Tag: school reopen

ಮಕ್ಕಳ ಮನವಿಗೆ ಮಣಿದ ಜಿಲ್ಲಾಧಿಕಾರಿ: ಶಾಲೆಯ ಸಮೀಪದ ಬಾರ್ ಎತ್ತಂಗಡಿ

ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ಮನವಿ ಸಲ್ಲಿಸಿದರೆ ಆ ಬೇಡಿಕೆ ಈಡೇರಲು ತಿಂಗಳುಗಳೇ ಕಳೆಯುತ್ತವೆ. ಕಚೇರಿಗಳಿಗೆ ಅಲೆದು ಚಪ್ಪಲಿ ಸವೆದರೂ ಆಗಬೇಕಾದ ಕೆಲಸಗಳು ಮಾತ್ರ ಮನವಿ ರೂಪದಲ್ಲಿಯೇ ಉಳಿಯುತ್ತವೆ. ಆದರೆ, ತಮಿಳುನಾಡಿನ ಅರಿಯಲೂರು ಜಿಲ್ಲೆಯ ಜಿಲ್ಲಾಧಿಕಾರಿಮಕ್ಕಳ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಈಗ ಸುದ್ದಿಯಲ್ಲಿದ್ದಾರೆ.  ಕೆಲವು ತಿಂಗಳ ಹಿಂದೆ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಮದ್ಯದಂಗಡಿಗಳ ಸ್ಥಳಾಂತರಕ್ಕೆ ಹಾಗೂ ಗ್ರಾಮಗಳಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆ ನಡೆಸಿದ್ದರು. ವಾರಗಳ ಕಾಲ  ಪ್ರತಿಭಟನೆ ನಡೆದರೂ, ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದ ಮದ್ಯದಂಗಡಿಗಳು ಹಲವೆಡೆಗಳಲ್ಲಿ ಮತ್ತೆ ಕಾರ್ಯಾಚರಿಸಲು ಆರಂಭಿಸಿವೆ.  ತಮಿಳುನಾಡಿನಲ್ಲಿ ನಡೆದ ಘಟನೆ ಇದಕ್ಕೆ ತದ್ವಿರುದ್ದವಾದದ್ದು. ಇ ಎಂ ಇಲಂತೆಂಡ್ರಲ್ ಹಾಗೂ ಅರಿವರಸನ್ ಎಂಬ ಇಬ್ಬರು ವಿದ್ಯಾರ್ಥಿಗಳು ತಮ್ಮ ಶಾಲೆಯ ಸಮೀಪವಿರುವ ಮದ್ಯದಂಗಡಿ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡಿದ್ದರು. ಭೌತಿಕ ತರಗತಿಗಳು ಆರಂಭವಾಗುವ ಮುನ್ನ ಶಾಲೆಗಳ ಸ್ಥಳಾಂತರವಾಗಬೇಕೆಂದು ಆರನೇ ಮತ್ತು ನಾಲ್ಕನೇ ತರಗತಿಯ ಮಕ್ಕಳ ಕೋರಿಕೆಯಾಗಿತ್ತು. ಮಕ್ಕಳ ಸುರಕ್ಷತೆ ಹಾಗೂ ಶಾಲಾ ಪರಿಸರದಲ್ಲಿ ಮದ್ಯಪ್ರಿಯರ ಅನುಚಿತ ನಡವಳಿಕೆಯನ್ನು ಉಲ್ಲೇಖಿಸಿ ಈ ಮನವಿ ನೀಡಲಾಗಿತ್ತು.  