ ವಿಷಯಗಳಂತೆ ಪರಿಸರದ ವಿಷಯದಲ್ಲಿ ಕೂಡ ಹಿಮ್ಮುಖ ಚಲನೆ ಆರಂಭಿಸಿದೆ. ಅಂತಹ ತಿರುವುಮುರುವು ನಡಿಗೆಯ ಭಾಗವಾಗಿ ಇದೀಗ 1980ರ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು, ಇನ್ನು ಮುಂದೆ ದೇಶದ ಗಡಿ ಭಾಗದ ಮೂಲಸೌಕರ್ಯ ಮತ್ತು ಆಂತರಿಕ ಹೆದ್ದಾರಿ ಸೇರಿದಂತೆ ರಕ್ಷಣಾ ಕಾರ್ಯತಂತ್ರ ಮತ್ತು ಭದ್ರತೆಗೆ ಸಂಬಂಧಿಸಿದ ಯೋಜನೆಗಳಿಗೆ ಯಾವುದೇ ಪೂರ್ವಾನುಮತಿ ಪಡೆಯದೆ ಅರಣ್ಯ ಭೂಮಿ ಬಳಕೆ, ಮರ ಕಡಿತಲೆ, ಕೆರೆ-ಕಟ್ಟೆ, ನದಿ-ಸರೋವರಗಳ ಬಳಕೆಗೆ ಮುಕ್ತ ಅವಕಾಶ ನೀಡಲು ಪ್ರಧಾನಿ ಮೋದಿಯವರ ಸರ್ಕಾರ ಮುಂದಾಗಿದೆ. ಈಗಿರುವ ಅರಣ್ಯ ಕಾಯ್ದೆಯ ನಿಯಮಗಳ ಪ್ರಕಾರ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಯಾವುದೇ ತುರ್ತು ಕೆಲಸಗಳನ್ನು ಕೂಡ ಮಾಡುವಂತಿಲ್ಲ. ಇಂತಹ ಕಠಿಣ ಕಾನೂನಿಂದಾಗಿ ದೇಶದ ರಕ್ಷಣೆ ಮತ್ತು ಭದ್ರತೆಯ ನಿಟ್ಟಿನಲ್ಲಿ ತೀರಾ ನಿರ್ಣಾಯಕವಾಗಿರುವ ಹಲವು ಗಡಿ ಮೂಲಸೌಕರ್ಯ ಯೋಜನೆಗಳು ಮತ್ತು ಹೆದ್ದಾರಿ ಯೋಜನೆಗಳು ತೀರಾ ವಿಳಂಬವಾಗುತ್ತಿವೆ. ಹಾಗಾಗಿ ದೇಶದ ಭದ್ರತೆಯ ದೃಷ್ಟಿಯಿಂದ ತುರ್ತಾಗಿ ಆಗಬೇಕಾದ ಯೋಜನೆಗಳು ಕೂಡ ಅಗತ್ಯ ಅವಧಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಆ ಹಿನ್ನೆಲೆಯಲ್ಲಿ ದೇಶದ ಭದ್ರತೆ ಮತ್ತು ಸುರಕ್ಷತೆಯೊಂದಿಗೆ ನಿರ್ಣಾಯಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾವನೆ ಮಂಡಿಸಲಾಗಿದೆ ಎಂದು ಪರಿಸರ ಸಚಿವಾಲಯ ಈ ತಿದ್ದುಪಡಿಯನ್ನು ಸಮರ್ಥಿಸಿಕೊಂಡಿದೆ. ಆ ಹಿನ್ನೆಲೆಯಲ್ಲಿ ಪ್ರಮುಖವಾಗಿ, ಅರಣ್ಯ ಭೂಮಿಯನ್ನು ಅರಣ್ಯೇತರ ಬಳಕೆಗಾಗಿ ಅನುಮೋದನೆ ಪಡೆಯುವ ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ, ಅನೇಕ ಬಾರಿ, ರಾಷ್ಟ್ರೀಯ ಮಹತ್ವದ ಕಾರ್ಯತಂತ್ರದ ದೃಷ್ಟಿಯಿಂದ ಆಯಕಟ್ಟಿನ ಮತ್ತು ಭದ್ರತಾ ಯೋಜನೆಗಳು ತೀರಾ ವಿಳಂಬವಾಗುತ್ತಿವೆ ಮತ್ತು ಭದ್ರತಾ ದೃಷ್ಟಿಯಿಂದ ಆಯಕಟ್ಟಿನ ಸ್ಥಳಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಆ ಹಿನ್ನೆಲೆಯಲ್ಲಿ ಇಂತಹ ಯೋಜನೆಗಳಿಗೆ ಕೇಂದ್ರ ಪರಿಸರ ಸಚಿವಾಲಯದ ಬದಲಾಗಿ, ಆಯಾ ಯೋಜನೆಗಳ ವ್ಯಾಪ್ತಿಯ ರಾಜ್ಯಗಳೇ ಅನುಮತಿ ನೀಡುವುದು ಮತ್ತು 1980ಕ್ಕಿಂತ ಮುನ್ನ(ಹಾಲಿ ಅರಣ್ಯ ಕಾಯ್ದೆ ಜಾರಿಗೆ ಮುನ್ನ ರೈಲ್ವೆ, ಹೆದ್ದಾರಿ ಪ್ರಾಧಿಕಾರ, ಪಿಡಬ್ಲ್ಯೂಡಿ ಮುಂತಾದವು ವಶಪಡಿಸಿಕೊಂಡ) ಅರಣ್ಯೇತರ ಚಟುವಟಿಕೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಯಾವುದೇ ಅನುಮತಿ ಇಲ್ಲದೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅವಕಾಶ ನೀಡುವುದು ಸೇರಿದಂತೆ ಹಲವು ಮಹತ್ವದ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ. ಹಾಗೇ, ನೆಲದಾಳ ತೈಲ ನಿಕ್ಷೇಪ, ನೈಸರ್ಗಿಕ ಅನಿಲ ಗಣಿಗಾರಿಕೆಗಳಿಗೆ, ಎಕ್ಸಟೆಂಡೆಡ್ ರೀಚ್ ಡ್ರಿಲ್ಲಿಂಗ್(Extended Reach Drilling (ERD), ನಂತಹ ಹೊಸ ತಂತ್ರಜ್ಞಾನ ಬಳಕೆಗೆ ಅವಕಾಶ ನೀಡುವುದು.ERD ತಂತ್ರಜ್ಞಾನ ಅರಣ್ಯ ಭೂಮಿಯ ಕೆಳಗೆ ಆಳವಾದ ತೈಲ ಮತ್ತು ನೈಸರ್ಗಿಕ ಅನಿಲವನ್ನು ಅನ್ವೇಷಿಸಲು ಅಥವಾ ಹೊರತೆಗೆಯಲು ಅನುವು ಮಾಡಿಕೊಡುತ್ತದೆ ಮತ್ತು ಮಣ್ಣು, ವನ್ಯಜೀವಿ, ಜಲಚರಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಹಾಗಾಗಿ ಅಂತಹ ತಂತ್ರಜ್ಞಾನದ ಬಳಕೆಯನ್ನು ಪರಿಸರ ಸ್ನೇಹಿ ಎಂದು ಪರಿಗಣಿಸಿ ಅದನ್ನು ಕಾಯ್ದೆಯ ವ್ಯಾಪ್ತಿಯ ಹೊರಗೆ ಇಡಬೇಕು ಎಂಬ ಪ್ರಸ್ತಾಪ ಕೂಡ ಇದೆ. ಜೊತೆಗೆ, ಖಾಸಗಿ ಅರಣ್ಯ ಕಾಯ್ದೆಯೊಳಗೆ ಬರುವ ಅಥವಾ 1996 ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅರಣ್ಯ ಎಂಬ ವ್ಯಾಖ್ಯಾನದ ವ್ಯಾಪ್ತಿಗೆ ಬರುವ ಖಾಸಗೀ ಭೂಮಿಯ ಮಾಲೀಕರಿಗೆ ಕಾಯ್ದೆಯಿಂದ ಕೆಲವು ಸಡಿಲಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಆ ಪ್ರಕಾರ, ಅರಣ್ಯ ಸಂರಕ್ಷಣಾ ಪರ್ಯಾಯ ಕ್ರಮಗಳೊಂದಿಗೆ ವಸತಿ ಘಟಕವನ್ನು ಒಳಗೊಂಡಂತೆ 250 ಚದರ ಮೀಟರ್ ವಿಸ್ತೀರ್ಣದವರೆಗೆ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡಲು ಅರಣ್ಯ ಕಾಯ್ಕೆ ಅಡ್ಡಿಯಾಗದು. ಇನ್ನು ಸಫಾರಿಗಳು, ಅರಣ್ಯ ತರಬೇತಿ ಕೇಂದ್ರಗಳು ಮತ್ತು ಪ್ರಾಣಿ ಸಂಗ್ರಹಾಲಯಗಳಂತಹ ಯೋಜನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಯೋಜನೆಗಳನ್ನು ಅರಣ್ಯೇತರ ಚಟುವಟಿಕೆಯ ವ್ಯಾಪ್ತಿಯಿಂದ ಕೈಬಿಡಬೇಕು ಎಂಬ ಪ್ರಸ್ತಾವನೆ ಕೂಡ ಇದೆ. ಅಂದರೆ, ಅರಣ್ಯ ಪ್ರದೇಶದಲ್ಲಿ ನಡೆಯುವ ಸಫಾರಿಗಳು, ಇರುವ ಅರಣ್ಯ ತರಬೇತಿ ಕೇಂದ್ರಗಳು, ಮೃಗಾಲಯಗಳನ್ನು ಅರಣ್ಯ ಚಟುವಟಿಕೆಗಳೆಂದೇ ಪರಿಗಣಿಸಿ ಅವುಗಳ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಾಮಗಾರಿಗಳನ್ನು ಅರಣ್ಯ ಕಾಯ್ದೆಯ ಹೊರಗಿಡುವುದು ಮತ್ತು ಅವುಗಳ ಆದಾಯದ ನಿರ್ದಿಷ್ಟ ಪ್ರಮಾಣವನ್ನು ಅರಣ್ಯ ಚಟುವಟಿಕೆಗೆ ಬಳಸುವ ನಿಯಮದಿಂದ ವಿನಾಯಿತಿ ನೀಡುವುದು ಈ ಪ್ರಸ್ತಾವನೆಯ ಉದ್ದೇಶ ಜೊತೆಗೆ ಹಾಗೇ ಅರಣ್ಯ ಕಾಯ್ದೆ ಉಲ್ಲಂಘಿಸಿ ನಡೆಯುವ ಅರಣ್ಯ ಹಾನಿ, ನಾಶ ಪ್ರಕರಣಗಳಲ್ಲಿ ಆರೋಪಿಗಳಿಗೆ ಒಂದು ವರ್ಷ ಸಾದಾ ಶಿಕ್ಷೆ ಮತ್ತು ಜಾಮೀನುರಹಿತ ವಾರಂಟ್ ಜಾರಿಗೊಳಿಸುವ ಪ್ರಸ್ತಾಪವೂ ಇದೆ. ಹಾಗೇ ಈಗಾಗಲೇ ಅರಣ್ಯಪ್ರದೇಶದಲ್ಲಿ ಈಗಾಗಲೇ ಮರಗಳಿಗೆ ಹಾನಿಯಾದ ಪ್ರಕರಣಗಳಲ್ಲಿ ಕೇವಲ ದಂಡ ವಿಧಿಸಿ ಅಪರಾಧವನ್ನು ವಜಾ ಮಾಡುವ ಹೊಸ ಪ್ರಸ್ತಾವನೆಯೂ ಈ ತಿದ್ದುಪಡಿ ಪ್ರಸ್ತಾಪದಲ್ಲಿದೆ. ಅಂದರೆ, ಅರಣ್ಯಕ್ಕೆ ಎದುರಾಗಿರುವ ಸರ್ಕಾರಿ ಮತ್ತು ಖಾಸಗೀ ವಲಯದ ಒತ್ತಡ ಮತ್ತು ಅಪಾಯಗಳ ಹಿನ್ನೆಲೆಯಲ್ಲಿ ಈಗಿರುವ ಅರಣ್ಯ, ನದಿ, ಕಣಿವೆ, ಕೆರೆಕಟ್ಟೆಗಳನ್ನು ಉಳಿಸಿ ಸಂರಕ್ಷಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಬೇಕಾದ ಹೊತ್ತಲ್ಲಿ, ಪ್ರಧಾನಿ ಮೋದಿಯವರ ಸರ್ಕಾರ, ದೇಶದ ಭದ್ರತೆ, ಗಡಿ ನೆಪಮಾಡಿಕೊಂಡು ಇರುವ ಅರಣ್ಯ ಕಾಯ್ದೆಯನ್ನೂ ದುರ್ಬಲಗೊಳಿಸಲು ಹೊರಟಿದೆ. ಸರ್ಕಾರದ ಇಂತಹ ನಡೆಯ ಹಿಂದೆ ದೇಶದ ಭದ್ರತೆಯಂತಹ ಸೂಕ್ಷ್ಮ ವಿಷಯಕ್ಕಿಂತ ಹೆಚ್ಚಾಗಿ ಪ್ರಭಾವಿ ಕಂಪನಿಗಳು ಮತ್ತು ಖಾಸಗೀ ಹೂಡಿಕೆದಾರರಿಗೆ ದೊಡ್ಡ ತಲೆನೋವಾಗಿರುವ ಅರಣ್ಯ ಕಾಯ್ದೆಗಳನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ ಉದ್ದೇಶವಿದ್ದಂತಿದೆ ಎಂಬುದು ಪರಿಸರವಾದಿಗಳ ಆತಂಕ. ಆ ಹಿನ್ನೆಲೆಯಲ್ಲಿ; ದೇಶದ ಅರಣ್ಯ ರಕ್ಷಣೆಗಾಗಿ ಪ್ರಜ್ಞಾವಂತ ನಾಗರಿಕರು, ಈ ಹೊಸ ತಿದ್ದುಪಡಿ ಪ್ರಸ್ತಾಪಗಳನ್ನು ವಿರೋಧಿಸಬೇಕಿದೆ. ಆದರೆ, ಸರ್ಕಾರ, ಹೊಸ ತಿದ್ದುಪಡಿ ಪ್ರಸ್ತಾಪಗಳ ಕರಡು ಪ್ರತಿಗೆ ಆಕ್ಷೇಪಣೆ ಸಲ್ಲಿಸಲು ಕೇವಲ ಹದಿನೈದು