Tag: PM-CARES

ಲಸಿಕೆ ಖರೀದಿಸಲು ಸಾಲಕ್ಕೆ ಬೇಡಿಕೆಯಿಟ್ಟ ಕೇಂದ್ರ ; PM-CARES ನಿಧಿ ಎಲ್ಲಿ ಹೋಯಿತು?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲಸಿಕಾ ಅಭಿಯಾನದ ಖರ್ಚು ನಿಭಾಯಿಸಲು ಅಂತರರಾಷ್ಟ್ರೀಯ ಬ್ಯಾಂಕುಗಳಿಮದ ಸಾಲ ಪಡೆಯಲು ಮುಂದಾಗಿದೆ. ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ‘ಸುರಕ್ಷಿತ ಹಾಗೂ ಪರಿಣಾಮಕಾರಿ ಕೋವಿಡ್ ಲಸಿಕೆ’ ಪಡೆಯಲು 500 ಮಿಲಿಯನ್ ಡಾಲರ್ ಮೊತ್ತದ ಸಾಲ ಕೇಳಿದೆ! ಇದಲ್ಲದೇ, ಏಷಿಯಾ ಪೆಸಿಫಿಕ್ ವ್ಯಾಕ್ಸಿನ್ ಆ್ಯಕ್ಸೆಸ್ ಫೆಸಿಲಿಟಿ ಪ್ರೋಗ್ರಾಂ (Asia Pacific Vaccine Access Facility programme) ಅಡಿಯಲ್ಲಿ ಕೂಡಾ ನಾಲ್ಕು ಮಿಲಿಯನ್ ಡಾಲರ್  ಸಾಲವನ್ನು ಭಾರತ ಪಡೆಯಲಿದೆ. ಈ ಸಾಲವನ್ನು ತಾಂತ್ರಿಕ ವಿಭಾಗಗಳಾದ ಲಸಿಕಾ ಕೇಂದ್ರಗಳ ಅಭಿವೃದ್ದಿ ಹಾಗೂ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಬಳಸಲಾಗುವುದು.  ಅಂದಹಾಗೆ ಲಸಿಕೆಗಳಿಗಾಗಿ ಭಾರತ ಮಾಡಿರುವುದು ಕೇವಲ ಇಷ್ಟು ಮಾತ್ರ ಸಾವಲ್ಲ. ಇದಕ್ಕು ಮೊದಲು ಏಷಿಯನ್ ಡೆವೆಲಪ್ಮೆಂಟ್ ಬ್ಯಾಂಕಿನಿಂದ ಲಸಿಕೆ ಖರೀದಿಗಾಗಿ 1.5 ಬಿಲಿಯನ್  ಡಾಲರ್ ಮೊತ್ತದ ಹಣ, ಸಾಲದ ರೂಪದಲ್ಲಿ ಭಾರತಕ್ಕೆ ಸಿಗಲಿದೆ. 670  ಮಿಲಿಯನ್ ಡೋಸ್ ಲಸಿಕೆ ಖರೀದಿಸಲು ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ಸಾಲ  ಪಡೆಯಲಾಗುತ್ತಿದೆ ಎಂದು ವರದಿಯಾಗಿದೆ.  ಈವರೆಗೆ ಲಸಿಕಾ ಅಭಿಯಾನಕ್ಕೆ ಸರ್ಕಾರ ಎಷ್ಟು ಮೊತ್ತವನ್ನು ವ್ಯಯಿಸಿದೆ ಎಂಬ ಕುರಿತು ಅಧಿಕೃತ ಅಂಕಿ ಅಂಶಗಳು ಲಭ್ಯವಿಲ್ಲ. ಆದರೆ, ಸರ್ಕಾರವು ಒಂದು ಬಿಲಿಯನ್ ಡೋಸ್ ಲಸಿಕೆಗೆ ಅಂದಾಜು ರೂ.19,000 ಖರ್ಚು ಮಾಡಿದೆ. ಸುಪ್ರೀಂ ಕೋರ್ಟ್’ಗೆ ಸರ್ಕಾರ ನೀಡಿರುವ ಅಫಿಡವಿಟ್ ಹಾಗೂ ಪಾರ್ಲಿಮೆಂಟ್’ನಲ್ಲಿ ಸಚಿವರು ನೀಡಿರುವ ಉತ್ತರದ ಆಧಾರದ ಮೇಲೆ ಈ ಅಂದಾಜು ಲೆಕ್ಕ ಹಾಕಲಾಗಿದೆ.  ಒಂದು ಬಿಲಿಯನ್ ಡೋಸ್ ಲಸಿಕೆ ನೀಡುವ ಸರ್ಕಾರದ ಸಾಧನೆಗೆ ಇತ್ತೀಚಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು. ಸರ್ಕಾರವೂ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಖುಶಿಪಟ್ಟಿತ್ತು. ಆದರೆ, ಲಸಿಕೆ ಪಡೆಯಲು ಭಾರತ ಅಂತರರಾಷ್ಟ್ರೀಯ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಅಗತ್ಯವಿತ್ತೇ?  ಎಲ್ಲಿ ಹೋಯಿತು PM CARES ನಿಧಿ? 2020ರ ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ಪಿಎಂ ಕೇರ್ಸ್ ನಿಧಿ ತೆರೆದಿರುವ ಘೋಷಣೆ ಮಾಡಿದರು. ಸಿಎಸ್ಆರ್ ನಿಧಿಯ ಹಣವನ್ನು ಪಿಎಂ ಕೇರ್ಸ್’ಗೆ ನೀಡಿದ್ದಲ್ಲಿ ಅಂತಹ ಕಂಪನಿಗಳಿಗೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿದರು. ಆದರೆ, ಇದೊಂದು ಖಾಸಗಿ ಟ್ರಸ್ಟ್, ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ ಎಂದು ಹೇಳಿ ನಿಧಿಯ ಪಾರದರ್ಶಕತೆಗೆ ಪರದೆ ಮುಚ್ಚಿದ್ರು.  ಹಲವು ಸಂಸ್ಥೆಗಳು ನೀಡಿರುವ ವರದಿಯ ಪ್ರಕಾರ ಕೇವಲ 52 ದಿನಗಳಲ್ಲಿ ಈ ನಿಧಿಗೆ ಬರೋಬ್ಬರಿ 1.27 ಬಿಲಿಯನ್ ಡಾಲರ್ ಹಣ ಹರಿದು ಬಂದಿತ್ತು. ಇದು ಕೇವಲ ಬೃಹತ್ ಕಾರ್ಪೊರೇಟ್ ಕಂಪನಿ ಹಾಗೂ ಕೇಂದ್ರ ಸರ್ಕಾರದ ನೌಕರರ ಒಂದು ದಿನದ ಸಂಬಳದ ದೇಣಿಗೆಯ ಅಂದಾಜು ಲೆಕ್ಕಾಚಾರವಷ್ಟೇ. ವೈಯಕ್ತಿಕವಾಗಿ ನೀಡಿರುವ ದೇಣಿಗೆ ಮತ್ತು ಸಣ್ಣ ಪುಟ್ಟ ಸಂಸ್ಥೆಗಳ ದೇಣಿಗೆ ಇದರಲ್ಲಿ ಸೇರಿಲ್ಲ.  ಪ್ರಧಾನ ಮಂತ್ರಿ ಪರಿಹಾರ ನಿಧಿ ಎಂಬ ಖಾತೆ ನೇರವಾಗಿ ಪ್ರಧಾನಿ ಕಚೇರಿಯಡಿ ಕಾರ್ಯನಿರ್ವಹಿಸುತ್ತಿದ್ದರೂ, ಅದನ್ನು ಪರಿಗಣಿಸಲಾಗಿಲ್ಲ. ...

Read moreDetails

PM-CARESನಿಂದ 8 ಕೋಟಿ ಮುಂಗಡ ಹಣ ಪಡೆದು ಕಳಪೆ ಗುಣಮಟ್ಟದ ವೆಂಟಿಲೇಟರ್ ನೀಡಿದ ಗುಜರಾತ್ ಕಂಪೆನಿ

ಆರ್‌ಟಿಐನಲ್ಲಿ ಬಹಿರಂಗವಾಗಿರುವ ಮಾಹಿತಿಯಂತೆ ಜ್ಯೋತಿ ಸಿಎಸಿ ಮತ್ತು ಆಂಧ್ರಪ್ರದೇಶದ ಮೆಡ್‌ಟೆಕ್ ಝೋನ್ ಎಂಬ ಕಂಪೆನಿಗಳ ಹೆಸರು

Read moreDetails

ʼPM-CARES ನಿಧಿಗೆ ದೇಣಿಗೆ ನೀಡಿದ್ದೇವೆ ಹಾಗಾಗಿ ಪಾನ್‌ಮಸಾಲ ನಿಷೇಧಿಸಬೇಡಿʼ

ʼPM-CARES ನಿಧಿಗೆ ದೇಣಿಗೆ ನೀಡಿದ್ದೇವೆ ಹಾಗಾಗಿ ಪಾನ್ ಮಸಾಲ ನಿಷೇಧಿಸಬೇಡಿʼ ಬೇಡಿ ಎಂದು ಪಾನ್ಮಸಾಲ ತಯಾರಿಸುವ ಪ್ರಖ್ಯಾತ ಕಂಪೆನಿಯೊಂದು

Read moreDetails

PM-CARES ಲೆಕ್ಕ ಕೇಳಿದವರಿಗೆ ಬಿ.ಎಲ್ ಸಂತೋಷ್ ತಿರುಗೇಟು..!

ಕರೋನಾ ಸಂಕಷ್ಟ ಕಾಲದಲ್ಲಿ ಭಾರತ ಸಿಲುಕಿ ನರಳಾಡುತ್ತಿದೆ. ಲಾಕ್‌ಡೌನ್‌ ಮಾಡಿ ಕರೋನಾ ನಿಯಂತ್ರಣ ಮಾಡೋಣ ಎಂದರೆ ದೇಶ ಮುನ್ನಡೆಸಲು ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಅದೇ ಕಾರಣಕ್ಕೆ ಪ್ರಧಾನಿ ...

Read moreDetails

PM-CARES: ಕೇಂದ್ರ ಸರ್ಕಾರಕ್ಕೆ ನೋಟೀಸ್‌ ಜಾರಿ ಮಾಡಿದ ಬಾಂಬೆ ಹೈಕೋರ್ಟ್

ಮೋದಿ ಆರಂಬಿಸಿದ್ದ ಪಿಎಂ-ಕೇರ್ಸ್ ಖರ್ಚು ವೆಚ್ಚದ ಮಾಹಿತಿ ನೀಡುವಂತೆ ಕೇಂದ್ರ ಹಾಗೂ ಪಿಎಂ-ಕೇರ್ಸ್ ಟ್ರಸ್ಟಿಗಳಿಗೆ ಬಾಂಬೆ ಹೈಕೋರ್ಟ್ ನೋಟೀಸ್

Read moreDetails

“ಪಿಎಂ- ಕೇರ್ಸ್” ದೇಣಿಗೆ ಗೌಪ್ಯತೆ; ಪ್ರಧಾನಿ ನರೇಂದ್ರ ಮೋದಿಗೆ ನೈತಿಕ ಸೋಲು!

ದೇಶವ್ಯಾಪಿ ಕರೋನಾ ಸೋಂಕು ಮಾಡುತ್ತಿರುವ ಸದ್ದಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಹೆಸರಿನಲ್ಲಿ ಸ್ಥಾಪಿಸಿಕೊಂಡಿರುವ ‘ಪಿಎಂ-ಕೇರ್ಸ್’ ಹೆಚ್ಚು ಸದ್ದು ಮಾಡುತ್ತಿದೆ. ಕರೋನಾ ಸೋಂಕಿನ ಬಗೆಗಿನ ಚರ್ಚೆಯು ...

Read moreDetails

‘ಶಾಸ್ತ್ರ ಹೇಳೋಕೆ, ಬದನೇಕಾಯಿ ತಿನ್ನೋಕೆ’ ಎನ್ನುವಂತಿದೆ ‘ಕೆಪಿಸಿಸಿ ಕರೋನಾ ವಿಪತ್ತು ಪರಿಹಾರ ನಿಧಿ‘

‘ಶಾಸ್ತ್ರ ಹೇಳೋಕೆ, ಬದನೇಕಾಯಿ ತಿನ್ನೋಕೆ’ ಎನ್ನುವಂತಿದೆ ‘ಕೆಪಿಸಿಸಿ ಕರೋನಾ ವಿಪತ್ತು ಪರಿಹಾರ ನಿಧಿ‘

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!