ತುಮಕೂರು: ಸೋಮವಾರ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಮಹಿಳೆ ಗೋಳಾಟ ಮಾಡಿದ್ದರು. ಶಿರಾದ ರಾಬಿಯಾ ಎಂಬ ಮಹಿಳೆ ಸಿಎಂ ಭಾಷಣ ಮುಗಿಸಿ ಹೋಗುವಾಗ ಕಿರುಚಾಡಿದ್ದರು. ನಮಗೆ ವಾಸ ಮಾಡಲು ಮನೆಯಿಲ್ಲ ಎಂದು ಗೋಳಾಡಿದ ಮಹಿಳೆ, ಶಿರಾ ಶಾಸಕ ಜಯಚಂದ್ರರಿಗೆ ಪದೆ ಪದೇ ಮನವಿ ಮಾಡಿದರೂ ಸೈಟ್ ಕೊಡಲಿಲ್ಲ ಅನ್ನೋ ಆರೋಪ ಮಾಡಿದ್ದರು.
ನಮ್ಮ ಕುಟುಂಬ ಬಾಡಿಗೆ ಮನೆಯಲ್ಲಿ ಇದ್ದೇನೆ, ಶಾಶ್ವತ ನೆಲೆ ಕಲ್ಪಿಸಬೇಕೆಂದು ಮಹಿಳೆ ಒತ್ತಾಯಿಸಿದ್ದರು. ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ ಬಳಿಕ ಸೈಟ್ ಕೊಡುವುದಾಗಿ ಸಿಎಂ ಭರವಸೆ ನೀಡಿದ್ದರು. ಶಿರಾ ಶಾಸಕರಿಗೆ ಕಳೆದ ಒಂದೂವರೆ ವರ್ಷದಿಂದ ಮನವಿ ಮಾಡ್ತಿದ್ದೇನೆ ಎಂದು ಮಹಿಳೆ ಸಿಎಂ ಮುಂದೆ ಹೇಳಿಕೊಂಡಿದ್ದರು.ಆ ಬಳಿಕ ಮಹಿಳೆಗೆ ಸೈಟ್ ಕೊಡುವ ಜವಾಬ್ದಾರಿಯನ್ನ ಜಿಲ್ಲಾಧಿಕಾರಿಗೆ ವಹಿಸಲಾಗಿತ್ತು.
ಒಂದೂವರೆ ವರ್ಷದಲ್ಲಿ ಆಗದ ಕೆಲಸ ಒಂದೇ ದಿನದಲ್ಲಿ ಆಗಿದೆ. ಮುಸ್ಲಿಂ ಮಹಿಳೆಗೆ ನಿವೇಶನ ಸಿಕ್ಕಿದೆ. ನಿನ್ನೆ ತುಮಕೂರು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಮುಂದೆ ಗೋಳಾಡಿದ್ದ ರಾಬಿಯಾಗೆ ಮಂಗಳವಾರ ರಾಬಿಯ ಹೆಸರಿಗೆ 20X30 ಅಳತೆಯ ನಿವೇಶನ ಮಂಜೂರು ಮಾಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಠರಾವು ಮಾಡಿ ಆದೇಶ ಮಾಡಿದ್ದಾರೆ. ಶಿರಾ ನಗರಸಭಾ ಕಾರ್ಯಾಲಯ ಅಧಿಕೃತ ಆದೇಶ ಹೊರಡಿಸಿದೆ. ಶಿರಾ ನಗರದ ಸರ್ವೆ ನಂಬರ್ 100ರಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ.