• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಾಣ ಹೋದರೂ ಚಿಂತೆಯಿಲ್ಲ : ತಹಶೀಲ್ದಾರ್ ಕಚೇರಿ ಮುತ್ತಿಗೆಯ ಎಚ್ಚರಿಕೆ ನೀಡಿದ ತಳವಾರ ಸಮಾಜ..

ಎಸ್.ಟಿ ಪ್ರಮಾಣ ಪತ್ರಕ್ಕಾಗಿ ಫೆ.23ಕ್ಕೆ ಅಫಜಲಪುರ ತಹಶೀಲ್ದಾರ ಕಚೇರಿಗೆ ಮುತ್ತಿಗೆ-ಸಂತೋಷ ತಳವಾರ

ಪ್ರತಿಧ್ವನಿ by ಪ್ರತಿಧ್ವನಿ
February 17, 2026
in Top Story, ಕರ್ನಾಟಕ, ರಾಜಕೀಯ
0
ಪ್ರಾಣ ಹೋದರೂ ಚಿಂತೆಯಿಲ್ಲ : ತಹಶೀಲ್ದಾರ್ ಕಚೇರಿ ಮುತ್ತಿಗೆಯ ಎಚ್ಚರಿಕೆ ನೀಡಿದ ತಳವಾರ ಸಮಾಜ..
Share on WhatsAppShare on FacebookShare on Telegram

ಅಫಜಲಪುರ: ಪಟ್ಟಣದಲ್ಲಿ ಫೆಬ್ರುವರಿ 23 ರಂದು ತಳವಾರ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮುಖಾಂತರ ತಹಶೀಲ್ದಾರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘ ರಾಜ್ಯ ಸಮಿತಿ ತಾಲೂಕು ಅಧ್ಯಕ್ಷ ಸಂತೋಷ ತಳವಾರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ADVERTISEMENT
Dinesh Gundu Rao  ದಕ್ಷಿಣ ಕನ್ನಡ  ದಲ್ಲಿ ದ್ವೇಷ ರಾಜಕಾರಣಕ್ಕೆ ಕೋಮುವಾದ ಆಗ್ತಿದೆ #pratidhvani #dineshgundurao

ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕೇಂದ್ರ ಸರ್ಕಾರ ತಳವಾರ ಪರಿವಾರದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು ಎಂದು 3 ವರ್ಷಗಳ ಹಿಂದೆಯೇ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನೈಜ ತಳವಾರರಿಗೆ ಎಸ್.ಟಿ ಪ್ರಮಾಣ ಪತ್ರ ನೀಡದೆ ಅನ್ಯಾಯವೆಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 10 ತಿಂಗಳುಗಳಿಂದ ಕಲಬುರಗಿ ಜಿಲ್ಲೆಯ ತಳವಾರರಿಗೆ ಎಸ್.ಟಿ ಪ್ರಮಾಣ ಪತ್ರ ನೀಡುತ್ತಿಲ್ಲ. ಅಫಜಲಪುರ ತಾಲೂಕಿನಲ್ಲಿ ತಹಶೀಲ್ದಾರ ಕಚೇರಿಯಿಂದ ಎಸ್.ಟಿ ಪ್ರಮಾಣ ಪತ್ರ ನೀಡುತ್ತಿಲ್ಲ. ಯಾವುದೇ ಕಾರಣವಿಲ್ಲದೇ ತಳವಾರರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಸರಕಾರದ ಧೋರಣೆ ಖಂಡಿಸಿ ಫೆ.23 ರಂದು  ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮಾಡುವ ಮುಖಂತರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Karnataka Railway: ಬೆಂಗಳೂರು ಸೇರಿ ರಾಜ್ಯದ ರೈಲ್ವೆ ಯೋಜನೆಗಳಿಗೆ ವೇಗ: ಸಚಿವ ವಿ.ಸೋಮಣ್ಣ ಮಾಹಿತಿ

