ಗದಗದಲ್ಲಿ (Gadag) ಮೂರು ವರ್ಷದ ಕಂದಮ್ಮನ ಮೇಲೆ ಶ್ವಾನ (Stray dogs) ಭೀಕರ ದಾಳಿ ನಡೆಸಿದೆ. ಗದಗ ನಗರದ ರೆಹಮತ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.ಅದ್ವಿಕ್ ಬೂದಿಹಾಳ (3) ಎಂಬ ಮಗುವಿನ ಮೇಲೆ ಹೀಗೆ ಶ್ವಾನ ದಾಳಿ ಮಾಡಿದೆ.

ಮನೆಯ ಬಳಿ ಬಂದ ಸಿಲಿಂಡರ್ ಡಿಲೆವರಿ ಪಡೆದು ಪಾಲಕರು ಒಳಗೆ ಹೋದಾಗ ಮಗು ಹೊರಗೆ ಉಳಿದಿತ್ತು. ಇದನ್ನು ಕಂಡ ಶ್ವಾನ ಮಗುವಿನ ಮೇಲೆ ದಾಳಿ ನಡೆಸಿದೆ. ಶ್ವಾನ ದಾಳಿಯಿಂದ ಮಗುವಿನ ಕತ್ತು ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಸದ್ಯ ಗಾಯಾಳು ಮುಗುವಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನ ಕೊಡಿಗೆಹಳ್ಳಿ ಸಮೀಪ ಬೀದಿ ನಾಯಿಗಳ ದಾಳಿಗೆ 63 ವಫ್ಷದ ವೃದ್ಧ ಸೀತಪ್ಪ ಮೃತಪಟ್ಟಿದ್ದರು. ಬೆಳಗ್ಗಿನ ಜಾವ ಮೂರು ಗಂಟೆ ಸುಮಾರಿಗೆ ಒಬ್ಬಂಟಿಯಾಗಿ ನಡೆದು ಸಾಗುತ್ತಿದ್ದ ಸೀತಪ್ಪ ಎಂಬ ವೃದ್ಧನ ಮೇಲೆರಗಿದ ಶ್ವಾನಗಳು ಭೀಕರ ದಾಳಿ ನಡೆಸಿದ್ದವು.