ದಿನ ಕಾಲಾವಕಾಶ ನೀಡಿದೆ. ಅಲ್ಲದೆ, ಮೊದಲು ಅಕ್ಟೋಬರ್ 2ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಪ್ಪು ಇಮೇಲ್ ನೀಡಿ, ಜನರನ್ನು ದಿಕ್ಕು ತಪ್ಪಿಸುವ ಯತ್ನ ಮಾಡಲಾಗಿತ್ತು. ಆ ಬಗ್ಗೆ ಹಲವು ಪರಿಸರವಾದಿಗಳು ಸರ್ಕಾರದ ಗಮನ ಸೆಳೆದ ಬಳಿಕ, ಇದೀಗ ಅ.4ರಂದು ಮತ್ತೊಮ್ಮೆ ತಿದ್ದುಪಡಿ ಅಧಿಸೂಚನೆ ಹೊರಡಿಸಿ, ಕಾಯ್ದೆ ತಿದ್ದುಪಡಿ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ ನಾಗರಿಕರು, fcaamendment@gov.in (https://parivesh.nic.in/writereaddata/Corrigendum_FC_04102021.pdf) ಇಮೇಲ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಹಾಗಾಗಿ ದೇಶದ ಭವಿಷ್ಯದ ಬಗ್ಗೆ, ಭವಿಷ್ಯದ ತಲೆಮಾರುಗಳು ನೆಮ್ಮದಿಯ ಬದುಕಿನ ಬಗ್ಗೆ ಕಾಳಜಿಯುಳ್ಳ ನಾಗರಿಕರು ಈ ಇಮೇಲ್ ಬಳಸಿ ತಿದ್ದುಪಡಿ ಪ್ರಸ್ತಾವಗಳಿಗೆ ವಿರೋಧ ವ್ಯಕ್ತಪಡಿಸಬೇಕು ಎಂದು ಪರಿಸರ ಕಾರ್ಯಕರ್ತರು ಮತ್ತು ಸಂಘಟನೆಗಳು ಮನವಿ ಮಾಡಿವೆ. ಅರಣ್ಯ, ಪರಿಸರ, ಕೃಷಿ, ಜಲಮೂಲ ಸೇರಿದಂತೆ ಕಳೆದ ಕೆಲವು ವರ್ಷಗಳಲ್ಲಿ ಇಡೀ ಜಗತ್ತು ಸಂರಕ್ಷಣೆ, ಸಂವರ್ಧನೆಯ ಜಪ ಮಾಡುತ್ತಿದ್ದರೆ, ಭಾರತ ಮಾತ್ರ ಆಡಳಿತ ಪಕ್ಷ ಮತ್ತು ಅಧಿಕಾರರೂಢ ನಾಯಕರ ಪರಮಾಪ್ತ ಮಿತ್ರರಾದ ಬೆರಳೆಣಿಕೆಯ ಉದ್ಯಮಿಗಳ ಲಾಭಕ್ಕಾಗಿ ಎಲ್ಲವನ್ನೂ ಮುಕ್ತಮುಕ್ತಗೊಳಿಸುತ್ತಿದೆ. ಸರ್ಕಾರದ ಇಂತಹ ನಡೆಗಳನ್ನು ಪ್ರಶ್ನಿಸಬೇಕಾದ, ವಿರೋಧಿಸಬೇಕಾದ, ವನ್ಯಜೀವಿ ಮಂಡಳಿ, ಜೀವವೈವಿಧ್ಯ ಮಂಡಳಿಗಳ ಆಡಳಿತಗಳು ಮುಗ್ಗುಮ್ಮಾಗಿ ಕೂತಿವೆ. ಜನರ ತೆರಿಗೆ ಹಣದಲ್ಲಿ ಮೋಜು ಮಾಡುತ್ತಿರುವ ಅಂತಹ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರುಗಳು ಜಾಣಕುರುಡು ಪ್ರದರ್ಶಿಸುತ್ತಾ ಠಳಾಯಿಸುತ್ತಿದ್ದಾರೆ! ಇಂತಹ ದುರವಸ್ಥೆಯ, ಅಸಲೀ ದೇಶದ್ರೋಹಿ, ಜನದ್ರೋಹಿ ವರಸೆಯ ನಡುವೆ, ಸಣ್ಣ ಸಣ್ಣ ಊರುಗಳ, ಯುವ ಪರಿಸರಾಸಕ್ತರು ಕೇಂದ್ರ ಸರ್ಕಾರದ ಈ ಪರಿಸರ ದ್ರೋಹಿ ನಡೆಗಳನ್ನು ಪ್ರಶ್ನಿಸತೊಡಗಿದ್ದಾರೆ ಮತ್ತು ಆಕ್ಷೇಪಣೆ ಸಲ್ಲಿಸುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸತೊಡಗಿದ್ದಾರೆ.

Read moreDetails

90 ವರ್ಷ ಹಿಂದಿನ ಜಾತಿ ಜನಗಣತಿ ಇಟ್ಟುಕೊಂಡು ಸಾಮಾಜಿಕ, ಆರ್ಥಿಕ ಕಾರ್ಯಕ್ರಮ ರೂಪಿಸುತ್ತಿರುವುದು ಸರಿಯಲ್ಲ: ಸಿದ್ದರಾಮಯ್ಯ

ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿವಾರು ಜನಗಣತಿ ನಡೆಸುವುದರಿಂದ ವೈಜ್ಞಾನಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲು, ಅರ್ಹರಿಗೆ ಮೀಸಲಾತಿ ಒದಗಿಸಲು ಸಾಧ್ಯವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ...

Read moreDetails

ಬಿಜೆಪಿ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ತಂದ ಎಸಿಬಿ..!

ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಭೂ ಒಡೆತನ ಯೋಜನೆ ಅಡಿ, ಭೂಮಿ ಖರೀದಿಸಿ, ಭೂ ರಹಿತ ಪರಿಶಿಷ್ಟ ಪಂಗಡದ ಬಡವರಿಗೆ ಹಂಚಿಕೆ ಮಾಡುವ

Read moreDetails

ಕೋವಿಡ್‌ ಸಂಕಷ್ಟ ಇರದಿದ್ದರೆ ರಾಜ್ಯದ ಅಭಿವೃದ್ದಿ ಇನ್ನಷ್ಟು ವೇಗದಲ್ಲಿ ಸಾಗುತ್ತಿತ್ತು- ಸಿಎಂ ಬಿಎಸ್‌ವೈ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ

Read moreDetails
Page 1 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!