ಎಲ್ಲಾ ಸೀಸನ್ ಅಲ್ಲಿ ಸಿಗುವಂತ ಒಂದು ಪದಾರ್ಥ ಅಂದ್ರೆ ಸಿಹಿ ಗೆಣಸು, ಸಿಹಿ ಗೆಣಸಿನಲ್ಲಿ ಆರೋಗ್ಯ ಗುಣಗಳು ಹೆಚ್ಚಿವೆ ,ಹಲವಾರು ಕಾಯಿಲೆಗಳಿಗೆ ರಾಮಬಾಣ ಅಂತ ಹೇಳಿದ್ರು ತಪ್ಪಾಗಲ್ಲ.ಇನ್ನು ಆಯುರ್ವೇದದಲ್ಲಿ ಕೂಡ ಸಿಹಿ ಗೆಣಸನ್ನು ಹೆಚ್ಚಾಗಿ ಬಳಸಲಾಗುತ್ತೆ.ಸಿಹಿಗನಸನ್ನ ಸೇವಿಸುವುದರಿಂದ ಕರುಳಿನ ಸಮಸ್ಯೆ ಕಣ್ಣಿನ ಸಮಸ್ಯೆ ಹೀಗೆ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತದೆ. ಸಿಹಿ ಗೆಣಸನ್ನ ಹಸಿಯಾಗಿ ಕೂಡ ತಿನ್ನಬಹುದು ಇಲ್ಲವಾದರೆ ಸ್ಟೀಮಲ್ಲಿ ಬೇಯಿಸಿ ಕೂಡ ತಿನ್ನಬಹುದು ಹೀಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸಿಹಿಗಣಸನ್ನ ನಿಮ್ಮ ಡಯಟ್ ನಲ್ಲಿ ಆಡ್ ಮಾಡುವುದರಿಂದ ಆರೋಗ್ಯಕ್ಕೆ ಇನ್ನೂ ಏನೆಲ್ಲಾ ಬೆನಿಫಿಟ್ಸ್ ಇದೆ ಅನ್ನೋದ್ರ ಮಾಹಿತಿ ಇಲ್ಲಿದೆ ನೋಡಿ.

ಆಂಟಿ ಇನ್ಫ್ಲಮೆಂಟರಿ
ಸಿಹಿ ಗೆಣಸು ಆಂಟಿ ಇನ್ಫ್ಲಮೆಂಟರಿ ಅಂಶಗಳನ್ನ ಹೆಚ್ಚು ಹೊಂದಿದ್ದು ಇವುಗಳು ಉರಿಯುತವನ್ನು ಕಡಿಮೆ ಮಾಡಲು ಸಹಾಯಕಾರಿ ಮತ್ತು ಸಂಧಿವಾತದಂತಹ ಪರಿಸ್ಥಿತಿಗಳನ್ನ ಸುಧಾರಿಸಲು ಹೆಲ್ಪ್ ಫುಲ್.
ರಕ್ತದಲ್ಲಿ ಸಕ್ಕರೆ ನಿಯಂತ್ರಿಸಲು ಸಹಾಯಕಾರಿ
ಸಿಹಿ ಗೆಣಸು ಕೊಂಚ ಗ್ಲೈಸಮಿಕ್ ಸೂಚಿಯನ್ನು ಹೊಂದಿದ್ದು ಮಧುಮೇಹ ಇರುವವರಿಗೆ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬ್ಯಾಲೆನ್ಸ್ ಮಾಡೋದಕ್ಕೆ ತುಂಬಾನೇ ಸಹಾಯಕಾರಿ. ಡಯಾಬಿಟಸ್ ಇದ್ದವರು ಯಾವುದೇ ಭಯವಿಲ್ಲದೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸಿಹಿಗನಸನ್ನ ಸೇವಿಸುವುದು ಆರೋಗ್ಯಕ್ಕೂ ಮತ್ತು ರುಚಿಗೂ ಉತ್ತಮ.

ಡೈಜೇಶನ್
ಸಿಹಿ ಗೆಣಸಿನಲ್ಲಿ ನಾರಿನಂಶ ಅಂದ್ರೆ ಫೈಬರ್ ಅಂಶ ಹೆಚ್ಚಿತ್ತು ಕರುಳಿನ ಆರೋಗ್ಯವನ್ನ ಕಾಪಾಡಲು ತುಂಬಾನೇ ಸಹಾಯಕ್ಕರೆ ಅದ್ರಲ್ಲೂ ಕೂಡ ಡೈಜೆಶನ್ ಮಲಬದ್ಧತೆಯ ಸಮಸ್ಯೆಗಳನ್ನ ಕಡಿಮೆ ಮಾಡಿ ಕರುಳಿನ ಬ್ಯಾಕ್ಟೀರಿಯಾವನ್ನು ಕೂಡ ನಿವಾರಣೆ ಮಾಡುತ್ತದೆ.
ಮೂಳೆಗಳಿಗೆ ಒಳ್ಳೆಯದು
ಸಿಹಿಗನಸಿನಲ್ಲಿ ವಿಟಮಿನ್ ಕೆ ಅಂಶ ಹೆಚ್ಚಿದ್ದು ಮೂಳೆಗಳ ಆರೋಗ್ಯವನ್ನು ಕಾಪಾಡಲು ತುಂಬಾನೇ ಸಹಾಯಕಾರಿ. ಗಟ್ಟಿಯಾದ ಮೂಳೆಗಳು ನಿಮ್ಮದಾಗುತ್ತದೆ ,ಮಾತ್ರವಲ್ಲದೇ ವಯಸ್ಸಾದಂತೆ ಮೂಳೆಗಳು ಸವೆಯುವುದು ಕೂಡ ತಪ್ಪುತ್ತದೆ.












