Tag: Hinduism

ಅಂಕಣ | ಆರ್‌ಎಸ್‌ಎಸ್‌ ಶಾಲೆಗಳು: ಕೋಮುವಾದದ ಪಠ್ಯಪುಸ್ತಕಗಳುˌ ವಿಷ ಬಿತ್ತುವಿಕೆ – ಭಾಗ 9

~ಡಾ. ಜೆ ಎಸ್ ಪಾಟೀಲ. ಸಂಘ ಸಂಚಾಲಿತ ಶಾಲೆಗಳು ಅಲ್ಲಿ ಕಲಿಯುವ ಮಕ್ಕಳನ್ನು ವಿದ್ಯಾರ್ಥಿಗಳಿಂದ ಹಿಂದುತ್ವದ ಕಾಲಾಳುಗಳಾಗಿ ಬದಲಾಯಿಸುತ್ತವೆ ಎನ್ನುತ್ತಾರೆ ಅಲ್ಲಿನ ಹಳೆಯ ವಿದ್ಯಾರ್ಥಿಗಳು. ದಿ ವೈರ್ ...

Read moreDetails

ಆರ್‌ಎಸ್‌ಎಸ್‌ ಶಾಲೆಗಳು: ಕೋಮುವಾದದ ಪಠ್ಯಪುಸ್ತಕಗಳುˌ ಹಿಂದುತ್ವದ ವಿಷ ಬಿತ್ತುವಿಕೆ – ಭಾಗ 3

~ಡಾ. ಜೆ ಎಸ್ ಪಾಟೀಲ. ಸಂಘ ತಯ್ಯಾರಿಸಿರುವ ಬೋಧಮಾಲಾ ಪುಸ್ತಕ ಸರಣಿಯು ವೈದಿಕ ಧರ್ಮವನ್ನು ವೈಭವೀಕರಿಸುವ, ಅದು ಭಾರತದ ಏಕೈಕ ಧರ್ಮವೆಂದು ಬಿಂಬಿಸುವ ಮತ್ತು ಅದರ ಬಗ್ಗೆ ...

Read moreDetails

ಆರ್‌ಎಸ್‌ಎಸ್ ಶಾಲೆಗಳು: ಕೋಮುವಾದದ ಪಠ್ಯಪುಸ್ತಕಗಳು, ಹಿಂದುತ್ವದ ವಿಷ ಬಿತ್ತುವಿಕೆ ; ಭಾಗ-1

~ಡಾ. ಜೆ ಎಸ್ ಪಾಟೀಲ. ಇತಿಹಾಸವನ್ನು ತನ್ನ ಮೂಗಿನ ನೇರಕ್ಕೆ ತಿರುಚುವ ಹಾಗು ಶಾಲಾ ಹಂತದಲ್ಲೆ ಮಕ್ಕಳ ಮಿದುಳಿಗೆ ಹಿಂದುತ್ವದ ವಿಷ ಬಿತ್ತುವ ಕೃತ್ಯ ಆರ್‌ಎಸ್‌ಎಸ್ ಶಾಲೆಗಳು ...

Read moreDetails

ಭಾರತದ ಮುಸ್ಲಿಮರಲ್ಲಿ ಬಹುಪತ್ನಿತ್ವ: ಒಂದು ವಿಶ್ಲೇಷಣೆ

ಕಳೆದ ತಿಂಗಳಲ್ಲಿ ಮುಗಿದ ರಾಜ್ಯ ವಿಧಾನಸಭೆಯ ಚುಣಾವಣೆಯಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋತ ಮೇಲೆ ಆ ಪಕ್ಷದ ಬಹುತೇಕ ಪುಢಾರಿಗಳು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ನಾಲ್ಕು ...

Read moreDetails

‘ದಿ ಕೇರಳ ಸ್ಟೋರಿ’ ವೈರಲ್​ ಆಗಿರುವುದರ ಹಿಂದಿನ ಮರ್ಮ ಏನು..?

ಸಿನಿಮಾ ಎನ್ನುವುದು ಒಂದು ಮಾಧ್ಯಮ. ಸಿನಿಮಾವನ್ನು ಬಳಸಿಕೊಂಡು ಅವಿದ್ಯಾವಂತರಿಗೆ ತಿಳುವಳಿಕೆ ನೀಡುವ ಕೆಲಸವನ್ನು ನಮ್ಮ ಹಿರಿಯರು ಮಾಡಿಕೊಂಡು ಬಂದಿದ್ದರು. ಡಾ ರಾಜ್​ಕುಮಾರ್​ ಸಿನಿಮಾಗಳನ್ನು ನೋಡಿ ಬೆಳೆದವರು ಉತ್ತಮ ...

