ಮಹಾರಾಷ್ಟ್ರ ರಾಜ್ಯದ 7 ಜಿಲ್ಲೆಗಳಲ್ಲಿ ಬುಧವಾರ 20 ಕ್ಕೂ ಹೆಚ್ಚು ಡೆಲ್ಟಾ – ಪ್ಲಸ್ ಸೋಂಕು ಧೃಡಪಟ್ಟಿದೆ. ”ರೂಪಾಂತರಿ ಡೆಲ್ಟಾ – ಪ್ಲಸ್ ಸೋಂಕನ್ನು ಸೂಕ್ಷ್ಮವಾಗಿ ಪತ್ತೆ ಹಚ್ಚುವಿಕೆ ಹಾಗೂ ಹರಡುವುದನ್ನು ತಡೆಗಟ್ಟುವಿಕೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಮಹಾರಾಷ್ಟ್ರ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ಹಾಗೂ ಮೂರನೆಯ ಅಲೆಯ ಆತಂಕದ ನಡುವೆ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ ಕಂಡಿದೆ. ಗುರುವಾರ 10,000 ಹೊಸ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದು, ಒಟ್ಟಾರೆಯಾಗಿ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 120,000 ಕ್ಕೆ ಬಂದು ತಲುಪಿದೆ.
ಸದ್ಯ ಮಹಾರಾಷ್ಟ್ರದ ರತ್ನಗಿರಿ, ಜಾಲ್ಗಾನ್, ಮುಂಬಯಿ, ಪಾಲ್ಗರ್ಹ್,ಸಿಂಧುದುರ್ಗ್ ಮತ್ತು ತಾನೆ ಎಂಬಲ್ಲಿ ಡೆಲ್ಟಾ-ಪ್ಲಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಪ್ರಸ್ತುತ ದೇಶದಲ್ಲಿ ಅತೀ ಹೆಚ್ಚು ಡೆಲ್ಟಾ –ಪ್ಲಸ್ ವೈರಸ್ ಪ್ರಕರಣದ ಸಂಖ್ಯೆಗೆ ಮಹರಾಷ್ಟ್ರ ರಾಜ್ಯವು ಸಾಕ್ಷಿಯಾಗಿದೆ.





