ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ಸೇವಿಸುವ ಆಹಾರ ತುಂಬಾನೇ ಮುಖ್ಯ.ಆಹಾರದಲ್ಲಿ ದೇಹಕ್ಕೆ ಅಗತ್ಯ ಇರುವಂತಹ ಪೋಷಕಾಂಶಗಳು ಇರಬೇಕು. ಅದರ ಜೊತೆಗೆ ಯಾವುದು ಕೂಡ ಅತಿ ಆಗಬಾರದು ಕೆಲವರು ತುಂಬಾ ಸೆಪ್ಪೆಯಾಗಿ ತಿಂದ್ರೆ ಇನ್ನು ಕೆಲವರು ಸಿಹಿ ಇರುವಂತ ಆಹಾರವನ್ನ ಹೆಚ್ಚು ಸೇವಿಸ್ತಾರೆ, ಹೆಚ್ಚಿನ ಜನ ತುಂಬಾನೇ ಕಾರವಿರುವಂತಹ ಆಹಾರವನ್ನ ಸೇವಿಸ್ತಾರೆ. ಅತಿಯಾಗಿ ಕಾರ ತಿಂದ್ರೆ ಆ ಕ್ಷಣಕ್ಕೆ ಭಾಯಿ ನಾಲಿಗೆ ಉರಿಯಲ್ಲದೇ ಕಣ್ಣು ಮೂಗಿನಲ್ಲಿ ನೀರು ಸುರಿಯುತ್ತದೆ..ಇದರ ಜೊತೆಗೆ ಶಾರ್ಟ್ ಟರ್ಮ್ ಹಾಗೂ ಲಾಂಗ್ ಟರ್ಮ್ ಸೈಡ್ ಎಫೆಕ್ಟ್ಸ್ ಹೆಚ್ಚಿರುತ್ತದೆ..
ಹುಣ್ಣು
ಹೆಚ್ಚು ಕಾರವನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧ ಪಟ್ಟ ಕಾಯಿಲೆಗಳು ಹೆಚ್ಚಾಗುತ್ತದೆ.ಅದರಲ್ಲಿ ಹೊಟ್ಟೆ ಹುಣ್ಣು ಕೂಡ ಒಂದು..ಇದು ಲಾಂಗ್ ಟರ್ಮ್ ಸೈಡ್ ಎಫೆಕ್ಟ್..
ಡೈಜೆಸ್ಟಿವ್ ಪ್ರಾಬ್ಲಮ್
ಮಸಾಲೆ ಹೆಚ್ಚಿರುವ ಪದಾರ್ಥಗಳನ್ನು ಸೇವಿಸುವುದರಿಂದ ಡೈಜೆಸ್ಟಿವ್ ಪ್ರಾಬ್ಲಮ್ ಹೆಚ್ಚಾಗುತ್ತದೆ.ಅದರಲ್ಲು ಕರುಳಿನ ಸಹಲಕ್ಷಣಗಳಂತಹ ದೀರ್ಘಕಾಲದ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಹೊಟ್ಟೆ ನೋವು
ಮಸಾಲೆಯುಕ್ತ ಆಹಾರದಲ್ಲಿರುವ ಕ್ಯಾಪ್ಸೈಸಿನ್ ,ದಿನವಿಡಿ ಹೊಟ್ಟೆ ನೋವು ಮತ್ತು ಅತಿಸಾರವನ್ನು ಹಾಗೂ ಸೆಳೆತ ಉಂಟುಮಾಡಬಹುದು.ಈ ಸಮಸ್ಯೆ ಇಲ್ಲ ವಯಸ್ಸಿನವರಲ್ಲೂ ಕಂಡು ಬರುತ್ತವೆ..ಆದ್ರೆ ಈ ಸಮಸ್ಯೆ ಹೆಚ್ಚು ದಿನವಿರುವುದಿಲ್ಲ.
ಪೌಷ್ಟಿಕಾಂಶದ ಕೊರತೆ
ಮಸಾಲೆ ಅಂಶ ಅತಿಯಾದ್ರೆ ಹಸಿವು ಕಡಿಮೆಯಾಗಬಹುದು, ಮುಖ್ಯ ಇದು ಪೌಷ್ಟಿಕಾಂಶದ ಕೊರತೆಯನ್ನು ಉಂಟುಮಾಡುತ್ತದೆ.ಇದರಿಂದ ದೇಹದಲ್ಲಿ ಇತರೇ ಸಮಸ್ಯೆಗಳು ಹೆಚ್ಚಾಗುತ್ತದೆ.
ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್:
ಮಸಾಲೆಯುಕ್ತ ಆಹಾರವು ಅನ್ನನಾಳಕ್ಕೆ ತೊಂದರೆ ಉಂಟುಮಾಡುತ್ತದೆ.. ಮತ್ತು ಹೊಟ್ಟೆಯ ಆಮ್ಲವು ಮತ್ತೆ ಹರಿಯುವಂತೆ ಮಾಡುತ್ತದೆ.ಐದರಿಂದ ಇದೇ ಉರಿ,ಗ್ಯಾಸ್ಟ್ರಿಕ್,ಅತಿಯಾದ ತೇಗು ಕಾಡುತ್ತದೆ.