ಖಾಸಗಿ ಶಾಲೆಗಳಿಗೆ ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಆದೇಶ : ಸರ್ಕಾರದ ಈ ಆದೇಶಕ್ಕೆ ಮಣಿಯುತ್ತಾ ಖಾಸಗಿ ಶಾಲೆಗಳು..!
ಕೊರೋನ ಜೊತೆಗೆ ಶುರು ಆಗಿದ್ದಂತಹ ಮೇಜರ್ ಸಮಸ್ಯೆ ಅಂದರೆಮಕ್ಕಳ ಶೈಕ್ಷಣಿಕ ಜೀವನ ಹಾಗೇನೇ ಶಾಲಾ ಶುಲ್ಕದ ವಿಚಾರ. ಶೇ30% ಬದಲು ಶೇ.15 ರಷ್ಟು ಫೀ ಕಡಿತ ಮಾಡಿ ಕೋರ್ಟ್ ಆದೇಶಕ್ಕೆ ಖಾಸಗಿ ಶಾಲೆಗಳಿಗೆ ಸ್ವಲ್ಪ ರಿಲಾಕ್ಸ್ ಆಗಿದ್ರು. ಆದ್ರೀಗ ಸರ್ಕಾರ ನೀಡಿದ ಆದೇಶಕ್ಕೆ ಖಾಸಗಿ ಶಾಲೆಗಳು ಶಾಕ್ ಆಗಿವೆ. ಶಾಲಾ ಶುಲ್ಕದ ವಿಚಾರವಾಗಿ ಕಳೆದ ಒಂದು ವರೆ ವರ್ಷದಲ್ಲಿ ಸಾಕಷ್ಟು ಗಲಾಟೆ ಗದ್ದಲಗಳು ಆಗಿದ್ವು, ಅದು ಎಲ್ಲಿವರ್ಗೆ ಅಂದ್ರೆ ಕೋರ್ಟ್ ಮೆಟ್ಟಿಲು ಕೂಡ ಈ ಮ್ಯಾಟರ್ ಏರಿತ್ತು. ಸರ್ಕಾರ ಹೊರಡಿಸಿದ್ದ 30% ಶುಲ್ಕ ಕಡಿತ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದ ಖಾಸಗಿ ಶಾಲಾ ಸಂಘಟನೆಗಳು, ಕೊನೆಗೂ ಕೇವಲ 15% ಶುಲ್ಕ ವಿನಾಯಿತಿ ಮಾತ್ರ ಎಂಬ ಆದೇಶ ಪಡೆಯುವಲ್ಲಿ ಯಶಸ್ವಿಯಾದ್ರು. ಆದ್ರೆ ಏನ್ ಮಾಡೋದು ಹೇಳಿ, ಕೋರ್ಟ್ ಈ ಆದೇಶ ನೀಡಿದ್ರು ಸಹ ಪೋಷಕರು ಮಾತ್ರ ಇನ್ನೂ ಫೀಸ್ ಕಟ್ಟೋಕೆ ಪರದಾಡ್ತಿದ್ದಾರೆ.ಆದ್ರೀಗ 2020-21ರಲ್ಲಿ ಪೋಷಕರಿಂದ ಪೂರ್ಣ ಶುಲ್ಕ ಪಡೆದಿದ್ದರೆ ಹೆಚ್ಚುವರಿ ಶುಲ್ಕವನ್ನು ಕೂಡಲೇ ಹಿಂದಿರುಗಿಸಬೇಕು ಅಥವಾ ೨೦೨೧-೨೨ನೇ ಸಾಲಿನ ಶುಲ್ಕ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಖಾಸಗಿ ಶಾಲೆಗಳಿಗೆ ಶೇ30ರಷ್ಟು ಶುಲ್ಕ ಕಡಿತ ಮಾಡಿ ಜನವರಿ 29 ರಂದು ಸರ್ಕಾರ ಆದೇಶ ನೀಡಿತ್ತು. ಇನ್ನೂ ಈ ಆದೇಶವನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೈಕೋಟ್೯ನಲ್ಲಿ ಪ್ರಶ್ನಿಸಿದ್ದವು.. ಇನ್ನೂ ಹೈಕೋರ್ಟ್ ಶೇ30 ಶುಲ್ಕ ಪರಿಷ್ಕರಿಸಿ ಶೇ15 ರಷ್ಟು ಶುಲ್ಕ ಕಡಿತ ಮಾಡಿ ಎಂದು ಸೆಪ್ಟಬರ್ 16ರಂದು ಆದೇಶಿಸಿತ್ತು. ಆದ್ರೆ ಬಹುತೇಕ ಸಂಸ್ಥೆಗಳು ಈ ಆದೇಶವನ್ನು ಪಾಲಿಸಿರಲಿಲ್ಲ. ಶೇ100 ರಷ್ಟು ಶುಲ್ಕ ಪಡೆದುಕೊಳ್ತಿದ್ದರು. ಈ ಸಂಬಂಧ ಪೋಷಕರು ಇಲಾಖೆ ಅಧಿಕಾರಗಳ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಹೆಚ್ಚುವರಿ ಶುಲ್ಕವನ್ನು ಕೊಡಲೇ ಪೋಷಕರಿಗೆ ಹಿಂದಿರುಗಿಸುಂತೆ ಆದೇಷಿಸಿದೆ. ಇನ್ನೂ ಸರ್ಕಾರದ ಈ ಆದೇಶಕ್ಕೆ ಪೋಷಕರು ಸ್ವಾಗತ ಮಾಡಿದ್ದಾರೆ. ಇನ್ನೂ ಸರ್ಕಾರದ ಆದೇಶಕ್ಕೆ ಕ್ಯಾಮ್ಸ್ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಕ್ಯಾಮ್ಸ್ ಅಧ್ಯಕ್ಷ ಶಶಿಕುಮಾರ್ ಶಿಕ್ಷಣ ಇಲಾಖೆ ಎಡವಟ್ಟು ಮಾಡಿದೆ. ಖಾಸಗಿ ಶಾಲೆ ಹಾಗು ಪೋಷಕರು ನಡುವೆ ಜಗಳ ಉಂಟು ಮಾಡ್ತಿದೆ ಎಂದು ಕಿಡಿಕಾರಿದ್ರು. ಒಟ್ನಲ್ಲಿ ೨೦೨೦-೨೧ನೇ ಸಾಲಿನಲ್ಲಿ ನಿಗದಿಪಡಿಸಿದ ಶುಲ್ಕಕ್ಕಿಂತ ಕಡಿಮೆ ಮಾಡಲು ಆಡಳಿತ ಮಂಡಳಿಗಳು ಇಚ್ಛಿಸಿದಲ್ಲಿ ಅದಕ್ಕೂ ಅವಕಾಶವಿದೆ ಎಂದು ತಿಳಿಸಲಾಗಿದೆ.ಆದ್ರೆ ಈ ಖಾಸಗಿ ಶಾಲೆಗಳು ಈ ಆದೇಶಕ್ಕೆ ಪೋಷಕರಿಗೆ ಹೆಚ್ಚವರಿ ಶುಲ್ಕ ಪಡೆದಿದಲ್ಲಿ ಶುಲ್ಕ ವಾಪಸ್ ನೀಡ್ತಾರ ಎಂಬುವುದು ಕಾದು ನೋಡಬೇಕಾಗಿದೆ.
Read moreDetails