• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ʼನವಸಂಕಲ್ಪ ಚಿಂತನ ಶಿಬಿರʼ: ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ; ಅತೃಪ್ತ ನಾಯಕರಿಗೆ ನೀಡಿದ ಸಂದೇಶವೇನು?

ಫೈಝ್ by ಫೈಝ್
June 7, 2022
in ದೇಶ, ರಾಜಕೀಯ
0
ʼನವಸಂಕಲ್ಪ ಚಿಂತನ ಶಿಬಿರʼ: ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ; ಅತೃಪ್ತ ನಾಯಕರಿಗೆ ನೀಡಿದ ಸಂದೇಶವೇನು?
Share on WhatsAppShare on FacebookShare on Telegram

ದೇಶದಲ್ಲಿ ಭಯದ ವಾತಾವರಣ ಮತ್ತು ಧ್ರುವೀಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತವು ಅಲ್ಪಸಂಖ್ಯಾತರನ್ನು ಹಿಂಸಿಸುವುದನ್ನು ಬಿಟ್ಟು ಬೇರೇನೂ ಅಲ್ಲ ಎಂದು ಕಿಡಿ ಕಾರಿದ್ದಾರೆ.

ADVERTISEMENT

ರಾಜಸ್ಥಾನದ ಉದಯಪುರ ನಗರದಲ್ಲಿ ಆಯೋಜಿಸಲಾದ ಮೂರು ದಿನಗಳ ‘ನವಸಂಕಲ್ಪ ಚಿಂತನ್ ಶಿಬಿರ್’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಪಕ್ಷದಲ್ಲಿ ಪ್ರಮುಖ ಸುಧಾರಣೆಗಳಿಗಾಗಿ “ಅಸಾಧಾರಣ ನಿರ್ಧಾರಗಳನ್ನು” ತೆಗೆದುಕೊಳ್ಳುವ ಬಗ್ಗೆ ಒತ್ತಿ ಹೇಳಿದರು ಮತ್ತು ಪಕ್ಷದ ನಾಯಕರಿಗೆ “ಅಸಾಧಾರಣ ನಿರ್ಧಾರಗಳನ್ನು” ತೆಗೆದುಕೊಳ್ಳುವಂತೆ ಕರೆ ನೀಡಿದರು. ತನಗೆ ಈಗ ಪಕ್ಷದ ಋಣವನ್ನು ತೀರಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ. Wagering requirements WR , playthrough and rollover http://vozhispananews.com/angels-of-the-wind-casino-buffet/ all refer to an amount of money that must be wagered before cashable bonus money and winnings are eligible to be cashed out.

ಅವರ ಭಾಷಣದ ನಂತರ ಕಾಂಗ್ರೆಸ್ ನ ಚಿಂತನ ಶಿಬಿರ ಆರಂಭವಾಗಿದೆ. ಇದು (ಚಿಂತನ್ ಶಿವರ್) ರಾಷ್ಟ್ರೀಯ ಸಮಸ್ಯೆಗಳ ಪ್ರತಿಬಿಂಬವಾಗಿದೆ ಮತ್ತು ನಮ್ಮ ಪಕ್ಷದ ಸಂಘಟನೆಯ ಬಗ್ಗೆ ಅರ್ಥಪೂರ್ಣ ಆತ್ಮಾವಲೋಕನವಾಗಿದೆ ಎಂದು ಅವರು ಹೇಳಿದ್ದಾರೆ.

‘ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೀತಿಗಳ ಪರಿಣಾಮದಿಂದ ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಲು ಚಿಂತಿನ್ ಶಿವರ್ ನಮಗೆ ಅವಕಾಶವನ್ನು ನೀಡಿದೆ’ ಎಂದು ಸೋನಿಯಾ ಗಾಂಧಿ ಹೇಳಿದರು.

