ಬೆಂಗಳೂರು: ಸಂಗೀತ ನಿರ್ದೇಶಕರಾಗಿರೋ ಅರ್ಜನ್ ಜನ್ಯ ನಿರ್ದೇಶನದ ಮೊದಲ ಚಿತ್ರವೂ ಆಗಿರೋ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ನಟಿಸಿರುವ ’45’ ಸಿನಿಮಾ ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲು ಸಜ್ಜಾಗುತ್ತಿದೆ.
‘ಜೀ’ ಸಂಸ್ಥೆಯು ’45’ ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಿದೆ. ಈ ಕುರಿತು ಜೀ5ಕನ್ನಡ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
“ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಜೀ5ನಿಂದ ವಿಶೇಷ ಉಡುಗೊರೆ. ಜ.23 ರಿಂದ ಜೀ5ನಲ್ಲಿ ’45’ ಸಿನಿಮಾ ವೀಕ್ಷಣೆಗೆ ಸಿಗುತ್ತಿದೆ” ಎಂದು ಮಾಹಿತಿ ನೀಡಿದೆ. ಇದರ ಜತೆಗೆ 45 ಸಿನಿಮಾದ ಟ್ರೇಲರ್ ಹಂಚಿಕೊಳ್ಳಲಾಗಿದೆ.
ಗರುಡ ಪುರಾಣದ ಸಾರಾಂಶ ಇರುವ ’45’ ಸಿನಿಮಾ ಸಾವು-ಬದುಕಿನ ನಡುವಿನ ಕಥೆ ಹೊಂದಿದೆ. ಈ ಸಿನಿಮಾವನ್ನು ಎಂ.ರಮೇಶ್ ರೆಡ್ಡಿ ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ಡಿ.25ರಂದು ಸಿನಿಮಾ ಬಿಡುಗಡೆಯಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಹಿಟ್ ಆಗಲಿಲ್ಲ. ಹೀಗಾಗಿ ಸಿನಿಮಾ ಒಂದೇ ತಿಂಗಳಲ್ಲಿ ಒಟಿಟಿಗೆ ಬರುತ್ತಿದೆ.











