ಲಕ್ನೊ ಸೂಪರ್ ಗೈಂಟ್ಸ್ ನಾಯಕ ಕೆಎಲ್ ರಾಹುಲ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಐಪಿಎಲ್ ನಲ್ಲಿ ಅತೀ ಹೆಚ್ಚು ಅರ್ಧಶತಕದ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.
ಅಹಮದಾಬಾದ್ ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ 50 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 68 ರನ್ ಗಳಿಸಿ ಔಟಾದರು. ಈ ಮೂಲಕ ರಾಹುಲ್ ಟಿ-20ಯಲ್ಲಿ 50 ಅರ್ಧಶತಕ ಗಳಿಸಿದ 5ನೇ ಭಾರತೀಯ ಎನಿಸಿಕೊಂಡರು.

ಟಿ-20ಯಲ್ಲಿ 50ಕ್ಕಿಂತ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ವಿರಾಟ್ ಕೊಹ್ಲಿ, ಶಿಖರ್ ಧವನ್, ಸುರೇಶ್ ರೈನಾ ಮತ್ತು ರೋಹಿತ್ ಶರ್ಮ ಗುಂಪಿನಲ್ಲಿ ಸ್ಥಾನ ಗಳಿಸಿದರು. ವಿರಾಟ್ ಕೊಹ್ಲಿ 328 ಪಂದ್ಯಗಳಲ್ಲಿ 78 ಫಿಫ್ಟಿ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮ 372 ಪಂದ್ಯಗಳಲ್ಲಿ 72 ಅರ್ಧಶತಕದೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ.
ಶಿಖರ್ ಧವನ್ 305 ಪಂದ್ಯಗಳಿಂದ 69, ಸುರೇಶ್ ರೈನಾ 336 ಪಂದ್ಯಗಳಿಂದ 53, ಕೆಎಲ್ ರಾಹಿಲ್ 175 ಪಂದ್ಯಗಳಿಂದ 50 ಅರ್ಧಶತಕ ಗಳಿಸಿ ನಂತರದ ಸ್ಥಾನಗಳಲ್ಲಿದ್ದಾರೆ.
ಐಪಿಎಲ್ ನಲ್ಲಿ 28ನೇ ಶತಕ ಗಳಿಸುವ ಮೂಲಕ ಅತೀ ಹೆಚ್ಚು ಅರ್ಧಶತಕ ಗಳಿಸಿ 9ನೇ ಸ‍್ಥಾನದಲ್ಲಿರುವ ಅಜಿಂಕ್ಯ ರಹಾನೆ ಜೊತೆ ಜಂಟಿ ಸ್ಥಾನ ಪಡೆದರು. ಡೇವಿಡ್ ವಾರ್ನರ್ 49 ಅರ್ಧಶತಕ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.