ಆತ್ಮಹತ್ಯೆಗೆ ಶರಣಾದ ಪ್ರೇಮಾ ತಂದೆ ಸುಧಾಕರ್ ಹೇಳಿಕೆ, ಬೆಳಿಗ್ಗೆ ಕಾಲೇಜಿಗೆ ಹೋಗಿದೀನಿ ಅಂತಾ ಫೋನ್ ಮಾಡಿದ್ಲು, ನಂತರ ಕೆಳಗಿ ಬಿದ್ದು ಸಾವನ್ನಪ್ಪಿದ್ದಾಳೆ ಅಂತಾ ಕಾಲೇಜಿಂದ ಫೋನ್ ಬಂತು, ತರುಣ್ ಎಂಬ ಹುಡುಗ ಚಾಕು ಫೋಟೋ ಕಳ್ಸಿ ಬೆದರಿಸಿದ್ದಕ್ಕೆ ಹೀಗೆ ಮಾಡಿ ಕೊಂಡಿದಾಳೆ

ನನ್ನ ಮಗಳು ಇನ್ನೋಸೆಂಟ್ ಅವಳ ಮೇಲೆ ಪ್ರಾಣ ಇಟ್ಟಿದ್ದೆ, ನನ್ನ ಹೆಂಡತಿಗೆ ಆಗಿದ್ರೂ ಇಷ್ಟು ನೋವು ಬೀಳ್ತಿರಲಿಲ್ಲ, ದುಃಖ ತಪ್ತ ಪ್ರೇಮಾ ತಂದೆ ಸುಧಾಕರ್ ಹೇಳಿಕೆ.
ಕಟ್ಟಡ ಮೇಲಿಂದ ಬಿದ್ದು ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವನಪ್ಪಿದ್ದಾಳೆ. ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಚಿತ್ರದುರ್ಗ ನಗರದ ಚಿತ್ರಾ ಡಾನ್ ಬೋಸ್ಕೋ ಕಾಲೇಜಲ್ಲಿ ಘಟನೆ. ಚಿಕಿತ್ಸೆ ಫಲಕಾರಿಯಾಗದೆ ಬಸವೇಶ್ವರ ಆಸ್ಪತ್ರೆಯಲ್ಲಿ ಪ್ರೇಮಾ ಸಾವು.

ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಚಿತ್ರದುರ್ಗದ ಮೆದೆಹಳ್ಳಿ ನಿವಾಸಿ ಪ್ರಥಮ ಬಿಸ್ಸಿ ಓದುತ್ತಿದ್ದ ಪ್ರೇಮಾ. ಬೆಳಗ್ಗೆ ಕಾಲೇಜಿಗೆ ಬಂದು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ. ಸ್ಥಳಕ್ಕೆ ಬಡಾವಣೆ ಪೊಲೀಸ್ ಠಾಣೆ PSI ರಘು ಬೇಟಿ ಪರಿಶೀಲನೆ.

ಯುವಕನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ.?
ವಿದ್ಯಾರ್ಥಿನಿಗೆ ಪ್ರೀತಿ ಮಾಡುವಂತೆ ಪೀಡುಸುತ್ತಿದ್ದಾಗಿ ಪೊಷಕರ ಆರೋಪ. ವಿದ್ಯಾರ್ಥಿನಿಗೆ ವಾಟ್ಸಪ್ನಲ್ಲಿ ನಿತ್ಯವೂ ಚಾಟಿಂಗ್ ಮಾಡಿ ಕಿರಿಕಿರಿ. ಯುವಕನ ಟಾರ್ಚರ್ ಗೆ ಬೇಸತ್ತು ಪ್ರೇಮಾ ಆತ್ಮಹತ್ಯೆ ಮಾಡಿಕೊಂಡ ಆರೋಪ. ವಿದ್ಯಾರ್ಥಿನಿಗೆ ಟಾರ್ಚರ್ ನೀಡಿದ ಯುವಕನ ಕುರಿತು ಪೊಲೀಸರ ತನಿಖೆ. ಯುವಕ ತರುಣ್ ಎಂಬುವನನ್ನ ವಶಕ್ಕೆ ಪಡೆದು ಪೊಲೀಸರ ವಿಚಾರಣೆ. ಚಿತ್ರದುರ್ಗ ಬಡಾವಣೆ ಪೊಲೀಸರಿಂದ ತೀವ್ರ ವಿಚಾರಣೆ.