ಇದಕ್ಕೆ ತಕ್ಷಣ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಕೂಡಲೇ ಶಾಲೆಯ ಬಳಿಯಿರುವ ಮದ್ಯದಂಗಡಿಯ ತೆರವಿಗೆ ಆದೇಶ ಹೊರಡಿಸಿದ್ದಾರೆ. ಈ ಬೆಳವಣಿಗೆಯಿಂದ ಪ್ರೇರೇಪಿತರಾಗಿ, ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಇಲಂತೆಂಡ್ರಲ್ ಹಾಗೂ ಅರಿವರಸನ್, ರಾಜ್ಯದ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಪತ್ರ ಬರೆದು, ರಾಜ್ಯದಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ.  ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಇಲಂತೆಂಡ್ರಲ್, ಮದ್ಯದಂಗಡಿ ಬಳಿ ಕುಡುಕರು ಕುಳಿತು ಅಶ್ಲೀಲವಾಗಿ ಮಾತನಾಡುತ್ತಿರುತ್ತಾರೆ. ಇದನ್ನು ಕಂಡು ಭಯವಾಗುತ್ತಿತ್ತು. ಕುಡಿತದ ಚಟಕ್ಕೆ ಒಳಗಾದ ಹಲವು ಪೋಷಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಅಥವಾ ಭಿಕ್ಷಾಟನೆಗೆ ಕಳುಹಿಸುತ್ತಿದ್ದಾರೆ. ಎಲ್ಲಾ ಮದ್ಯದಂಗಡಿಗಳು ಮುಚ್ಚಿದರೆ ಈ ಸಮಸ್ಯೆ ಇರುವುದಿಲ್ಲ, ಎಂದು ಹೇಳಿದ್ದಾರೆ.  ಸುಪ್ರಿಂ ಕೋರ್ಟ್ 2015ರಲ್ಲಿ ನೀಡಿರುವ ಆದೇಶದ ಪ್ರಕಾರ ಯಾವುದೇ ಶಾಲೆಯ ನೂರು ಮೀಟರ್ ಸುತ್ತಳತೆಯಲ್ಲಿ ಮದ್ಯದಂಗಡಿಗಳು ಇರುವಂತಿಲ್ಲ. ನೂರು ಮೀಟರ್ ನಂತರವೂ ಮದ್ಯದಂಗಡಿಗಳನ್ನು ಶಾಲೆಯ ಬಳಿ ತೆರೆಯುವುದು ಪ್ರಶ್ನಾರ್ಹವೇ ಆದರೂ, ಈ ಕುರಿತ ಗೊಂದಲಗಳಿಗೆ ಇನ್ನೂ ಉತ್ತರ ದೊರೆತಿಲ್ಲ. ಇಲಂತೆಂಡ್ರಲ್ ಓದುತ್ತಿರುವ ಶಾಲೆಯ ಪಕ್ಕದ ಮದ್ಯದಂಗಡಿಯೂ ನೂರು ಮೀಟರ್ ದೂರದಲ್ಲಿ ಇದ್ದರೂ, ಮಕ್ಕಳ ಮನವಿಯ ಮೇರೆಗೆ ಅದನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ ರಮಣ ಸರಸ್ವತಿ ಅವರು ಹೇಳಿದ್ದಾರೆ. ಮಕ್ಕಳು ಮನವಿ ಸಲ್ಲಿಸಿದ ವಿಚಾರ ರಾಜ್ಯ ಮುಖ್ಯ ಕಾರ್ಯದರ್ಶಿ ಕಚೇರಿಗೂ ತಲುಪಿದ್ದು, ಅವರು ಕೂಡಾ ಮದ್ಯದಂಗಡಿಯ ಸ್ಥಳಾಂತರಕ್ಕೆ ಆದೇಶ ನೀಡಿದ್ದಾರೆ.  ಸದ್ಯಕ್ಕೆ ಈ ಇಬ್ಬರು ಮಕ್ಕಳ ಪ್ರಯತ್ನಕ್ಕೆ ತಮಿಳುನಾಡಿನಲ್ಲಿ ಉತ್ತಮ ಬೆಂಬಲ ಲಭಿಸುತ್ತಿದೆ. ಇಂತಹ ಮಕ್ಕಳೇ ಮುಂದೆ ಉತ್ತಮ ನಾಯಕರಾಗಲು ಸಾಧ್ಯ. ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಇಂತಹವರಿಂದಲೇ ಸಾಧ್ಯ ಎಂಬ ಚರ್ಚೆಗಳು ನಡೆಯುತ್ತಿವೆ. 

