ವಿಜಯಪುರದಲ್ಲಿ ರೈತರ ಪ್ರತಿಭಟನೆ
ವಿಜಯಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಮಗೂ ನ್ಯಾಯ ಒದಗಿಸಬೇಕು ಎಂದು ಘೋಷಣೆ ಕೂಗಿದರು. ಪೊಲೀಸರ ದೌರ್ಜನ್ಯಕ್ಕು ಧಿಕ್ಕಾರ ಎನ್ನುತ್ತಾ ರೈತ ಸಂಘಗಳು ಪ್ರತಿಭಟನೆಯಲ್ಲಿ ...
Read moreDetailsವಿಜಯಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಮಗೂ ನ್ಯಾಯ ಒದಗಿಸಬೇಕು ಎಂದು ಘೋಷಣೆ ಕೂಗಿದರು. ಪೊಲೀಸರ ದೌರ್ಜನ್ಯಕ್ಕು ಧಿಕ್ಕಾರ ಎನ್ನುತ್ತಾ ರೈತ ಸಂಘಗಳು ಪ್ರತಿಭಟನೆಯಲ್ಲಿ ...
Read moreDetailsಎಲ್ಲಾ 3 ಕೃಷಿ ಕಾಯ್ದೆಯನ್ನು ಹಿಂಪಡೆಯುವುದಾಗಿ ನಾವು ನಿರ್ಧಸಿದ್ದೇವೆ - ಪ್ರಧಾನಿ ಮೋದಿ
Read moreDetailsಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹತ್ತಿಸಿ ನಾಲ್ವರು ರೈತರ ಸಾವಿಗೆ ಕಾರಣರಾಗಿದ್ದ ಕೇಂದ್ರ ಗೃಹ ಖಾತೆ ರಾಜ್ಯ ...
Read moreDetailsರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿಗೆ ರಸ್ತೆಗಳನ್ನು ತಡೆಯುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ರೈತ ...
Read moreDetailsಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಅಕ್ಟೋಬರ್ 3ರಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಶಾಂತಯುತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವನ ...
Read moreDetailsಸಮಕಾಲೀನ ಇತಿಹಾಸದಲ್ಲಿ ಕಂಡು ಕೇಳರಿಯದಂತಹ ಒಂದು ಸಾರ್ವಜನಿಕ ಮುಷ್ಕರ ದೆಹಲಿಯಲ್ಲಿ ಕಳೆದ ಹತ್ತು ತಿಂಗಳಿನಿಂದ ನಡೆಯುತ್ತಿದೆ. ಈ ಮುಷ್ಕರದ ರೂವಾರಿಗಳು ದೇಶದ ರೈತಾಪಿ ಸಮುದಾಯ. ಕೇಂದ್ರ ಸರ್ಕಾರ ...
Read moreDetailsಕೇಂದ್ರ ಸಚಿವ ಅಜಯ್ ಮಿಶ್ರಾ ರವರ ಪುತ್ರ ಆಶಿಶ್ ಮಿಶ್ರಾ ಭಾನುವಾರ ಪ್ರತಿಭಟನಾ ನಿರತ ರೈತರ ಗುಂಪಿನ ಮೇಲೆ ಕಾರು ಚಲಾಯಿಸಿದ ಪರಿಣಾಮ ಇಬ್ಬರು ರೈತರು ಮೃತಪಟ್ಟಿದ್ದು ...
