• Home
  • About Us
  • ಕರ್ನಾಟಕ
Sunday, February 1, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ರಾಹುಲ್‌ ಗಾಂಧಿಗೆ ಸೂಕ್ತ ಹುಡುಗಿ ಹುಡುಕಿಕೊಡಿ: ಹರಿಯಾಣ ರೈತ ಮಹಿಳೆ ಪ್ರಶ್ನೆಗೆ ಸೋನಿಯಾ ಉತ್ತರ

ಪ್ರತಿಧ್ವನಿ by ಪ್ರತಿಧ್ವನಿ
July 29, 2023
in ದೇಶ, ರಾಜಕೀಯ
0
ರಾಹುಲ್‌ ಗಾಂಧಿ
Share on WhatsAppShare on FacebookShare on Telegram

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿವಾಹದ ವಿಚಾರ ಮತ್ತೆ ಪ್ರಸ್ತಾಪವಾಗಿದೆ. ಹರಿಯಾಣದ ರೈತ ಮಹಿಳೆಯರು ಇತ್ತೀಚೆಗೆ ದೆಹಲಿಯ ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ದೆಹಲಿಯ ನಿವಾಸಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಶನಿವಾರ (ಜು.29) ವರದಿಯಾಗಿದೆ.

ADVERTISEMENT

ಸೋನಿಯಾ ನಿವಾಸಕ್ಕೆ ಆಗಮಿಸಿದ ಹರಿಯಾಣದ ರೈತ ಮಹಿಳೆಯರಲ್ಲಿ ಒಬ್ಬರು ರಾಹುಲ್ ಅವರಿಗೆ ಮದುವೆ ಮಾಡಿ ಎಂದು ಕೇಳಿದ್ದಾರೆ. ಅದಕ್ಕೆ ಸೋನಿಯಾ ಅವರು “ನೀವೇ ನನ್ನ ಮಗನಿಗೆ ಸೂಕ್ತ ಹುಡುಗಿ ಹುಡುಕಿಕೊಡಿ” ಎಂದು ನಗು ಬೀರಿದ್ದಾರೆ.

ಸೋನಿಪತ್ ಜಿಲ್ಲೆಯ ಕೆಲವು ರೈತ ಮಹಿಳೆಯರಿಗೆ ಸೋನಿಯಾ ಗಾಂಧಿ ಅವರ ನಿವಾಸ ಜನಪಥ್‌ನಲ್ಲಿ ಉಪಾಹಾರ ಕೂಟ ಆಯೋಜಿಸಲಾಗಿತ್ತು. ಮಹಿಳೆಯರು ಸೋನಿಯಾ ಕುಟುಂಬದ ಜತೆ ಕೆಲಕಾಲ ಹರಟಿದ್ದಾರೆ.

ಜುಲೈ 8 ರಂದು ಸೋನಿಪತ್‌ನ ಮದೀನಾ ಗ್ರಾಮಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ರೈತರೊಂದಿಗೆ ಸಂವಾದ ನಡೆಸಿ, ಭತ್ತ ನಾಟಿ ಮಾಡಿ, ಟ್ರ್ಯಾಕ್ಟರ್ ಓಡಿಸಿ, ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆಯರು ತಂದ ಆಹಾರವನ್ನು ಸೇವಿಸಿದ್ದರು. ಈ ವೇಳೆ, ದೆಹಲಿ ದರ್ಶನಕ್ಕಾಗಿ ರೈತ ಮಹಿಳೆಯರನ್ನು ದೆಹಲಿಗೆ ಆಹ್ವಾನಿಸುವುದಾಗಿ ರಾಹುಲ್ ಮಹಿಳೆಯರಿಗೆ ಭರವಸೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸೋನಿಪತ್ ಜಿಲ್ಲೆಯ ಕೆಲವು ಮಹಿಳಾ ರೈತರನ್ನು ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಆಹ್ವಾನಿಸಿ, ಉಪಾಹಾರ ಕೂಟವನ್ನು ಆಯೋಜಿಸಲಾಗಿತ್ತು. ಈ ವೇಳೆ ಗಾಂಧಿ ಕುಟುಂಬದವರು ಮಹಿಳೆಯರೊಂದಿಗೆ ಮಾತುಕತೆ ನಡೆಸಿ, ಅವರೊಂದಿಗೆ ಆಹಾರ ಸೇವಿಸಿದ್ದಾರೆ.

ರೈತ ಮಹಿಳೆಯರೊಂದಿಗೆ ಮಾತುಕತೆ ನಡೆಸುತ್ತಿದ್ದ ವೇಳೆ, ಮಹಿಳೆಯೊಬ್ಬರು ರಾಹುಲ್ ಗಾಂಧಿ ಅವರಿಗೆ ಮದುವೆ ಮಾಡಿ ಎಂದು ಹೇಳಿದ ಮಾತಿಗೆ, “ನೀವೆ ನನ್ನ ಮಗನಿಗೆ ಸೂಕ್ತ ಹುಡುಗಿ ಹುಡುಕಿಕೊಡಿ” ಎಂದು ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ರೈತ ಮಹಿಳೆಯೊಂದಿಗಿನ ಮಾತುಕತೆ ಬಗ್ಗೆ ರಾಹುಲ್‌ ಅವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

“ಸೋನಿಪತ್‌ನ ರೈತ ಸಹೋದರಿಯರೊಂದಿಗಿನ ದೆಹಲಿ ದರ್ಶನ, ಮನೆಯಲ್ಲಿ ಅವರೊಂದಿಗಿನ ಮಧ್ಯಾಹ್ನದ ಊಟ, ಮಾತುಕತೆ ಮತ್ತು ಅವರ ಪ್ರೀತಿಯು ಬೆಲೆಕಟ್ಟಲಾಗದ ಉಡುಗೊರೆಗಳಾಗಿವೆ. ಇದು ನನಗೆ, ಪ್ರಿಯಾಂಕಾ ಮತ್ತು ಅಮ್ಮನಿಗೆ (ಸೋನಿಯಾ ಗಾಂಧಿ) ಕೆಲವು ವಿಶೇಷ ಅತಿಥಿಗಳೊಂದಿಗೆ ನೆನಪಿಡುವ ದಿನವಾಗಿದೆ” ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

मां, प्रियंका और मेरे लिए एक यादगार दिन, कुछ खास मेहमानों के साथ!

सोनीपत की किसान बहनों का दिल्ली दर्शन, उनके साथ घर पर खाना, और खूब सारी मज़ेदार बातें।

साथ मिले अनमोल तोहफे – देसी घी, मीठी लस्सी, घर का अचार और ढेर सारा प्यार।

पूरा वीडियो यूट्यूब पर:https://t.co/2rATB9CQoz pic.twitter.com/8ptZuUSDBk

— Rahul Gandhi (@RahulGandhi) July 29, 2023

ಈ ಸುದ್ದಿ ಓದಿದ್ದೀರಾ? ಕೇಂದ್ರದ ವಿರುದ್ಧ ಇಂಡಿಯಾ ಅವಿಶ್ವಾಸ ನಿರ್ಣಯ | ಇನ್ನು ಮೂರು ದಿನಗಳಲ್ಲಿ ಚರ್ಚೆಗೆ ಅವಕಾಶ

ಸೋನಿಪತ್‌ ರೈತ ಸಹೋದರಿಯರನ್ನು ದೆಹಲಿಗೆ ಕರೆದೊಯ್ಯುವುದಾಗಿ ರಾಹುಲ್‌ ಅವರು ಭರವಸೆ ನೀಡಿದ್ದರು. ಆ ಭರವಸೆಯನ್ನು ಈಡೇರಿಸಿದ್ದಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ರಾಹುಲ್‌ ಗಾಂಧಿ ಅವರು ಹಂಚಿಕೊಂಡಿರುವ ವಿಡಿಯೊ ಒಂದು ತಾಸಿನಲ್ಲಿ 5 ಲಕ್ಷ ವೀಕ್ಷಣೆ ಪಡೆದಿದೆ. ಅನೇಕ ಟ್ವಿಟ್ಟಿಗರು ವಿಡಿಯೊಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags: DelhiHaryanaRahul GandhiSonia GandhiSonipathWomen Farmersದೆಹಲಿರಾಹುಲ್ ಗಾಂಧಿರೈತ ಮಹಿಳೆಯರುಸೋನಿಪತ್‌ಸೋನಿಯಾ ಗಾಂಧಿ
Previous Post

ಪಿತೃಪ್ರಧಾನತೆ-ಆಸ್ತಿ ಹಕ್ಕುಗಳುಮತ್ತು ಗೋವಾದ ಏಕರೂಪ ನಾಗರಿಕ ಸಂಹಿತೆ- ಭಾಗ 3

Next Post

Breaking: ಬೆಳಗಾವಿ | ಗೃಹಲಕ್ಷ್ಮಿ ಯೋಜನೆಗೆ ಲಂಚ ಪಡೆದ ಆರೋಪ ; ವ್ಯಕ್ತಿಯ ವಿರುದ್ಧ ದೂರು

Related Posts

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ
Top Story

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

by ಪ್ರತಿಧ್ವನಿ
February 1, 2026
0

ನವದೆಹಲಿ: ಇಂದು ಕೇಂದ್ರ ಸರ್ಕಾರ 2026ರ ಬಜೆಟ್‌ ಮಂಡನೆ ಮಾಡಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ತಮ್ಮ ದಾಖಲೆಯ 9ನೇ ಬಜೆಟ್‌ನಲ್ಲಿ ಹಲವು ಮಹತ್ವದ...

Read moreDetails
Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

February 1, 2026
Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

February 1, 2026
Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ

Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ

February 1, 2026
Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

Union Budget 2026: ಕೇಂದ್ರ ಬಜೆಟ್‌ ದಿನವೇ ಬಿಗ್‌ ಶಾಕ್:‌ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

February 1, 2026
Next Post
ಗೃಹಲಕ್ಷ್ಮಿ ಯೋಜನೆ

Breaking: ಬೆಳಗಾವಿ | ಗೃಹಲಕ್ಷ್ಮಿ ಯೋಜನೆಗೆ ಲಂಚ ಪಡೆದ ಆರೋಪ ; ವ್ಯಕ್ತಿಯ ವಿರುದ್ಧ ದೂರು

Please login to join discussion

Recent News

ಕೊಟ್ಟೂರು ನರಮೇ**: ಗರ್ಭಿಣಿ ತಂಗಿ ಮತ್ತು ಹೆತ್ತವರನ್ನು ಮುಗಿಸಿದ್ಯಾಕೆ ಅಣ್ಣ..?
Top Story

ಕೊಟ್ಟೂರು ನರಮೇ**: ಗರ್ಭಿಣಿ ತಂಗಿ ಮತ್ತು ಹೆತ್ತವರನ್ನು ಮುಗಿಸಿದ್ಯಾಕೆ ಅಣ್ಣ..?

by ಪ್ರತಿಧ್ವನಿ
February 1, 2026
Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ
Top Story

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

by ಪ್ರತಿಧ್ವನಿ
February 1, 2026
Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್
Top Story

Union Budget 2026: ಆದಾಯ ತೆರಿಗೆದಾರರಿಗೆ ಗುಡ್‌ನ್ಯೂಸ್‌: ಮಧ್ಯಮ ವರ್ಗಕ್ಕೆ ಬಿಗ್‌ ರಿಲೀಫ್

by ಪ್ರತಿಧ್ವನಿ
February 1, 2026
Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ
Top Story

Union Budget 2026: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬಂಪರ್‌: 1.4 ಲಕ್ಷ ಕೋಟಿ ರೂ ಅನುದಾನ

by ಪ್ರತಿಧ್ವನಿ
February 1, 2026
Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ
Top Story

Union Budget 2026: ಕ್ಯಾನ್ಸರ್& ಸಕ್ಕರೆ ಕಾಯಿಲೆ ರೋಗಿಗಳಿಗೆ ಕೇಂದ್ರದಿಂದ ಸಿಹಿಸುದ್ದಿ

by ಪ್ರತಿಧ್ವನಿ
February 1, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೊಟ್ಟೂರು ನರಮೇ**: ಗರ್ಭಿಣಿ ತಂಗಿ ಮತ್ತು ಹೆತ್ತವರನ್ನು ಮುಗಿಸಿದ್ಯಾಕೆ ಅಣ್ಣ..?

ಕೊಟ್ಟೂರು ನರಮೇ**: ಗರ್ಭಿಣಿ ತಂಗಿ ಮತ್ತು ಹೆತ್ತವರನ್ನು ಮುಗಿಸಿದ್ಯಾಕೆ ಅಣ್ಣ..?

February 1, 2026
Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ

February 1, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!