ನಮ್ಮ ಸಮುದಾಯಕ್ಕೆ ಹಲವು ದಿನಗಳಿಂದಲೂ ಅನ್ಯಾಯ ಮಾಡುತ್ತ ಬಂದಿರುವ ಅಧಿಕಾರಿಗಳ ಹಾಗೂ ಸರ್ಕಾರದ ವಿರುದ್ದ ನಾವು ಧರಣಿ ಸತ್ಯಾಗ್ರಹ ಮಾಡಲಿದ್ದೆವೆ. ನಮ್ಮ ಬದುಕಿಗಾಗಿ ನಮ್ಮ ಹೋರಾಟ ಅನಿವಾರ್ಯವಿದೆ. ಎಸ್.ಟಿ ಪ್ರಮಾಣ ಪತ್ರ ನೀಡಲು ಅಫಜಲಪುರ ತಾಲೂಕು ಅಧಿಕಾರಿಗಳು ಇಲ್ಲಸಲ್ಲದ ಕಾರಣ ಹೇಳಿ ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ

ಯಾರಾದರೂ ತಳವಾರ ಅಲ್ಲದವರು ಎಸ್.ಟಿ ಪ್ರಮಾಣ ಪತ್ರ ತಗೆದುಕೊಳ್ಳುತ್ತಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ. ಆದರೆ ನೈಜ ತಳವಾರರಿಗೆ ಯಾಕೆ ಆನ್ಯಾಯ ಮಾಡುತ್ತಿದ್ದಿರಿ?. ಬರುವ ಫೆ.23 ರಂದು ನಡೆಯಲಿರುವ ಹೋರಾಟದಲ್ಲಿ ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ ನಮ್ಮ ಹಕ್ಕು ಪಡೆದುಕೊಳ್ಳುತ್ತೆವೆ. ಆದ್ದರಿಂದ ಸಮಸ್ತ ಅಫಜಲಪುರ ತಳವಾರ ಸಮಾಜದ ಬಂಧುಗಳು ಹೋರಾಟದಲ್ಲಿ ಭಾಗಿಯಾಗಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

ಈ ವೇಳೆ ಸಮುದಾಯದ ಮುಖಂಡರಾದ ಸಂತೋಷ ಘೂಳನೂರ, ರವೀಂದ್ರ ಜಮಾದಾರ, ಶರಣು ದಿವಾಣಜಿ, ಮಹಾಂತಗೌಡ ಗೌಡ, ಪುಂಡಲೀಕ ಆನೂರ, ಶರಣು ನಾಯ್ಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags: CM SiddaramaiahCongress GovernmentKALABURAGI NewsKarnataka GovernmentKrishna ByregowdaPratidhvaniPriyank KhargeRevenue Departmentscheduled tribeST certificatest reservationTalawar Ç̧ommunityValmiki Community
Previous Post

Karnataka Railway: ಬೆಂಗಳೂರು ಸೇರಿ ರಾಜ್ಯದ ರೈಲ್ವೆ ಯೋಜನೆಗಳಿಗೆ ವೇಗ: ಸಚಿವ ವಿ.ಸೋಮಣ್ಣ ಮಾಹಿತಿ

Next Post

Rahul Gandhi: ಕರ್ನಾಟಕ ಹೈಕೋರ್ಟ್​ನಲ್ಲಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಪ್ರಕರಣದ ವಿವರ ಇಲ್ಲಿದೆ..!

Related Posts

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?
ರಾಜಕೀಯ

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?

by ಪ್ರತಿಧ್ವನಿ
May 22, 2026
0

ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಆತ್ಮೀಯ ಬಾಂಧವ್ಯ ಇದೀಗ ಜಾಗತಿಕ ರಾಜತಾಂತ್ರಿಕ ವಲಯದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ...

Read moreDetails
ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

May 22, 2026
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

May 21, 2026
ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

May 21, 2026
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
Next Post
Rahul Gandhi: ಕರ್ನಾಟಕ ಹೈಕೋರ್ಟ್​ನಲ್ಲಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಪ್ರಕರಣದ ವಿವರ ಇಲ್ಲಿದೆ..!

Rahul Gandhi: ಕರ್ನಾಟಕ ಹೈಕೋರ್ಟ್​ನಲ್ಲಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ಪ್ರಕರಣದ ವಿವರ ಇಲ್ಲಿದೆ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada