ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ತುಂಬಾನೆ ಅಗತ್ಯ, ಕಾರಣ ಈ ಆಹಾರದಿಂದ ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳು ಸೇರುತ್ತದೆ. ಹಾಗಾಗಿ ಪ್ರತಿನಿತ್ಯ ನಾವು ನಮ್ಮ ಡಯಟ್ ನಲ್ಲಿ ಹಣ್ಣು ,ತರಕಾರಿಗಳನ್ನ ಹೆಚ್ಚಿನ ಮಟ್ಟದಲ್ಲಿ ಸೇವಿಸುವುದು ಉತ್ತಮ. ಇದರ ಜೊತೆಗೆ ಮೊಳಕೆ ಕಾಳುಗಳನ್ನ ಕೂಡ ತಿನ್ನಬೇಕು.ಇದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.

ಹುರುಳಿಯನ್ನ ಮೊಳಕೆ ಕಟ್ಟಬಹುದು, ಕಡಲೆ ಕಾಳುಗಳನ್ನ ಮೊಳಕೆ ಕಟ್ಟಿ ಸೇವಿಸುವುದು ಉತ್ತಮ, ಹೆಸರು ಕಾಳುಗಳನ್ನು ಕೂಡ ಮೊಳಕೆ ಕಟ್ಟಬಹುದು ಹೀಗೆ ಮೆಂತೆ, ಕಡಲೆ ಬೀಜ ಕೂಡವನ್ನ ಕೂಡ ಮೊಳಕೆ ಕಟ್ಟಿ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳಿವೆ ನೀವೇ ನೋಡಿ.

ಪ್ರೋಟೀನ್
ಮೊಳಕೆ ಕಾಳುಗಳನ್ನ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಅಂಶ ಸಿಗುತ್ತದೆ. ಇದರಿಂದ ಮೂಳೆಗಳಿಗೂ ಒಳ್ಳೆಯದು ಹಾಗೂ ಮಜಲ್ಸ್ ಬಿಲ್ಡ್ ಆಗೋದಕ್ಕೂ ತುಂಬಾನೇ ಸಹಾಯಕಾರಿ.

ವಿಟಮಿನ್ ಅಂಶ
ಸ್ಪ್ರೌಟ್ಸ್ ನಲ್ಲಿ ವಿಟಮಿನ್ ಅಂಶಗಳು ಹೆಚ್ಚಿರುತ್ತದೆ.ಅದರಲ್ಲೂ ವಿಟಮಿನ್ ಬಿ , ಸಿ , ಹಾಗೂ ಇ ದೇಹಕ್ಕೆ ಒದಗುವುದರಿಂದ..ಕಣ್ಣಿಗೆ,ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ..
ಖನಿಜಾಂಶಗಳು
ಮೊಳಕೆ ಕಾಳುಗಳಲ್ಲಿರುವಂತಹ ಖಾನಿಜಾಂಶಗಳು ಅಂದ್ರೆ ಕ್ಯಾಲ್ಸಿಯಂ, ಕಬ್ಬಿನಾಂಶ,ಝಿಂಕ್ ನಂತಹ ಸಾಕಷ್ಟು ಅಂಶಗಳು ದೇಹಕ್ಕೆ ಒದಗುತ್ತದೆ.

ಫೈಬರ್
ಮೊಳಕೆ ಕಾಳುಗಳಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ. ಇವುಗಳಿಂದ ಜೀರ್ಣಕ್ರಿಯೆ ಸಮಸ್ಯೆ ಇದ್ರೆ ನಿವಾರಣೆ ಆಗುತ್ತದೆ.ಹಾಗೂ ಕಾನ್ಸ್ಟಿಪೇಶನ್ ತೊಂದರೆ ಕೂಡ ಕಡಿಮೆಯಾಗುತ್ತದೆ.










