ವಿಧಾನಸಭಾ ಚುನಾವಣಾ ಫಲಿತಾಂಶ ಬಂದು 10 ದಿನಗಳು ಕಳೆದು ಹೋಗಿವೆ. ಈಗಾಗಲೇ ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ನೇತೃತ್ವದ JMM ಪಕ್ಷ ಅಧಿಕಾರ ಹಿಡಿದೂ ಆಗಿದೆ. ಆದರೆ ಮಹಾರಾಷ್ಟ್ರದಲ್ಲಿ ಮಾತ್ರ ಮುಖ್ಯಮಂತ್ರಿ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆದ್ರೆ ಗುರುವಾರ ಸಿಎಂ ಪಟ್ಟಾಭಿಷೇಕಕ್ಕೆ ಮುಹೂರ್ತ ನಿಗದಿ ಆಗಿದೆ. ಪ್ರಬಲ ಖಾತೆಗಳಿಗೆ ಬಿಜೆಪಿ, ಶಿವಸೇನೆ, ಎನ್‌ಸಿಪಿ ಮಧ್ಯೆ ಜಿದ್ದಾಜಿದ್ದಿ ಫೈಟ್ ನಡೆದಿದ್ದು ಮಹಾಯುತಿ ಮೈತ್ರಿಯಲ್ಲಿ ಕ್ಯಾಬಿನೆಟ್ ಲೆಕ್ಕಾಚಾರ ನಡೀತಿದೆ.
ಮಹಾಯುತಿ ಮಿತ್ರಪಕ್ಷಗಳ ನಾಯಕರ ನಡುವೆ ಒಮ್ಮತ ಮೂಡದೆ ಸರ್ಕಾರ ರಚನೆಯ ಸರ್ಕಸ್ ತೂಗುಯ್ಯಾಲೆಯಲ್ಲಿತ್ತು.ಮುಖ್ಯಮಂತ್ರಿ ಯಾರು ಅನ್ನೋ ಆಯ್ಕೆ ಆಗದಿದ್ರೂ ಡಿಸೆಂಬರ್ 5 ರಂದು ಗುರುವಾರ ಪ್ರಮಾಣ ವಚನಕ್ಕೆ ವೇದಿಕೆ ರೆಡಿಯಾಗ್ತಿದೆ. ಡಿಸೆಂಬರ್ 5ರಂದು ಸಂಜೆ 5 ಗಂಟೆಗೆ ಮುಂಬೈನ ಆಜಾದ್ ಮೈದಾನದಲ್ಲಿ ಸಿಎಂ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.ಈಗಾಗಲೇ ಬಿಜೆಪಿ, ಶಿವಸೇನೆ, ಎನ್‌ಸಿಪಿ ನಾಯಕರು ಆಗಮಿಸಿ ಕಾರ್ಯಕ್ರಮದ ಪೂರ್ವ ಸಿದ್ಧತೆ ಪರಿಶೀಲನೆ ಮಾಡಿದ್ದಾರೆ.
ಇಂದು ಗುಜರಾತ್ ಮಾಜಿ ಸಿಎಂ ವಿಜಯ್ ರುಪಾಣಿ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿಯ ಆಯ್ಕೆ ಹಾಗು ಹೈಕಮಾಂಡ್ ನಿಲುವಿನ ಬಗ್ಗೆ ಸಭೆಯಲ್ಲಿ ನಿರ್ಧಾರ ಪ್ರಕಟವಾಗಲಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲೇ ಸಿಎಂ ಹೆಸರು ಘೋಷಣೆ ಆಗಲಿದೆ ಎನ್ನಲಾಗ್ತಿದೆ.ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಆಗುವುದು ಬಹುತೇಕ ಫೈನಲ್ ಆಗಿದೆ ಎನ್ನಲಾಗಿದೆ. ಆದರೆ ಮಾಜಿ ಸಿಎಂ ಏಕನಾಥ್ ಶಿಂಧೆ ಒತ್ತಡಕ್ಕೆ ಬಿಜೆಪಿ ಮಣಿದಿದ್ದರೆ ಅಚ್ಚರಿಯ ಅಭ್ಯರ್ಥಿ ಮುಖ್ಯಮಂತ್ರಿ ಆದರೂ ಆಗಬಹುದು ಎನ್ನಲಾಗ್ತಿದೆ.