Read moreDetails

ಹಯವದನರಾಯರ ಹಿಂದೂ ಧರ್ಮ ಪ್ರೇಮ

~ಡಾ. ಜೆ ಎಸ್ ಪಾಟೀಲ. "ಏನೆ ಪದ್ಮಾ ˌ ಸಂಜೆ ಆತುˌ ದಿನವೆಲ್ಲ ರಾಷ್ಟ್ರಪ್ರೇಮ ಜಾಗೃತಾ ಕಾರ್ಯ ಮಾಡ್ಲಿಕ್ಕೆ ಅಡ್ಡಾಡಿ ಸುಸ್ತಾಗೇತಿ ಒಂದ್ ವಾಟೆ ಚಹಾನಾದರೂ ತಂದು ...

Read moreDetails

ಹಿಂದೂ vs ಹಿಂದುತ್ವ: ಜೇನುಗೂಡಿಗೆ ಕಲ್ಲೆಸೆದರೇ ರಾಹುಲ್ ಗಾಂಧಿ?

ಮಹಾರಾಷ್ಟ್ರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಹಿಂದೂ ಮತ್ತು ಹಿಂದುತ್ವದ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಮೃದು ಹಿಂದುತ್ವದ ಕಾರಣಕ್ಕೆ ಟೀಕೆಗೊಳಗಾಗಿದ್ದ ಕಾಂಗ್ರೆಸ್ ನಾಯಕರೊಬ್ಬರು ಹಿಂದುತ್ವದ ಕುರಿತು ಇಷ್ಟು ಸ್ಪಷ್ಟವಾದ ಮತ್ತು ಕಠಿಣವಾದ ವ್ಯಾಖ್ಯಾನವನ್ನು ನೀಡಿರುವುದು ನಿಜಕ್ಕೂ ಆಶ್ಚರ್ಯ. “ಹಿಂದೂಗಳಿಗೆ ಹಿಂದುತ್ವದ ಅಗತ್ಯವೇನಿದೆ? ಸಿಖ್ಖರು ಮತ್ತು ಮುಸ್ಲೀಮರನ್ನು ಥಳಿಸುವುದು ಹಿಂದುತ್ವವೇ? ಅಖ್ಲಾಕ್’ನಂತಹವರನ್ನು ಕೊಲ್ಲುವುದು ಹಿಂದುತ್ವವೇ?” ಎಂದು ರಾಹುಲ್ ಪ್ರಶ್ನಿಸಿದ್ದರು. ಇದನ್ನು ಬಿಜೆಪಿಯ ವಿರುದ್ದದ ವಾಗ್ದಾಳಿ ಎಂದು ಮಾತ್ರ ಪರಿಗಣಿಸುವ ಬದಲು, ವಿಶಾಲವಾದ ರಾಜಕೀಯ ದೃಷ್ಟಿಕೋನದಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ.  ಕಳೆದ ಸುಮಾರು ಒಂದು ದಶಕದಿಂದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಭಾರತದಲ್ಲಿ ‘ತಮ್ಮ ವ್ಯವಸ್ಥಿತವಾದ ಅಜೆಂಡಾಗಳ ಮೂಲಕ ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವೆ ಇರುವಂತಹ ವ್ಯತ್ಯಾಸವನ್ನು ಇಲ್ಲವಾಗಿಸುವಲ್ಲಿ ಸಫಲರಾಗಿದ್ದಾರೆ. ಹಿಂದುತ್ವ ಎಂದರೆ ಹಿಂದು, ಹಿಂದೂ ಎಂದರೆ ಹಿಂದುತ್ವ ಎಂಬ ಭಾವನೆ ದೇಶದ ಬಹುತೇಕರ ಮನಸ್ಸಿನಲ್ಲಿ ಬೇರೂರಿದೆ. ಹಿಂದುತ್ವದ ಹಿಂದೆ ಇರುವಂತಹ ರಾಜಕೀಯ ಅಜೆಂಡಾಗಳನ್ನು ಹಿಂದೂ ಧರ್ಮದೊಂದಿಗೆ ಬೆರೆಸಿ ಜನರಿಗೆ ಧರ್ಮದ ಅಮಲಿನ Cocktail ಅನ್ನು ಬಿಜೆಪಿ ಮತ್ತು ಆರ್‌ಎಸ್ಎಸ್ ಉಣಬಡಿಸುತ್ತಿದೆ. ಹಿಂದುತ್ವವನ್ನು ಟೀಕಿಸುವವರು ಹಿಂದೂಗಳನ್ನು ಟೀಕಿಸಿದಂತೆ ಎಂಬ ಭ್ರಮೆ ಎಲ್ಲರಲ್ಲಿಯೂ ಆವರಿಸಿದೆ.  ಈ ಎರಡರ ನಡುವಿನ ವ್ಯತ್ಯಾಸವನ್ನು ರಾಹುಲ್ ಗಾಂಧಿ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹಿಂದೂ ಧರ್ಮ ಹಾಗೂ ಹಿಂದುತ್ವದ ನಡುವೆ ಸ್ಪಷ್ಟವಾದ ರೇಖೆಯನ್ನು ಎಳೆಯುವ ಪ್ರಯತ್ನ ಇದಾಗಿದೆ.  “ನಾನು ಉಪನಿಷದ್’ಗಳನ್ನು ಓದಿದ್ದೇನೆ. ಎಲ್ಲಿಯೂ ಒಬ್ಬ ವ್ಯಕ್ತಿಯನ್ನು ಕೊಲ್ಲು ಎಂದು ಬರೆದದ್ದು ಕಾಣಿಸಿಲ್ಲ. ಆದರೆ, ಇದು ಹಿಂದುತ್ವದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ನಮಗೆ ಶಿವ, ಸಂತ ಕಬೀರ, ಗುರು ನಾನಕ್, ಮಹಾತ್ಮ ಗಾಂಧಿಯಿಂದ ಮಾರ್ಗದರ್ಶನ ಸಿಗುತ್ತದೆ. ನೀವು ಹಿಂದೂ ಆಗಿದ್ದರೆ ನಿಮಗೆ ಹಿಂದುತ್ವ ಏಕೆ ಬೇಕು? ಈ ಹೊಸ ಹೆಸರಿನ ಅಗತ್ಯವಾದರೂ ಏನು?” ಎಂದು ರಾಹುಲ್ ಪ್ರಶ್ನಿಸಿದ್ದಾರೆ.  ಇಲ್ಲಿಯೂ ತನ್ನ ವರಸೆ ಬಿಡದ ಬಿಜೆಪಿ, ಹಿಂದೂ ಹಾಗೂ ಹಿಂದುತ್ವದ ನಡುವಿನ ವ್ಯತ್ಯಾಸವನ್ನು ಮತ್ತೆ ಮರೆಮಾಚುವ ಕೆಲಸ ಮಾಡಿದೆ. ರಾಹುಲ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, ರಾಹುಲ್ ಗಾಂಧಿಗೆ ಹಿಂದೂಗಳ ಮೇಲೆ ವೈಷಮ್ಯವಿದೆ,” ಎಂದು ಹೇಳಿದ್ದಾರೆ. ಇದು ನಿರೀಕ್ಷಿಸಿದ ಬೆಳವಣಿಗೆ. ಆದರೆ, ಅನಿರೀಕ್ಷಿತ ಏನೆಂದರೆ, ರಾಹುಲ್ ಗಾಂಧಿಯ ಬಾಯಿಯಿಂದ ಹಿಂದುತ್ವದ ಕುರಿತು ಬಂದಿರುವ ಪದಗಳು.  ನರೇಂದ್ರ ಮೋದಿಯನ್ನು ದೇಶದ ಪ್ರಧಾನಿಯೆಂದು ಬಿಂಬಿಸಲು ಆರಂಭಿಸಿದ ದಿನಗಳಿಂದಲೇ ಹಿಂದುತ್ವ ಎಂಬುದು ರಾಜಕೀಯ ಸಿದ್ದಾಂತಗಳಲ್ಲಿ ಒಂದಾಗಿಬಿಟ್ಟಿತು. ಇದು ದೇಶದಲ್ಲಿ ಈಗಾಗಲೇ ಆಳವಾಗಿ ಬೇರೂರಿದ್ದ, ಜಾತ್ಯಾತೀತವಾದ ಹಾಗೂ ಎಡಪಂಥೀಯ ವಿಚಾರಧಾರೆಯನ್ನು ಬುಡಮೇಲು ಮಾಡುವ ಮಟ್ಟಕ್ಕೆ ಬೆಳೆದು ನಿಂತಿತು. ಒಂದು ಕಾಲದಲ್ಲಿ ಸಾಮಾಜಿಕವಾಗಿ ನಿರಾಕರಿಸಲ್ಪಟ್ಟಿದ್ದ ಹಾಗೂ ಹಿಮ್ಮುಖ ಚಲನೆಯ ಸಿದ್ದಾಂತವೆಂದು ಬಿಂಬಿತವಾಗಿದ್ದ ಹಿಂದುತ್ವ, ಈಗ ಪ್ರಮುಖ ರಾಜಕೀಯ ಅಸ್ತ್ರವಾಗಿ ಬೆಳದು ನಿಂತಿದೆ. ಮುಖ್ಯವಾಹಿನಿ ಮಾಧ್ಯಮಗಳ ಬೆಂಬಲದಿಂದ ಭಿನ್ನಮತೀಯರ ಧ್ವನಿಯನ್ನು ಮುಚ್ಚಿಹಾಕುವ ಪ್ರಯತ್ನ ಹಿಂದುತ್ವದ ಬೆಳವಣಿಗೆಗೆ ಪೂರಕವಾಗಿದೆ. ಇಂತಹ ಸಂದರ್ಭದಲ್ಲಿ ಹಿಂದುತ್ವದ ವಿರುದ್ದ ಮಾತನಾಡುವುದು ರಾಜಕೀಯವಾಗಿ ಆತ್ಮಹತ್ಯೆಗೆ ಸರಿಸಮಾನ ಎಂಬ ಭಾವನೆಯೂ ಬೆಳೆದು ನಿಂತಿದೆ. ಹಿಂದುತ್ವದ ವಿರುದ್ದ ಮಾತನಾಡುವುದೆಂದರೆ, ನೇರವಾಗಿ ಆರ್‌ಎಸ್ಎಸ್ ಅನ್ನು ಎದುರು ಹಾಕಿಕೊಂಡಂತೆ ಎಂಬ ಗುಮ್ಮ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ತಲೆಯಲ್ಲಿ ಆಳವಾಗಿ ಬೇರೂರಿದೆ.  ಈ ಕಾರಣದಿಂದಾಗಿ ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಸೋಲಿಸಲು ಎಲ್ಲಾ ರಾಜಕೀಯ ಪಕ್ಷಗಳು ಅಭಿವೃದ್ದಿಯ ಹೆಸರಿನಲ್ಲಿ ಬಿಜೆಪಿ ವಿರುದ್ದ ಟೀಕೆಗೆ ಮುಂದಾಗಿದ್ದವು. ಹಿಂದುತ್ವದ ವಿಚಾರದಲ್ಲಿ ಮಾತನಾಡಿದರೆ, ಎಲ್ಲಿ ಬಹುಸಂಖ್ಯಾತರ ಮತಗಳು ಕೈತಪ್ಪುವುದು ಎಂಬ ಭಯ ಸಾಮಾನ್ಯವಾಗಿ ಆವರಿಸಿತ್ತು. ಹಿಂದೆ ಮುಸ್ಲಿಂ ನಾಯಕರನ್ನು ಅಪ್ಪಿ ಮುದ್ದಾಡುತ್ತಿದ್ದವರು ಏಕಾಏಕಿ ಅವರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು.  ಇದಕ್ಕಿಂತ ದೊಡ್ಡ ದುರಂತ ಏನೆಂದರೆ, ಬಿಜೆಪಿ ನಾಯಕರಿಗಿಂತ ತಾನು ಶ್ರೇಷ್ಠ ಹಿಂದೂ ಎಂದು ತೋರಿಸಿಕೊಳ್ಳಲು ಇತರೆ ರಾಜಕೀಯ ನಾಯಕರು ಹೆಣಗಾಡತೊಡಗಿದರು. ಬಿಜೆಪಿಯ ಅಂಗಳದಲ್ಲಿಯೇ ಬಿಜೆಪಿಯನ್ನು ಮಣಿಸುತ್ತೇವೆ ಎಂಬ ಹಠ ಇವರದ್ದಾಗಿತ್ತು. ರಾಹುಲ್ ಗಾಂಧಿಯ ಟೆಂಪಲ್ ರನ್, ಅರವಿಂದ ಕೇಜ್ರೀವಾಲರ ಹನುಮಾನ್ ಚಾಲೀಸ ಪಠಣ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸದ ಭರವಸೆ, ಮಮತಾ ಬ್ಯಾನರ್ಜಿಯ ‘ಬ್ರಾಹ್ಮಣ ಮಹಿಳೆ’ ಹೇಳಿಕೆ ಹೀಗೆ ಬಹುತೇಕ ಮೊದಲ ಸಾಲಿನ ನಾಯಕರು ಬಿಜೆಪಿ ಬೀಸಿದ ಬಲೆಗೆ ಸಿಕ್ಕ ಮಿಕಗಳೆಂತೆ ಒದ್ದಾಡಿದ್ದರು. ಇದನ್ನು ರಾಜಕೀಯ ಅವಕಾಶವಾದಿತನ ಅಥವಾ ಮೃದು ಹಿಂದುತ್ವ ಎಂಬ ಹೆಸರಿನಲ್ಲಿ ಕರೆಯಲಾಗಿತ್ತು. ವಿಪಕ್ಷ ನಾಯಕರನ್ನು ಮುಸ್ಲಿಂ ಪ್ರೇಮಿಗಳು ಎಂದು ಅಣಕಿಸುತ್ತಿದ್ದ ಬಿಜೆಪಿಯ ಬಾಯಿ ಮುಚ್ಚಿಸುವುದು ಬಿಟ್ಟರೆ, ಬೇರಾವ ಲಾಭವೂ ಇದರಿಂದ ಸಿಗಲಿಲ್ಲ. ಈ ಕಾರಣದಿಂದಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದಾಗ, ಶಹೀನ್ ಬಾಘ್ ಹೋರಾಟದ ಸಂದರ್ಭದಲ್ಲಿ ಅಥವಾ ದೆಹಲಿ ಗಲಭೆಯ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳಿಗೆ ದೃಢವಾದ ನಿಲುವನ್ನು ತಾಳಲು ಸಾಧ್ಯವೇ ಆಗಲಿಲ್ಲ. ಏಕಾಏಕಿ ಸಂಪೂರ್ಣ ಮುಸ್ಲಿಂ ಸಮುದಾಯವನ್ನು ಅನಾಥರನ್ನಾಗಿಸಿದ ವಿಪಕ್ಷಗಳು, ಅವರನ್ನು ನಡುನೀರಿನಲ್ಲಿ ಕೈಬಿಟ್ಟವು.  ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಹಿಂದೂ vs ಹಿಂದುತ್ವ ಹೇಳಿಕೆ ನಿಜಕ್ಕೂ ಮಹತ್ವ ಪಡೆಯುತ್ತದೆ. ಅವಕಾಶವಾದಿ ರಾಜಕಾರಣದ ನೆರಳಿನಿಂದ ಹೊರಬಂದು ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಪಕ್ಷದ ಬೇರುಗಳನ್ನು ಸದೃಢಗೊಳಿಸದಿದ್ದರೆ ಮುಂದಾಗುವ ಅಪಾಯದ ಅರಿವು ಮನದಟ್ಟಾಗಿರುವಂತೆ ಕಾಣುತ್ತದೆ. ಬಿಜೆಪಿಯ ಮನೆಯೊಳಗೆ ತನ್ನ ಮನೆ ನಿರ್ಮಿಸಲು ಹೊರಟಿದ್ದ ವಿಪಕ್ಷಗಳಿಗೆ ಅದು ಅಸಾಧ್ಯ ಹಾಗೂ ಮೂರ್ಖತನ ಎಂಬ ಅರಿವು ಮೂಡದಿದ್ದಲ್ಲಿ ಇಂತಹ ಹೇಳಿಕೆ ಬರುವುದು ಬಹುಶಃ ಸಾಧ್ಯವಿಲ್ಲವೇನೋ.  ಎಂತಹ ಮಹತ್ವದ ಸತ್ಯವನ್ನು ಬೇಕಾದರೂ ಸುಳ್ಳಾಗಿಸುವ ವ್ಯವಸ್ಥಿತವಾದ ಗುಂಪು ಬಿಜೆಪಿಯ ಬೆನ್ನಿಗೆ ನಿಂತಿದೆ. ಎಂತಹ ಸುಳ್ಳಿಗೆ ಬೇಕಾದರೂ ಸತ್ಯದ ಲೇಪನ ಹಚ್ಚಲು ಮುಖ್ಯವಾಹಿನಿ ಮಾಧ್ಯಮಗಳು ತಯಾರಾಗಿವೆ. ಇಂತಹ ಸಂದರ್ಭದಲ್ಲಿ ಹಿಂದುತ್ವವೆಂಬ ಸಿದ್ದಾಂತದ ವಿರುದ್ದ ಸೆಣಸಾಡುವುದು ಸುಲಭವಲ್ಲ. ಆದರೆ, ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಿರ್ಮಾಣವಾಗಿರುವ ಭಾರತದಲ್ಲಿ, ಸೈದ್ಧಾಂತಿಕವಾಗಿಯೇ ರಾಜಕೀಯ ಎದುರಾಳಿಗಳನ್ನು ಎದುರಿಸುವ ಅಗತ್ಯವಿದೆ. ಅದಕ್ಕಾಗಿ ಕಾಂಗ್ರೆಸ್ ತನ್ನ ಸಿದ್ಧಾಂತ ಏನು ಎಂಬುದನ್ನು ಮೊದಲು ಜನರಿಗೆ ಸ್ಪಷ್ಟಪಡಿಸಬೇಕಾಗಿದೆ. ಹಿಂದುತ್ವವೆಂಬ ‘ಭ್ರಮೆ’ಯಲ್ಲಿ ತೇಲಾಡುತ್ತಿರುವ ಕೋಟ್ಯಾಂತರ ಜನರಿಗೆ ಅದರ ಹಿಂದಿನ ರಾಜಕೀಯ ಷಡ್ಯಂತ್ರ, ಸುಳ್ಳುಗಳ ಸರಮಾಲೆಯನ್ನು ಕಣ್ಣಿಗೆ ಕಾಣುವ ರೀತಿಯಲ್ಲಿ ತೋರಿಸಬೇಕಾಗಿದೆ. ಇಲ್ಲವಾದರೆ, ಐತಿಹಾಸಿಕವಾದ ತಪ್ಪು ನಿರ್ಧಾರಗಳಿಂದ ದೇಶದಲ್ಲಿ ಆರ್ಥಿಕ, ಸಾಮಾಜಿಕ ದಿವಾಳಿತನ ದೃಷ್ಟಿಸಿದ ಬಿಜೆಪಿಗೆ ಮತ್ತೆ ಮತಗಳ ಆಶೀರ್ವಾದ ಲಭಿಸುತ್ತದೆ.  ಸದ್ಯಕ್ಕೆ ಭಾರತವು ಕಾಂಗ್ರೆಸ್ ಮುಕ್ತವಾಗಿಲ್ಲವಾದರೂ, ತನ್ನ ಹಿಂದಿನ ವೈಭವವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಬಳಿ ಹೆಚ್ಚಿನ ವಿಕಲ್ಪಗಳು ಉಳಿದಿಲ್ಲ. ಪಕ್ಷದ ಸಿದ್ದಾಂತಗಳನ್ನು ಬಲಪಡಿಸಿಕೊಂಡು ಸಂಘಟನೆ ಮಾಡದಿದ್ದರೆ ಸದ್ಯಕ್ಕಿರುವ ಸ್ಥಾನವನ್ನೂ ಕಾಂಗ್ರೆಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇವತ್ತಿನ ದಿನದಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ, ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಬಳಿ ವ್ಯಥೆಪಡುವಷ್ಟು ಕಳೆದುಕೊಳ್ಳಲು ಏನೂ ಉಳಿದಿಲ್ಲ. ಉಳಿದಿರುವಷ್ಟನ್ನು ಉಳಿಸಿಕೊಂಡು ಇನ್ನಷ್ಟು ಪಡೆಯಲು, ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪಕ್ಷ ಸಂಘಟನೆ ಮಾಡುವುದು ಒಂದೇ ದಾರಿ. 

Read moreDetails

ಬೆಳಗಾವಿ: ಲವ್ ಜಿಹಾದ್ ಹೆಸರಲ್ಲಿ ಅರ್ಬಾಜ್ ಕೊಲೆ, ಮಿತಿಮೀರುತ್ತಿದೆ ಹಿಂದುತ್ವವಾದಿಗಳ ದಾಂಧಲೆ

ಸೆಪ್ಟೆಂಬರ್ 28 ರಂದು ದೇಸೂರು ಮತ್ತು ಖಾನಾಪುರ ನಡುವಿನ ರೈಲ್ವೆ ಹಳಿಗಳ ಮೇಲೆ 24 ವರ್ಷದ ಯುವಕನ ಶವ ಪತ್ತೆಯಾಗಿತ್ತು. ಆತನ ಕೈಗಳನ್ನು ಕಟ್ಟಿ, ತಲೆ ಮತ್ತು ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!