ಈ ಶಿಬಿರದಲ್ಲಿ ರಾಷ್ಟ್ರೀಯ ವಿಚಾರಗಳು ಹಾಗೂ ಸಂಘಟನೆ ಕುರಿತು ದಿಟ್ಟ ಚಿಂತನೆ ಹಾಗೂ ಪಕ್ಷ ಮತ್ತು ಸಂಘಟನೆಯ ಬಗ್ಗೆ ಅರ್ಥಪೂರ್ಣ ಆತ್ಮಾವಲೋಕನ ನಡೆಯಲಿದೆ ಎಂದರು.

ಪ್ರಧಾನಿಯನ್ನು ಟಾರ್ಗೆಟ್ ಮಾಡಿದ ಸೋನಿಯಾ ಗಾಂಧೀ, ”ಪ್ರಧಾನಿ ಮತ್ತು ಅವರ ಸಹೋದ್ಯೋಗಿಗಳು ನೀಡಿದ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಘೋಷಣೆಗಳ ಅರ್ಥವೇನು ಎಂಬುದು ಸ್ಪಷ್ಟವಾಗಿದೆ. ಇದರರ್ಥ ದೇಶವನ್ನು ನಿರಂತರ ಧ್ರುವೀಕರಣದ ಸ್ಥಿತಿಯಲ್ಲಿ ಇರಿಸುವುದು ಮತ್ತು ಜನರನ್ನು ಭಯ ಮತ್ತು ಅಭದ್ರತೆಯ ವಾತಾವರಣದಲ್ಲಿ ಬದುಕಲು ಒತ್ತಾಯಿಸುವುದು.” ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂದರೆ ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಮತ್ತು ನಮ್ಮ ಗಣರಾಜ್ಯದ ಸಮಾನ ನಾಗರಿಕರನ್ನು ಗುರಿಯಾಗಿಸುವುದು, ದಬ್ಬಾಳಿಕೆ ಮಾಡುವುದು ಮತ್ತು ಆಗಾಗ್ಗೆ ತುಳಿಯುವುದು ಎಂದು ಅವರು ಆರೋಪಿಸಿದರು.

ಸರ್ಕಾರದ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂದರೆ ನಮ್ಮ ಸಮಾಜದ ಹಳೆಯ ವೈವಿಧ್ಯತೆಯನ್ನು ಬಳಸಿಕೊಂಡು ನಮ್ಮನ್ನು ವಿಭಜಿಸಲು ಎಂದು ಅವರು ಹೇಳಿದರು. ಇದರರ್ಥ ರಾಜಕೀಯ ವಿರೋಧಿಗಳನ್ನು ಬೆದರಿಸುವುದು, ಅವರನ್ನು ಮಾನಹಾನಿ ಮಾಡುವುದು ಮತ್ತು ಅವರನ್ನು ಜೈಲಿಗೆ ಹಾಕಲು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಎಂದು ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಸೋನಿಯಾ ಗಾಂಧಿಯವರ ಪ್ರಕಾರ, ಇದು ಪ್ರಜಾಪ್ರಭುತ್ವ ಸಂಸ್ಥೆಗಳ ಸ್ವಾತಂತ್ರ್ಯ ಮತ್ತು ವೃತ್ತಿಪರತೆಯನ್ನು ನಾಶಪಡಿಸುವುದಾಗಿದೆ. Gamers are not limited in titles when they have to https://myhomes.tv/who-owns-isle-of-capri-casino/ play free slot machines.

ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂದರೆ ಇತಿಹಾಸವನ್ನು ಹೊಸದಾಗಿ ಮುಂದಿಡುವುದು, ಜವಾಹರಲಾಲ್ ನೆಹರೂ ಅವರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಕೀಳಾಗಿ ಕಾಣುವುದು ಮತ್ತು ಅವರ ಕೊಡುಗೆಗಳು, ಸಾಧನೆಗಳು ಮತ್ತು ತ್ಯಾಗಗಳನ್ನು ಮರೆಯುವುದು ಎಂದು ಅವರು ಪ್ರತಿಪಾದಿಸಿದರು. ಇದರರ್ಥ ಮಹಾತ್ಮಾ ಗಾಂಧಿ ಮತ್ತು ಅವರ ವಿಚಾರವಾದಿಗಳ ಹಂತಕನನ್ನು ವೈಭವೀಕರಿಸುವುದು… ಸಂವಿಧಾನದ ತತ್ವಗಳು ಮತ್ತು ನ್ಯಾಯ, ಸ್ವಾತಂತ್ರ್ಯ ಮತ್ತು ಜಾತ್ಯತೀತತೆಯ ಅಡಿಪಾಯವನ್ನು ದುರ್ಬಲಗೊಳಿಸುವುದು ಎಂದು ಅವರು ಸೇರಿಸಿದ್ದಾರೆ.

ಸರ್ಕಾರದ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂದರೆ ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಕಣ್ಣು ಮುಚ್ಚಿ, ಅಧಿಕಾರಶಾಹಿ, ಕಾರ್ಪೊರೇಟ್ ಗುಂಪುಗಳು ಮತ್ತು ಮಾಧ್ಯಮಗಳಲ್ಲಿ ಭಯವನ್ನು ಸೃಷ್ಟಿಸುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದರು.

ದ್ವೇಷದ ಕಿಡಿ ಹೊತ್ತಿಸಲಾಗುತ್ತಿದ್ದು, ಇದು ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಮತ್ತು ಗಂಭೀರ ಸಾಮಾಜಿಕ ಪರಿಣಾಮಗಳನ್ನು ಮುನ್ನೆಲೆಗೆ ತಂದಿದೆ ಎಂದು ಅವರು ಹೇಳಿದರು.

ದೇಶದ ಬಹುತೇಕ ನಾಗರಿಕರು ಶಾಂತಿ ಮತ್ತು ಸೌಹಾರ್ದತೆಯ ವಾತಾವರಣದಲ್ಲಿ ಬದುಕಲು ಬಯಸುತ್ತಾರೆ, ಆದರೆ ಬಿಜೆಪಿ ಜನರನ್ನು ಪರಸ್ಪರ ಎದುರುಬದುರಾಗುವ ಸ್ಥಿತಿಯಲ್ಲಿಡಲು ಬಯಸುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

“ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ನಮ್ಮ ಜನರನ್ನು ಸದಾ ಉನ್ಮಾದ ಮತ್ತು ಸಂಘರ್ಷದ ಸ್ಥಿತಿಯಲ್ಲಿ ಇಡಲು ಬಯಸುತ್ತವೆ. ಅವರು ನಿರಂತರವಾಗಿ ಪ್ರಚೋದಿಸುತ್ತಾರೆ. ದುರುದ್ದೇಶ ಮತ್ತು ಕಿಡಿಗೇಡಿತನದಿಂದ ಹರಡುವ ವಿಭಜಕ ವೈರಸ್ ವಿರುದ್ಧ ನಾವು ಹೋರಾಡಬೇಕಾಗಿದೆ” ಎಂದು ಸೋನಿಯಾ ಹೇಳಿದರು. It is also kept in mind that the bonus which you get cannot be withdrawn, and the bonuses are in the https://myhomes.tv/places-to-eat-near-turning-stone-casino/ form of free spins, or you can play your bets on that.

ಆರ್ಥಿಕತೆಯ ಸ್ಥಿತಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಅಧ್ಯಕ್ಷರು, ದ್ವೇಷ ಮತ್ತು ಮತಾಂಧತೆಯ ವಾತಾವರಣವು ಆರ್ಥಿಕ ಅಡಿಪಾಯವನ್ನು ಅಲುಗಾಡಿಸಿದೆ ಎಂದು ಹೇಳಿದರು.

