ಕೋಲಾರ(Kolar) ಕ್ಷೇತ್ರದ ಟಿಕೆಟ್ ಹಂಚಿಕೆ ಕಾಂಗ್ರೆಸ್ (ಕಾಂಗ್ರೆಸ್) ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಬಹಳ ದಿನಗಳಿಂದ ದೆಹಲಿಯಲ್ಲಿ(Delhi) ಈ ಹಗ್ಗ ಜಗ್ಗಾಟ ನಡೆದಿದ್ದು ಇದೀಗ ಕ್ಲೈಮಾಕ್ಸ್ ಹಂತ ತಲುಪಿದ್ದು , ಕೋಲಾರ ಭಾಗದ ಶಾಸಕರು(MLA) ಮತ್ತು ಸಚಿವರ (Minister) ನಡೆ ಕಾಂಗ್ರೆಸ್ ಪಾಳಯಕ್ಕೆ ಶಾಕ್ ನೀಡಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್(Ramesh Kumar) ಬಣ ಮತ್ತು ಸಚಿವ ಮುನಿಯಪ್ಪನವರ (KH muniyappa) ಬಣದ ನಡುವೆ ತೀವ್ರ ತಿಕ್ಕಾಟ ಏರ್ಪಟ್ಟಿದೆ.
ಒಂದುವೇಳೆ ಕೆ.ಹೆಚ್. ಮುನಿಯಪ್ಪ ಕೇಳಿರುವಂತೆ ಅವರ ಅಳಿಯನಿಗೆ ಟಿಕೆಟ್ (Ticket) ನೀಡೋದಾದ್ರೆ ತಾವು ರಾಜೀನಾಮೆ ನೀಡೋದಾಗಿ ಸಚಿವ ಎಂ.ಸಿ.ಸುಧಾಕರ್ (MC Sudhakar) ಈಗಾಗಲೇ ನಾಯಕರಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಭಾಗದ ೫ ಶಾಸಕರು ಕೂಡ ರಾಜೀನಾಮೆ ನೀಡಲಿದ್ದಾರೆ ಎಂದು ಸಿಎಂ (cm)ಮತ್ತು ಡಿಸಿಎಂ(Dcm) ಗೆ ಸಂದೇಶ ರವಾನಿಸಿದ್ದಾರೆ. ಕೋಲಾರ ಬಣ ಬಡಿದಾಟ ತಡೆಯುವಲ್ಲಿ ಸ್ವತಃ ಸಿಎಂ ಮತ್ತು ಡಿಸಿಎಂ ಕೂಡ ವಿಫಲರಾಗಿದ್ದಾರೆ.
ಇತ್ತು, ಇದೇ ಹಾದಿಯಲ್ಲಿ ಖುದ್ದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ (Naseer ahemad)ಕೂಡ ತಮ್ಮ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಸಭಾಪತಿಗಳ ಬಳಿ ಸಮಯ ಕೇಳಿದ್ದಾರೆ. ಮುನಿಯಪ್ಪನವರ ಬಣಕ್ಕೆ ಟಿಕೆಟ್ ಕೊಟ್ಟರೆ ಭಾರೀ ನಷ್ಟ ಅನುಭವಿಸಬೇಕಾಗುತ್ತೆ ಎಂಬ ಸಂದೇಶವನ್ನ ಸಿಎಂ,ಡಿಸಿಎಂ ಮತ್ತು ಹೈಕಮಾಂಡ್ (Highcommand) ಈ ಮೂಲಕ ಎಲ್ಲಾ ನಾಯಕರು ರವಾನಿಸಿದ್ದಾರೆ. ಸದ್ಯ ಈ ಎಲ್ಲರನ್ನೂ ರಾಜೀನಾಮೆ ನೀಡದಂತೆ ತಡೆದಿದ್ದು , ಚರ್ಚೆ ಮಾಡ್ತೀವಿ ಆತುರ ಪಡಬೇಡಿ ಎಂದು ತಾತ್ಕಾಲಿಕವಾಗಿ ಸುಮ್ಮನಾಗಿಸುವ ಪ್ರಯತ್ನ ಮಾಡಿದೆ.