Read moreDetails

20 ತಿಂಗಳ ಬಳಿಕ ಪ್ರಾಥಮಿಕ ಶಾಲೆ ಇಂದಿನಿಂದ ಆರಂಭ : ಮೊದಲ ದಿನವೇ ಶಿಕ್ಷಕರಿಂದ ಪ್ರತಿಭಟನೆ!

ಇಂದಿನಿಂದ ಪುಟಾಣಿಗಳ ಶಾಲೆ ಶುರುವಾಗಲಿದೆ. ಹಲವು ದಿನಗಳಿಂದ ಮನೆಯಲ್ಲೇ ಪಾಠ ಕಲಿಯುತ್ತಿದ್ದ ಚಿಣ್ಣರು, ಶುಭ ಸೋಮವಾರದಂದು ಶಾಲೆಗೆ ಹಾಜರಾಗಲಿದ್ದಾರೆ. ಹೌದು, ಕೊರೋನಾದಿಂದ ಬಂದ್  ಆಗಿದ್ದ ಪ್ರಾಥಮಿಕ ಶಾಲೆಗಳು ...

Read moreDetails

ಅಕ್ಟೋಬರ್ 25ರಿಂದ ಮತ್ತೆ ಚಿಣ್ಣರ ಚಿಲಿಪಿಲಿ : ಮಕ್ಕಳೇ ಶಾಲೆಗೆ ರೆಡಿಯಾಗಿ.. 2 ವರ್ಷದ ಬಳಿಕ ಸ್ಕೂಲ್ ಓಪನ್ !

ಅಂದಾಜು ಎರಡು ವರ್ಷಗಳಿಂದ ಶಾಲೆಯಿಂದ ದೂರ ಉಳಿದಿದ್ದ ಚಿಣ್ಣರಿಗೆ ಇದೀಗ ಶಾಲೆಗೆ ಹೋಗುವ ಅವಕಾಶ ಸಿಕ್ಕಿದೆ. ಅಕ್ಟೋಬರ್ 25ರಿಂದ ಪ್ರಾಥಮಿಕ ಶಾಲೆ ಆರಂಭಗೊಳ್ಳಲಿದೆ ಅಂತ ಶಿಕ್ಷಣ ಸಚಿವ ...

Read moreDetails

ಇಂದಿನಿಂದ ಶೇ 100% ಹಾಜರಾತಿಯೊಂದಿಗೆ ಪೂರ್ಣಪ್ರಮಾಣದ ತರಗತಿ ಆರಂಭ – ರಾಜ್ಯ ಸರ್ಕಾರ ಆದೇಶ

ರಾಜ್ಯದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅ.4ರಿಂದ ಶೇ.100 ಹಾಜರಾತಿ ಜತೆಗೆ ಪೂರ್ಣ ಪ್ರಮಾಣದಲ್ಲಿ ಭೌತಿಕ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ. ಈ ಹಿಂದೆ ...

Read moreDetails

ಶಾಲೆ ಪುನರಾರಂಭಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಕೋವಿಡ್ -19ರ‌ ಎರಡನೇ ಅಲೆಯ‌ ಹೊಡೆತದಿಂದ ದೇಶ‌ ಈಗ ತಾನೇ ಹೊರಬಂದಿದ್ದು ಯಾವಾಗ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲವಾದ್ದರಿಂದ ಶಾಲೆಗಳನ್ನು ತೆರೆಯಲು ರಾಜ್ಯಗಳಿಗೆ ನಿರ್ದೇಶನ‌ ನೀಡಲು ಸಾಧ್ಯವಿಲ್ಲ ...

Read moreDetails

ಮಕ್ಕಳು ಆತಂಕಕ್ಕೆ ಒಳಗಾಗದೇ ಶಾಲೆಗಳಿಗೆ ಹಾಜರಾಗಲು ಮುಖ್ಯಮಂತ್ರಿಗಳ ಕರೆ

ಆಗಸ್ಟ್ 23ರಿಂದ ಶಾಲೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಆತಂಕಕ್ಕೆ ಒಳಗಾಗದೇ ಶಾಲೆಗಳಿಗೆ ಹಾಜರಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದ್ದಾರೆ. ಶಾಲೆ ಆರಂಭಕ್ಕೆ ಎಲ್ಲ ರೀತಿಯ ...

Read moreDetails

ಮೈಸೂರು: ಶೇ. 50 ರಷ್ಟು ಮಕ್ಕಳು ಈಗಾಗಲೇ ಸೋಂಕಿಗೆ ಒಳಗಾಗಿದ್ದಾರೆ: ಸೆರೋಸರ್ವೆ ಅಧ್ಯಯನ

ಮೈಸೂರು ಜಿಲ್ಲೆಯಲ್ಲಿ ಮಕ್ಕಳ ಕೋವಾಕ್ಸಿನ್ ಲಸಿಕೆ ಪ್ರಯೋಗಗಳು ಮತ್ತು ಮಕ್ಕಳು ಎದುರಿಸುತ್ತಿರುವ ಸಾಮಾಜಿಕ, ಭಾವನಾತ್ಮಕ ಮತ್ತು ಪೌಷ್ಠಿಕಾಂಶದ ಅಸ್ವಸ್ಥತೆಗಳ ಭಾಗವಾಗಿ ನಡೆಸಿದ ಒಂದು ಸಮೀಕ್ಷೆಯನ್ನು ಉಲ್ಲೇಖಿಸಿ, ತಜ್ಞರು ...

Read moreDetails

170 ದೇಶಗಳಲ್ಲಿ ಶಾಲೆ ತೆರೆದಿರುವಾಗ ನಿಮ್ಮ ರಾಜ್ಯಗಳಲ್ಲಿ ಏಕಿಲ್ಲ?: ರಾಜ್ಯ ಸರ್ಕಾರಗಳನ್ನು ಪ್ರಶ್ನಿಸಿದ ತಜ್ಞರು

50 ಕ್ಕೂ ಹೆಚ್ಚು ಐಐಟಿಯನ್ನರು, ವೈದ್ಯರು, ವಿಜ್ಞಾನಿಗಳು ಮತ್ತು ಪೋಷಕರು ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮ ತಮ್ಮ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ...

Read moreDetails

ಕೋವಿಡ್ ನಂತರದ ಭಾರತದಲ್ಲಿ ಶಿಕ್ಷಣವನ್ನು ಮರು ರೂಪಿಸಬೇಕಾಗಿದೆ

ಭಾರತದಲ್ಲಿ ಕೋವಿಡ್ -19 ನ ಎರಡನೇ ಅಲೆಯ ನಂತರ ಎಷ್ಟು ಬೇಗನೆ, ಯಾವ ಮಟ್ಟದಲ್ಲಿ ಮತ್ತು ಯಾವ ರೀತಿಯಲ್ಲಿ ಶಾಲೆಗಳನ್ನು ಪುನಃ ತೆರೆಯಬೇಕು ಎಂಬ ಬಗ್ಗೆ ಅನೇಕ ...

Read moreDetails

9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆಗಸ್ಟ್ ಮೊದಲನೇ ವಾರದಿಂದ ಶಾಲೆ ಆರಂಭ: ಶಿಕ್ಷಣ ಇಲಾಖೆ

ರಾಜ್ಯದಲ್ಲಿ ಕರೋನ ಎಲ್ಲೆಡೆ ವ್ಯಾಪಕವಾಗಿ ಹರಡಿದ ಸಮಯದಿಂದ ಇಲ್ಲಿಯವರೆಗೂ ಎಲ್ಲಾ ತರಹದ ಶಾಲಾ ಕಾಲೇಜುಗಳು ಮುಚ್ಚಿದೆ. ಶಾಲಾ ಕಾಲೇಜಿನ ಶೈಕ್ಷಣಿಕ ವರ್ಷವನ್ನು ಮತ್ತೆ ಶುರು ಮಾಡುವುದು ಯಾವಾಗ ...

