ಮೇ ತಿಂಗಳಿನಿಂದ ಪಿಂಕ್ ಲೈನ್‌ನಲ್ಲಿ 4ನೇ ಮೆಟ್ರೋ ಸಂಚಾರ ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಪಿಂಕ್ ಲೈನ್ ಮೆಟ್ರೋ ಸೇವೆಗಾಗಿ ನಾಲ್ಕನೇ ರೈಲು ಸೆಟ್ ಭಾನುವಾರ ಬೆಂಗಳೂರಿಗೆ ಬಂದಿಳಿದಿದೆ. ಪಿಂಕ್ ಲೈನ್‌ನ ಮೊದಲ ರೈಲನ್ನು BEML ಸಂಸ್ಥೆ 2025ರ ಡಿಸೆಂಬರ್ 11ರಂದು ಬಿಡುಗಡೆ ಮಾಡಿತ್ತು. ಬಳಿಕ ಫೆಬ್ರವರಿಯಲ್ಲಿ ಇನ್ನೂ ಎರಡು ರೈಲುಗಳನ್ನು ನಮ್ಗೆಮ ಮೆಟ್ರೋವು ಹಸ್ತಾಂತರಿಸಲಾಗಿತ್ತು. ಈಗ ನಾಲ್ಕನೇ ರೈಲು ಬಂದಿರುವುದರಿಂದ ಪಿಂಕ್ ಲೈನ್ ಸೇವೆ ಆರಂಭದ ಸಿದ್ಧತೆಗಳು ಮತ್ತಷ್ಟು ವೇಗ ಪಡೆದಿವೆ.

ಆರು ಕೋಚ್‌ಗಳನ್ನು ಹೊಂದಿರುವ ಈ ರೈಲನ್ನು ಮಾರ್ಚ್ 13ರಂದು BEML ಸಂಸ್ಥೆಯ ನ್ಯೂ ತಿಪ್ಪಸಂದ್ರ ಘಟಕದಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕೊತ್ತನೂರು ಡಿಪೋಗೆ ತರಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ನಮ್ಮ ಮೆಟ್ರೋದ ಪಿಂಕ್ ಲೈನ್ (ಕಾಳೇನ ಅಗ್ರಹಾರ-ನಾಗವಾರ) 21.26 ಕಿ.ಮೀ ಉದ್ದದ ಪ್ರಮುಖ ಮಾರ್ಗವಾಗಿದ್ದು,ಈ ಮಾರ್ಗವು ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸಲಿದೆ.

ಪ್ರಸ್ತುತ ಈ ರೈಲನ್ನು ಕೊತ್ತನೂರು ಡಿಪೋದಲ್ಲಿನ ಇನ್ಸ್‌ಪೆಕ್ಷನ್ ಬೇ ಲೈನ್ (IBL) ಗೆ ಸ್ಥಳಾಂತರಿಸಿ ಅಗತ್ಯ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪರೀಕ್ಷೆಗಳು ಮತ್ತು ನಿಯಮಾನುಸಾರ ಅನುಮತಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಈ ರೈಲು ಸೇವೆಗೆ ಸಿದ್ಧವಾಗಲಿದೆ.ಸುಮಾರು 7.5 ಕಿಲೋಮೀಟರ್ ಉದ್ದದ ಕಾಳೇನ ಅಗ್ರಹಾರ – ತಾವರೆಕೆರೆಯ ಪಿಂಕ್ ಲೈನ್ ಮಾರ್ಗದಲ್ಲಿ ಮೇ ತಿಂಗಳಲ್ಲಿ ಮೆಟ್ರೋ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಯೋಜಿಸಿದೆ.
ಇದನ್ನು ಓದಿ
ತಾಪಮಾನ ಏರಿಕೆ: ಈ 3 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದ ಹವಾಮಾನ ಇಲಾಖೆ






