ರಾಜ್ಯದಲ್ಲಿ ಮುಖ್ಯಮಂತ್ರಿ (Cm race) ಬದಲಾವಣೆ, ಸಿಎಂ ಸ್ಥಾನಕ್ಕಾಗಿ ಕಿತ್ತಾಟ.. ಬಹಿರಂಗ ಹೇಳಿಕೆಗಳು, ಇದೆಲ್ಲದಕ್ಕೂ ಹೈ ಕಮಾಂಡ್ (Highcomnand) ಬ್ರೇಕ್ ಹಾಕಿದ್ದು, ಸಚಿವರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಆದ್ರೆ ಕಾರ್ಯಕರ್ತರು ಮತ್ತು ಸುಮ್ಮನಾಗುವಂತೆ ಕಾಣುತ್ತಿಲ್ಲ.

ಹೌದು, ನಮ್ಮ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ (Satish jarakiholi) ಅನ್ನೋ ಪೋಸ್ಟರ್ ಗಳು ಮತ್ತು ಟಿ ಷರ್ಟ್ ಗಳು ರಾಜಜಿಸಿವೆ. ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ (Valmiki jatre) ಉತ್ತರ ಕರ್ನಾಟಕ ಭಾಗದಿಂದ ಸಾವಿರಾರು ಸತೀಶ್ ಜಾರಕಿಹೊಳಿ ಅಭಿಮಾನಿಗಳು ಆಗಮಿಸಿದ್ರು.

ಈ ವೇಳೆ ಅಭಿಮಾನಿಗಳು ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಬರಹಗಳಿರುವ ಪ್ರಿಂಟೆಡ್ ಟಿ ಶರ್ಟ್ ಹಾಕಿದಲ್ಲದೇ, ವೇದಿಕೆ ಬಳಿ ನಮ್ಮ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಪೋಸ್ಟರ್ ಪ್ರದರ್ಶಿಸಿದ್ದಾರೆ.