Read moreDetailsಗುರುವಾರದಂದು ರೈತರನ್ನು ಅಪಮಾನಿಸಿದ್ದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕೊನೆಗೂ ಕ್ಷಮೆ ಕೇಳಿದ್ದಾರೆ.ಇವರು ರೈತರಲ್ಲ, ಗೂಂಡಾಗಳು ಎಂದು ಹೇಳಿದ್ದ ಸಚಿವೆ, ತನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಜಂತರ್ ಮಂತರ್’ನಲ್ಲಿ ರೈತ ಸಂಸತ್ ನಡೆಯುತ್ತಿರುವಾಗ ಪತ್ರಕರ್ತರೊಬ್ಬರ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದ್ದ ಮೀನಾಕ್ಷಿ ಲೇಖಿ ಅವರು, ಪತ್ರಿಕಾಗೋಷ್ಠಿಯಲ್ಲಿ ರೈತರನ್ನು ಗೂಂಡಾಗಳೆಂದು ಕರೆದು ಅಪಮಾನಿಸಿದ್ದರು. ಈ ಹೇಳಿಕೆ ಬಹಿರಂಗಗೊಂಡ ಬೆನ್ನಲ್ಲೇ ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದರು. ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು “ಲೇಖಿ ಅವರಿಗೆ ರೈತರನ್ನು ಅಪಮಾನಿಸುವ ಯಾವ ಅಧಿಕಾರವೂ ಇಲ್ಲ. ರೈತರ ವಿರುದ್ದ ಈ ರಿತಿಯ ಹೇಳಿಕೆ ನೀಡಲು ಬಿಜೆಪಿಗೆ ಅಧಿಕಾರವೇ ಇಲ್ಲ,” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಭಾರತೀಯ ಕಿಸಾನ್ ಯೂನಿಯನ್ ಮುಖಂಡರಾಗಿರುವ ರಾಕೇಶ್ ಟಿಕಾಯತ್ ಅವರು ಮೀನಾಕ್ಷಿ ಲೇಖಿ ಹೇಳಿಕೆಯನ್ನು ಖಂಡಿಸಿ, ರೈತರು ಅನ್ನದಾತರು, ಗೂಂಡಾಗಳಲ್ಲ. ಏನೂ ಇಲ್ಲದೇ ಇರುವವರು ಗೂಂಡಾಗಳಾಗಬಹುದು. ರೈತರ ವಿರುದ್ದ ಈ ರೀತಿಯ ಹೇಳಿಕೆ ನಿಡುವುದು ಸರಿಯಲ್ಲ ಎಂದಿದ್ದರು. ಮತ್ತೊಬ್ಬ ರೈತ ನಾಯಕರಾಗಿರುವ ಶಿವಕುಮಾರ್ ಅವರು ಮಾತನಾಡಿ, ಮೀನಾಕ್ಷಿ ಲೇಖಿ 80 ಕೋಟಿ ರೈತರನ್ನು ಅಪಮಾನಿಸಿದ್ದಾರೆ. ನಾವು ಗೂಂಡಾಗಳಾದರೆ ನೀವು ನಾವು ಬೆಳೆದ ಅನ್ನವನ್ನು ತಿನ್ನುವುದು ಬಿಟ್ಟುಬಿಡಿ. ಅವರಿಗೆ ನಾಚಿಕೆಯಾಗಬೇಕು. ಲೇಖಿ ಅವರ ಹೇಳಿಕೆಯನ್ನು ಖಂಡಿಸಿ ನಾವು ರೈತ ಸಂಸತ್ ನಲ್ಲಿ ನಿರ್ಣಯ ಅಂಗೀಕಾರ ಮಾಡಿದ್ದೇವೆ, ಎಂದಿದ್ದಾರೆ. ಇದರೊಂದಿಗೆ, ಪತ್ರಕರ್ತರ ಮೇಲೆ ದಾಳಿ ನಡೆಸಿದವರ ವಿರುದ್ದ ಕಠಿಣ ಕ್ರಮಕ್ಕೂ ಒತ್ತಾಯಿಸಿದ್ದಾರೆ. ಇದಾದ ಬಳಿಕೆ ಮೆತ್ತಗಾಗಿರುವ ಸಚಿವೆ ಮೀನಾಕ್ಷಿ ಲೇಖಿ ಅವರು, “ನಾನು ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಘಟನೆ ಹಾಗೂ ಗುರುವಾರ ಪತ್ರಕರ್ತರ ಮೇಲಾದ ದಾಳಿಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದೆ. ಗೂಂಡಾಗಳಲ್ಲದೆ, ರೈತರು ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಆದರೆ, ನನ್ನ ಹೇಳಿಕೆಯಿಂದ ರೈತರಿಗೆ ಅಥವಾ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಮಾತುಗಳನ್ನು ವಾಪಾಸ್ ತೆಗೆದುಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ. ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, “ಅವರು ರೈತರಲ್ಲ. ಅವರು ಗೂಂಡಾಗಳು. ಇವೆಲ್ಲಾ ಅಪರಾಧ ಕೃತ್ಯಗಳು. ಜನವರಿ 26ರ ಘಟನೆ ಕೂಡಾ ನಾಚಿಕೆಗೇಡಿನ ಅಪರಾಧಿ ಕೃತ್ಯ. ವಿರೋಧ ಪಕ್ಷದವರು ಇಂತಹ ಕೃತ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ,” ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಝ್ಯ ಖಾತೆಯ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದರು.
Read moreDetails© 2024 www.pratidhvani.com - Analytical News, Opinions, Investigative Stories and Videos in Kannada