ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಏನು ಟ್ರೆಂಡ್ ಆಗುತ್ತೆ ಅಂತ ಹೇಳೋದಕ್ಕೆ ಸಾಧ್ಯ ಆಗೋದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯಾವ ಯಾವ ರೀಲ್ಸ್, ಶಾರ್ಟ್ಸ್ ಗಳು ಟ್ರೆಂಡ್ ಆಗುತ್ತೆ ಒಂದು ಚೂರು ಊಹಿಸುವುದಕ್ಕೆ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇವತ್ತು ಸಾಮಾಜಿಕ ಜಾಲತಾಣ ಊಹೆಗೆ ನಿಲುಕದ ಮಾಧ್ಯಮವಾಗಿ ಹೊರಹೊಮ್ಮಿದೆ.
ಸದ್ಯಕ್ಕೆ ನಾವು ಯಾತಕ್ಕಾಗಿ ಈ ವಿಚಾರವನ್ನು ಬರೆಯುತ್ತಿದ್ದೇವೆ ಎಂಬುದು ನಿಮಗೆ ಈಗಾಗಲೇ ಅರ್ಥವಾಗಿರುತ್ತೆ. ಹೌದು ಕಳೆದ ನಾಲ್ಕು-ಐದು ದಿನಗಳಿಂದ ಒಂದು ಹಾಡಿನ ರಿಲ್ಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ ಆ ಹಾಡು ‘ಈ ಸುಂದರನ ಸನ್ಯಾಸಿ ಮಾಡಬಹುದೆ ಎಂಬುವುದು’ ಅನೇಕರು ಈ ಹಾಡಿನ ತುಣಕನ್ನು ಇಟ್ಟುಕೊಂಡು ಶಾರ್ಟ್ಸ್‌ಗಳು ರಿಲ್ಸ್‌ಗಳನ್ನು ಮಾಡ್ತಾ ಇದ್ದಾರೆ. ಆದರೆ ಬಹುತೇಕರಿಗೆ ಈ ಹಾಡಿನ ಮೂಲ ಯಾವುದು? ಪೂರ್ಣ ಹಾಡು ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಹಲವರಿಗೆ ಲಭ್ಯ ಇಲ್ಲ..

ಅಸಲಿಗೆ ಈ ಗೀತೆಯನ್ನು ಹಾಡಿದ್ದು ಖ್ಯಾತ ಗಾಯಕ ಮಳವಳ್ಳಿ ಮಹದೇವಸ್ವಾಮಿ, ಇವರು ಮಂಡ್ಯ ಮೂಲದವರು ಕಳೆದ ಹಲವು ದಶಗಳಿಂದ ವಿವಿಧ ಜಾನಪದ ಗೀತೆಗಳನ್ನ ಹಾಡಿಕೊಂಡು ಬಂದವರು
ಇನ್ನು ಈ ಗೀತೆಯನ್ನ ಝೇಂಕಾರ್ ಮ್ಯೂಸಿಕ್‌ಗಾಗಿ ಅವರು, ಅರ್ಜುನನ ಜೋಗಿ ಪದಗಳು ಎಂಬ ಆಲ್ಬಂಗೆ ಈ ಹಾಡು ಹಾಡಿದ್ದಾರೆ. ಅದರಲ್ಲಿ ಮೂರನೆಯ ಭಾಗದಲ್ಲಿ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡವಹುದೆ ಎನ್ನುವ ಹಾಡು ಇದೀಗ ವೈರಲಾಗಿದೆ.
ಒಟ್ಟಾರೆಯಾಗಿ ಈ ಸುಂದರನ ಸನ್ಯಾಸಿ ಮಾಡಬಹುದೆ ಎಂಬ ಹಾಡು ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದ್ದು ಸಾಕಷ್ಟು ಯುವಜನತೆ ಈ ಹಾಡಿನ ತುಣಕನ್ನ ಬಳಸಿಕೊಂಡು, ನಾನೋ ರೀತಿಯಾದಂತ ವಿಡಿಯೋ ರಿಲ್ಸ್ ಮಾಡ್ತಾ ಇದ್ದು ಇದರ ಬದಲು ಆ ಗೀತೆಯಲ್ಲಿರುವ ಸಾರಾಂಶಗಳನ್ನ ಯುವಕರು ಯುವತಿಯರು ಅರ್ಥಮಾಡಿಕೊಳ್ಳಬೇಕು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗ್ತಾಯಿದೆ