ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಲೈಫ್ ಸ್ಟೈಲ್ ತುಂಬಾನೇ ಬ್ಯುಸಿಯಾಗಿದೆ, ತಮ್ಮ ಕಡೆ ತಾವು ಗಮನವನ್ನು ಕೊಡಲು ಕೂಡ ಟೈಮ್ ಇರುವುದಿಲ್ಲ .ಇದರಿಂದ ಮೆಂಟಲ್ ಸ್ಟ್ರೆಸ್ ಹಾಗೂ ಫಿಸಿಕಲ್ ಸ್ಟ್ರೆಸ್ ಹೆಚ್ಚಾಗುತ್ತದೆ. ಆಫೀಸ್ ಟೆನ್ಶನ್ ಮನೆಯಲ್ಲಿ ಪ್ರಾಬ್ಲಮ್ ಹೀಗೆ ಸಾಕಷ್ಟು ಒತ್ತಡಕ್ಕೆ ಒಳಗಾದಾಗ ಮನುಷ್ಯನಲ್ಲಿ ಸ್ಟ್ರೆಸ್ ಹಾರ್ಮೋನ್ ರಿಲೀಸ್ ಆಗುತ್ತೆ.ಸ್ಟ್ರೆಸ್ ಹಾರ್ಮೋನ್ ರಿಲೀಸ್ ಆದಾಗ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತದೆ. ಹಾಗೂ ಆ ಬದಲಾವಣೆಗಳ ಮುಖ್ಯ ಸಿಂಪ್ಟಮ್ಸ್ ಗಳು ಯಾವುದು ಎಂಬುದರ ಮಾಹಿತಿ ಹೀಗಿದೆ.
ತೂಕ ಹೆಚ್ಚಾಗುತ್ತದೆ
ದೇಹದಲ್ಲಿ ಸ್ಟ್ರೆಸ್ ಹಾರ್ಮೋನ್ ರಿಲೀಸ್ ಆದಾಗ ಇದ್ದಕ್ಕಿದ್ದಾಗೆ ತೂಕ ಹೆಚ್ಚಾಗುತ್ತದೆ, ಕೆಲವೇ ದಿನಗಳಲ್ಲಿ ಎರಡರಿಂದ ಮೂರು ಕೆಜಿ ಎಷ್ಟು ತೂಕ ಜಾಸ್ತಿ ಆಗುತ್ತದೆ. ಅದರಲ್ಲೂ ಫ್ಯಾಟ್ ಹೆಚ್ಚಾಗುತ್ತದೆ.
ಮೂಡ್ ಸ್ವಿಂಗ್ಸ್
ಈ ಸ್ಟ್ರೆಸ್ ಹಾರ್ಮೋನ್ಸ್ ಇಂದಾಗಿ ಮೂಡ್ ಸ್ವಿಂಗ್ಸ್ ಜಾಸ್ತಿಯಾಗುತ್ತದೆ. ಇದರಿಂದ ಇದ್ದಕ್ಕಿದ್ದ ಹಾಗೆ ಕೋಪ,ಹಠ,ದುಃಖ, ಡಿಪ್ರೆಶನ್ ,ಆಂಕ್ಸಿಟಿ ಎಲ್ಲವೂ ಕೂಡ ಜಾಸ್ತಿಯಾಗುತ್ತದೆ.
ಜೀರ್ಣಕ್ರಿಯ ಸಮಸ್ಯೆ
ಈ ಹಾರ್ಮೋನ್ ಗಳಿಂದಾಗಿ ಊಟ ತಿಂಡಿ ಸರಿಯಾಗಿ ಸೇರುವುದಿಲ್ಲ ಅದರಲ್ಲೂ ಜೀರ್ಣಕ್ರಿಯೆ ಸಮಸ್ಯೆ ಎದುರಾಗುತ್ತದೆ .ಹಾಗೂ ಮುಖ್ಯವಾಗಿ ಕಾನ್ಸ್ಟಿಪೇಶನ್ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆ ಕಾಡುತ್ತದೆ.
ಚರ್ಮ ಹಾಗೂ ಕೂದಲು
ಸ್ಟ್ರೆಸ್ ಹಾರ್ಮೋನ್ ಇಂದಾಗಿ ತ್ವಚೆಯಲ್ಲಿ ಮೊಡವೆಗಳು ಹೆಚ್ಚಾಗುತ್ತದೆ, ಮುಖ ಬೇಗನೆ ಸುಕ್ಕುಗಟ್ಟುತ್ತದೆ, ಡಾರ್ಕ್ ಸರ್ಕಲ್ಸ್ ಜಾಸ್ತಿಯಾಗುತ್ತದ. ಹಾಗೂ ಹೇರ್ ಫಾಲ್ ಸಮಸ್ಯೆಯೂ ಕೂಡ ಎದುರಾಗುತ್ತದೆ.