ದೇಶದಲ್ಲಿ ದಿನದಿಂದ ದಿನಕ್ಕೆ ಕ್ರೈಸ್ತರು ಹಾಗು ಕ್ರೈಸ್ತ ಸಂಘ ಸಂಸ್ಥೆಗಳ ಮೇಲಿನ ದಾಳಿಯನ್ನು ತಡೆಯಲು ಸುಪ್ರೀಂ ಕೋರ್ಟ್ ನೀಡಿದ್ದ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ದೇಶಾದ್ಯಂತ ಪ್ರತಿ ತಿಂಗಳು ಕ್ರಿಶ್ಚಿಯನ್ ಸಂಸ್ಥೆ ಹಾಗು ಪಾದ್ರಿಗಳ ಮೇಲೆ ಪ್ರತಿ ತಿಂಗಳು ಸರಾಸರಿ 45-50 ದಾಳಿಗಳು ನಡೆಯುತ್ತಿವೆ. ಮೇ ಒಂದೇ ತಿಂಗಳಲ್ಲಿ 57 ಪ್ರಕರಣಗಳು ದಾಖಲಾಗಿವೆ ಎಂದು ಅರ್ಜಿದಾರರ ಪರ ವಕೀಲ ಕಾಲಿನ್ ಗೊನ್ಸಾಲ್ವಿಸ್ ನ್ಯಾಯಾಲಯೆಕ ಮನವರಿಕೆ ಮಾಡಿದ್ದಾರೆ.

ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೆ.ಬಿ. ಪರ್ದಿವಾಲಾ ಅವರಿದ್ದ ದ್ವಿಸದಸ್ಯ ರಜಾಕಾಲದ ಪೀಠವು ನೀವು ಹೇಳಿದ್ದಂತೆ ದಾಳಿ ನಡೆಯುತ್ತಿದ್ದರೆ ಅದು ದುರದೃಷ್ಟಕರ ಸಂಗತಿ ನಿಮ್ಮ ಕೋರಿಕೆ ಮೇರೆಗೆ ಅರ್ಜಿಯ ವಿಚಾರಣೆಗೆ ಪಟ್ಟಿ ಮಾಡಲಾಗಿದೆ ನೀವು ಅದನ್ನು ಖಚಿತಪಡಿಸಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.
ಮುಂದಿನ ವಿಚಾರಣೆಯನ್ನ ಜುಲೈ 11ಕ್ಕೆ ಮುಂದೂಡಿದೆ. ತೆಹ್ಸೀನ್ ಪೂನಾವಾಲಾ ತೀರ್ಪಿನಲ್ಲಿರುವ ಮಾರ್ಗಸೂಚಿಗಳ ಅನುಷ್ಠಾನ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ರಾಷ್ಟ್ರಾದ್ಯಂತ ಹಲ್ಲೆ ಹಾಗು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಹಾಗು ಎಫ್ ಐ ಆರ್ ದಾಖಲಿಸಲು ನೋಡೆಲ್ ಅಧಿಕಾರಿಗಳನ್ನು ನೇಮಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.