ನೋಟು ಅಮಾನ್ಯೀಕರಣ, ಸಾರ್ವಜನಿಕ ವಲಯದ ಘಟಕಗಳ ಅತಿರೇಕದ ಖಾಸಗೀಕರಣ, ಕೃಷಿ ಕಾನೂನುಗಳು ಮತ್ತು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಹಣದುಬ್ಬರವನ್ನು ತಡೆಯಲು ವಿಫಲವಾದಂತಹ ಮೋದಿ ಸರ್ಕಾರದ ಕೆಲವು ನಿರ್ಧಾರಗಳನ್ನು ಸೋನಿಯಾ ಗಾಂಧಿ ಟೀಕಿಸಿದರು. ಅವರು MGNREGA ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತಹ ಕಾಂಗ್ರೆಸ್‌ನ ಸಾಧನೆಗಳ ಬಗ್ಗೆ ಗಮನ ಸೆಳೆದರು.

ಅವರ ಪ್ರಕಾರ, ನವೆಂಬರ್ 2016 ರಲ್ಲಿ ನೋಟು ಅಮಾನ್ಯೀಕರಣದ ನಂತರ, ಆರ್ಥಿಕತೆಯು ಅಧೋಗತಿಗೆ ಹೋಯಿತು, ಹೆಚ್ಚಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಿಕ್ಕಟ್ಟಿನಲ್ಲಿವೆ, ನಿರುದ್ಯೋಗವು ಅಪಾರವಾಗಿ ಹೆಚ್ಚಾಗಿದೆ ಮತ್ತು ಹೆಚ್ಚಿನ ಜನರು ಉದ್ಯೋಗ ಹುಡುಕಾಟವನ್ನು ಕೈಬಿಟ್ಟ ಪರಿಸ್ಥಿತಿಯಾಗಿದೆ.

ಅವರು MNREGA ಮತ್ತು ಆಹಾರ ಭದ್ರತಾ ಕಾಯ್ದೆಯನ್ನು ಪ್ರಸ್ತಾಪಿಸಿದರು ಮತ್ತು ಹಣದುಬ್ಬರದ ವಿಷಯದ ಬಗ್ಗೆ ಸರ್ಕಾರವನ್ನು ಗುರಿಯಾಗಿಸಿದರು.

ಶಿಬಿರದಲ್ಲಿ ಪಾಲ್ಗೊಳ್ಳುವವರು ಪಕ್ಷದ ಕಾರ್ಯವೈಖರಿ ಬಗ್ಗೆ ತಮ್ಮ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಮಂಡಿಸಲು ಹಿಂಜರಿಯಬಾರದು ಎಂದರು. ಕಾಂಗ್ರೆಸ್ ಸಾರ್ವಜನಿಕವಾಗಿ ಒಗ್ಗಟ್ಟಾಗಿ ಕಾಣಿಸಿಕೊಳ್ಳುವುದು ಮುಖ್ಯ. ಸಾಂಸ್ಥಿಕ ಸಮಸ್ಯೆಗಳಿಗಿಂತ ರಾಜಕೀಯ ಅಜೆಂಡಾಕ್ಕೆ ಒತ್ತು ನೀಡುವ ಬಿಜೆಪಿಯೊಂದಿಗೆ ಕಾಂಗ್ರೆಸ್‌ನ ಪ್ರಮುಖ ಭಿನ್ನಾಭಿಪ್ರಾಯಗಳನ್ನು ಸೋನಿಯಾ ಗಾಂಧಿ ಮುನ್ನೆಲೆಗೆ ತಂದರು, ಇದು ಪಕ್ಷದ ಅತೃಪ್ತ ನಾಯಕರಿಗೆ ನೀಡಿದ ತಣ್ಣನೆಯ ಸಂದೇಶವಾಗಿದೆ.

