ಸೂರ್ಯಕುಮಾರ್ ಮೈದಾನದಲ್ಲಿ ಆಡುವಾಗ ಮಡದಿ ದೇವಿಶಾ ಕ್ರೀಡಾಂಗಣಗಳಲ್ಲಿ ಬೆಂಬಲಿಸುತ್ತಿರುತ್ತಾರೆ. ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಇಬ್ಬರು ಬಹಳ ದಿನಗಳ ಕಾಲ ಪ್ರೀತಿಸಿ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಬಳಿಕ ಮನೆಯಲ್ಲಿ ಹಿರಿಯರನ್ನು ಒಪ್ಪಿಸಿ 2016ರಲ್ಲಿ ವಿವಾಹವಾದರು. ಇದೀಗ ಸೂರ್ಯಕುಮಾರ್ ಅವರ ಪತ್ನಿ ಗರ್ಭಿಣಿಯಾಗಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಸೂರ್ಯಕುಮಾರ್, ಪತ್ನಿ ದೇವಿಶಾ ಶೆಟ್ಟಿ ಇಬ್ಬರು ಸಾಂಪ್ರದಾಯಿಕ ಉಡುಪಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಬಿಳಿ ಬಣ್ಣದ ಪ್ಯಾಂಟ್, ಶರ್ಟ್ ಹಾಗೂ ಕೋಟ್ ಅನ್ನು ಧರಿಸಿ ಆಕರ್ಷಕವಾಗಿ ಕಾಣುತ್ತಿದ್ರೆ, ಅವರ ಪತ್ನಿ ಬಂಗಾರ ಬಣ್ಣದ ಸೀರೆ ಧರಿಸಿಕೊಂಡು ಕಾಣಿಸಿಕೊಂಡಿದ್ದಾರೆ.ದೇವಿಶಾ ಶೆಟ್ಟಿಯವರಿಗೆ ಸದ್ಯ ಮೂರು ತಿಂಗಳು ಪೂರ್ಣಗೊಂಡಿದ್ದು ಅದ್ದೂರಿ ಬೇಬಿ ಶವರ್ ಸಮಾರಂಭವನ್ನು ಮಾಡಿದ್ದಾರೆ ಎನ್ನಲಾಗಿದೆ.

ದೇವಿಶಾ ಮತ್ತು ಸೂರ್ಯ ಬೇಬಿ ಶವರ್ ಎನ್ನುವ ಟ್ಯಾಗ್‌ಲೈನ್‌ನೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಇಬ್ಬರೂ ಕೈ ಹಿಡಿದುಕೊಂಡು ಒಳಗೆ ಪ್ರವೇಶಿಸಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ದಂಪತಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಧರಿಸಿರುವ ಉಡುಪನ್ನು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದಾರೆ. ಇದು ದಂಪತಿಗೆ ಮೊದಲ ಮಗುವಿನ ಸಂಭ್ರಮವಾಗಿದೆ.
ಈ ಸುದ್ದಿಯನ್ನು ಓದಿ
ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಗುಡ್ನ್ಯೂಸ್: ಹೊಸ ಸ್ಲಿಪರ್ ಕೋಚ್ ಬಸ್ ಗಳ ಆಗಮನ: ವೈಶಿಷ್ಟ್ಯವೇನು ?