Read moreDetails

ಮಕ್ಕಳ ಸುರಕ್ಷತೆಗಾಗಿ ಶಾಲಾ ಸಿಬ್ಬಂದಿಗೆ ಕೋವಿಡ್ ಲಸಿಕೆ: ಸಚಿವ ಡಾ.ಕೆ.ಸುಧಾಕರ್

ಯಾವುದೋ ಒಂದು ದಿನ ಶಾಲೆಗಳನ್ನು ಆರಂಭಿಸಬೇಕಾಗುತ್ತದೆ. ಇದಕ್ಕೆ ಸಿದ್ಧತೆಯಾಗಿ ಶಾಲೆಗಳ ಎಲ್ಲ ಸಿಬ್ಬಂದಿಗೆ ಆದ್ಯತೆಯಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ...

Read moreDetails

ಕರ್ನಾಟಕದ 2020-21 ಶೈಕ್ಷಣಿಕ ವರ್ಷದಲ್ಲಿ 60,000 ಮಕ್ಕಳು ‘ಶಾಲೆಯಿಂದ ವಂಚಿತರಾಗಿದ್ದಾರೆ’: ಖಾಸಗಿ ಶಾಲೆಗಳ ಸಮೀಕ್ಷೆ

2020-21ರ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿಯನ್ನು ನವೀಕರಿಸದ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸದ ಕಾರಣ ರಾಜ್ಯದಲ್ಲಿ 60,000 ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಶಾಲೆಯಿಂದ ಹೊರಗುಳಿದಿದ್ದಾರೆ, ಆದರೆ ಸರ್ಕಾರದ ದಾಖಲೆಗಳಲ್ಲಿ ಮಾತ್ರ ...

Read moreDetails

ತುರ್ತಾಗಿ ಶಾಲೆಯನ್ನು ಏಕೆ ಪುನಾರಂಭಿಸಬೇಕು?

ಪ್ರಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ.ದೇವಿ ಶೆಟ್ಟಿ ನೇತೃತ್ವದ ತಜ್ಞರ ಸಮಿತಿಯು ಕರ್ನಾಟಕದ ಶಾಲೆಗಳನ್ನು ಪುನರಾರಂಭಿಸಲು ಬಲವಾಗಿ ಶಿಫಾರಸು ಮಾಡಿದ್ದು ಶಾಲೆಗೆ ತೆರಳುವ ಪ್ರತಿ ವಿದ್ಯಾರ್ಥಿಗೆ 2 ಲಕ್ಷ ...

Read moreDetails

ಶಾಲಾ – ಕಾಲೇಜು ಆರಂಭಕ್ಕೆ ಶಿಕ್ಷಣ ಸಚಿವರಿಗೆ ಯಾಕೆ ಅವಸರ..?

ಕರ್ನಾಟಕದಲ್ಲಿ ಶಾಲಾ ಕಾಲೇಜು ಆರಂಭಕ್ಕೆ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಶಾಲಾ ಕಾಲೇಜು ಆಡಳಿತ ಮಂಡಳಿ ದಾಖಲಾತಿ ಆರಂಭ ಮಾಡಲು ಪೂರ್ವ ಸಿದ್ಧತೆ ಶುರು ಮಾಡಿವೆ. ರಾಜ್ಯ ...

Read moreDetails

ಚರ್ಚೆಗೆ ಗ್ರಾಸವಾಯ್ತು ಶಾಲೆ ಪುನರಾರಂಭದ ಸರ್ಕಾರದ ಪ್ರಸ್ತಾವನೆ

ಸರ್ಕಾರದ ಪ್ರಸ್ತಾವನೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು ಅದರಲ್ಲಿನ ಗೊಂದಲಗಳು, ಶಂಕೆ, ಮತ್ತು ವಾಸ್ತವಿಕ ಸವಾಲುಗಳ ಕುರಿತ ಪೋಷಕರು

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!