‘ನಮ್ಮ ಮಹಾನ್ ಸಂಸ್ಥೆಯಿಂದ ಕಾಲಕಾಲಕ್ಕೆ ಹೊಂದಿಕೊಳ್ಳುವಿಕೆಯನ್ನು ನಿರೀಕ್ಷಿಸಲಾಗಿದೆ. ಮತ್ತೊಮ್ಮೆ ನಾವು ನಮ್ಮ ಧೈರ್ಯ, ಮನೋಭಾವ ಮತ್ತು ಸಮರ್ಪಣಾ ಮನೋಭಾವವನ್ನು ತೋರಿಸಬೇಕೆಂದು ನಿರೀಕ್ಷಿಸಲಾಗಿದೆ. ನಮ್ಮ ಸಂಘಟನೆಯ ಹಿಂದಿನ ಸನ್ನಿವೇಶಗಳು ಅಭೂತಪೂರ್ವವಾಗಿವೆ. Over ten games have progressive jackpots while another 50 from the Real-Series have https://parkirpintar.com/how-many-lines-should-i-play-on-a-slot-machine/ smaller jackpots that are randomly triggered. ಅಸಾಧಾರಣ ಸಂದರ್ಭಗಳಲ್ಲಿ ಅಸಾಮಾನ್ಯ ರೀತಿಯಲ್ಲಿ ವ್ಯವಹರಿಸಲಾಗುತ್ತದೆ. ನನಗೆ ಇದರ ಸಂಪೂರ್ಣ ಅರಿವಿದೆ.” ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಪ್ರತಿಯೊಂದು ಸಂಸ್ಥೆಗಳು ಉಳಿಯಲು ಮಾತ್ರವಲ್ಲದೆ ಬೆಳೆಯಲು ಕಾಲಕಾಲಕ್ಕೆ ಬದಲಾವಣೆಗಳನ್ನು ತರಬೇಕು. ನಮಗೆ ಸುಧಾರಣೆಗಳ ಅವಶ್ಯಕತೆಯಿದೆ. The fact that the games on Titan Casino are powered by Playtech https://myhomes.tv/casino-robert-de-niro-y-sharon-stone/ is good news for a number of reasons, with one of the most important reasons being the fact that there are big progressive jackpots on offer. ಕಾರ್ಯತಂತ್ರದಲ್ಲಿ ಬದಲಾವಣೆ ಅಗತ್ಯವಿದೆ. ದಿನನಿತ್ಯದ ಕೆಲಸದಲ್ಲಿ ಬದಲಾವಣೆಗಳ ಅಗತ್ಯವಿದೆ. ಇದು ಅತ್ಯಂತ ಮೂಲಭೂತ ಸಮಸ್ಯೆಯಾಗಿದೆ ಎಂದರು.

Tags: BJPCongress Partyನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ಉಚಿತ ಆರೋಗ್ಯ ಮೇಳಗಳ ಸದುಪಯೋಗಕ್ಕೆ ಸಚಿವ ಕೆ.ಗೋಪಾಲಯ್ಯ ಕರೆ

Next Post

ಗುಜರಾತ್ ಗೆಲುವಿನ ಓಟ `ವೃದ್ಧಿ’: ಚೆನ್ನೈಗೆ 7 ವಿಕೆಟ್ ಸೋಲು

Related Posts

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
0

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಗೆ (KS Eshwarappa) ಲೋಕಾಯುಕ್ತ (Lokayukta) ಶಾಕ್ ಎದುರಾಗಿದೆ. ಈ ಹಿಂದೆ ಬಿಜೆಪಿ (Bjp) ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಈಶ್ವರಪ್ಪ ಅವರ...

Read moreDetails
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

ಡಿಕೆ ಸುರೇಶ್‌ ಸುದ್ದಿಗೋಷ್ಠಿ..!

July 3, 2025
Next Post
ರಾಜಸ್ಥಾನ್ ಗೆ ಮುಳುವಾದ ಹಾರ್ದಿಕ್, ಫರ್ಗ್ಯೂನ್ಸನ್!

ಗುಜರಾತ್ ಗೆಲುವಿನ ಓಟ `ವೃದ್ಧಿ’: ಚೆನ್ನೈಗೆ 7 ವಿಕೆಟ್ ಸೋಲು

Please login to join discussion

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada