• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಬಸವ ಜಯಂತಿಯಂದು “ಮೋಳಿಗೆ ಮಾರಯ್ಯ” ಚಿತ್ರದ ಹಾಡುಗಳ ಅನಾವರಣ .

ಪ್ರತಿಧ್ವನಿ by ಪ್ರತಿಧ್ವನಿ
May 2, 2025
in ಸಿನಿಮಾ
0
ಬಸವ ಜಯಂತಿಯಂದು “ಮೋಳಿಗೆ ಮಾರಯ್ಯ” ಚಿತ್ರದ ಹಾಡುಗಳ ಅನಾವರಣ .
Share on WhatsAppShare on FacebookShare on Telegram

ಮಧುಸೂದನ್ ಹವಾಲ್ದಾರ್ ನಿರ್ಮಾಣ, ನಿರ್ದೇಶನ ಹಾಗೂ ಸಂಗೀತ ನಿರ್ದೇಶನದ “ಮೋಳಿಗೆ ಮಾರಯ್ಯ” ಚಿತ್ರದ ಹಾಡುಗಳ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಶುಭದಿನದಂದು ನೆರವೇರಿತು. ಬೇಲಿಮಠದ ಶ್ರೀಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಭಕ್ತಿಪ್ರಧಾನ ಈ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ನಿವೃತ್ತ ಐ ಎ ಎಸ್ ಅಧಿಕಾರಿ ಸಿ.ಸೋಮಶೇಖರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ADVERTISEMENT

ಮಧುಸೂದನ್ ಹವಾಲ್ದಾರ್ ಅವರು ಮಹಾನ್ ಶರಣರಾದ “ಮೋಳಿಗೆ ಮಾರಯ್ಯ” ಅವರ ಕುರಿತಾದ ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತೋಷ ತಂದಿದೆ. ಇಂತಹ ಪ್ರಯತ್ನಗಳು ಮಧುಸೂದನ್ ಅವರಿಂದ ಇನ್ನೂ ಹೆಚ್ಚು ಆಗಲಿ ಎಂದು ಶ್ರೀಗಳು ಆಶೀರ್ವದಿಸಿದರು.

ನಾನು, ಹಿಂದಿನ ಚಿತ್ರದ ಯಶಸ್ಸಿನ ಯಾತ್ರೆಯ ಸಂದರ್ಭದಲ್ಲಿ ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಸ್ವಾಮಿಗಳನ್ನು ಭೇಟಿಯಾಗಿದ್ದೆ. ಆಗ ಅವರು ನೀವು ದಾಸರ ಚಿತ್ರಗಳ ಜೊತೆಗೆ ಮಾಹನ್ ಶರಣರ ಚಿತ್ರಗಳನ್ನು ಮಾಡಿ ಎಂದರು. ಯಾರ ಚಿತ್ರ‌ ಮಾಡಬೇಕೆಂದು ಶ್ರೀಗಳಲ್ಲಿ ಕೇಳಿದಾಗ, ಅವರು ಸಾಣೇಹಳ್ಳಿ ಶ್ರೀಗಳನ್ನು ಭೇಟಿ ಮಾಡುವಂತೆ ಹೇಳಿದರು. ಸಾಣೇಹಳ್ಳಿ ಶ್ರೀಗಳು ನಾನು ಶರಣ “ಮೋಳಿಗೆ ಮಾರಯ್ಯ” ಅವರ ಕುರಿತು ನಾಟಕ ಬರೆದಿದ್ದೇನೆ. ಅದನ್ನು ಓದಿ ಎಂದು ಹೇಳಿದರು. ಕಾಶ್ಮೀರದ ರಾಜ ಬಸವ ತತ್ವ ಅನುಯಾಯಿಯಾಗಿ ಕಲ್ಯಾಣಕ್ಕೆ ಬಂದು ಸಾಮಾನ್ಯರಂತೆ ಜೀವನ ನಡೆಸಿ ಮಹಾನ್ ಶರಣರಾಗುತ್ತಾರೆ. ಈಗ “ಮೋಳಿಗೆ ಮಾರಯ್ಯ” ಅವರ ಜೀವನ ಚರಿತ್ರೆಯನ್ನು ಸಿನಿಮಾ ರೂಪದಲ್ಲಿ ತರುವ ಪ್ರಯತ್ನ ಮಾಡುತ್ತಿದ್ದೇನೆ. ಅದರ ಮೊದಲ ಹೆಜ್ಜೆಯಾಗಿ ಇಂದು ಚಿತ್ರದ ಐದು ಹಾಡುಗಳನ್ನು ಪೂಜ್ಯ ಶ್ರೀಗಳಿಂದ ಬಿಡುಗಡೆ ಮಾಡಿಸಿದ್ದೇವೆ.

Siddaramaih : ಬೊಮ್ಮಾಯಿ .ನಿರ್ಮಲಾ ಸೀತಾರಾಮನ್ ನಿಮ್ ಬಜೆಟ್ ಮಂಡನೆ ನೋಡಿದ್ದೀನಿ ಸುಮ್ನೆ ಇರಿ #pratidhvani

ನನ್ನ ಹಿಂದಿನ ಚಿತ್ರಗಳಲ್ಲಿ ನಟಿಸಿದ್ದ ಗಂಗಾವತಿಯ ವಿಷ್ಣುತೀರ್ಥ ಜೋಶಿ “ಮೋಳಿಗೆ ಮಾರಯ್ಯ” ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದ ಪಾತ್ರಗಳ ಆಯ್ಕೆ ನಡೆಯುತ್ತಿದೆ. ನಿರ್ಮಾಣ,‌ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ಚಿತ್ರಕಥೆ , ಸಂಭಾಷಣೆ ಜೆ.ಎಂ.ಪ್ರಹ್ಲಾದ್ ಅವರದು. ವಿ.ಎಫ್.ಎಕ್ಸ್ ದಯಾನಂದ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ಮಧುಸೂದನ್ ಹವಾಲ್ದಾರ್ ತಿಳಿಸಿದರು.

ನಾನು ಮಧುಸೂದನ್ ಹವಾಲ್ದಾರ್ ಅವರ ಹಿಂದಿನ ಮೂರು ಚಿತ್ರಗಳಲ್ಲೂ ವೆಂಜಟರಮಣ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೆ. ಈ ಚಿತ್ರದಲ್ಲಿ ಅವರು ನನಗೆ “ಮೋಳಿಗೆ ಮಾರಯ್ಯ” ಅವರ ಪಾತ್ರ ನೀಡಿದ್ದಾರೆ ಎಂದರು ನಟ ವಿಷ್ಣುತೀರ್ಥ ಜೋಶಿ .

ಚಿತ್ರಕಥೆ, ಸಂಭಾಷಣೆ ಬರೆದಿರುವ ಜೆ.ಎಂ.ಪ್ರಹ್ಲಾದ್, ವಿ.ಎಫ್.ಎಕ್ಸ್ ದಯಾನಂದ್ ಹಾಗೂ ಸೌಂಡ್ ಆಫ್ ಮ್ಯೂಸಿಕ್ ಗುರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags: #moligemarayya#rockingstaryashbhakti geethedevotional songsfolks songsfromgas filmy cultgod songskannada filmskannada folk songskannada janapada songskurigalu sir kurigalu songsLingayatlingayat dharmamarayyamoligayyamoligemolige maarayyamolige marayya kannada moviemolige marayya moviemolkherra molige maarayyamysore ananthaswamy kannada songssri basava tv- katha sangama- molige marayya- ep 02vachana songs
Previous Post

ಮಾರ್ಚ್​ ಅಂತ್ಯಕ್ಕೇ ಫಿಕ್ಸ್​ ಆಗಿತ್ತು ಮುಹೂರ್ತ.. ಫೇಸ್​ಬುಕ್​ನಲ್ಲಿ ಆಗಿತ್ತು ಸ್ಕೆಚ್​ ಪೋಸ್ಟ್​

Next Post

ಸುಹಾಸ್​ ಶೆಟ್ಟಿ ಮುಗಿಸಲು ಸಾಥ್​ ಕೊಡ್ತಾ ಪೊಲೀಸ್​ ಇಲಾಖೆ..? ಯಾಕೀ ಅನುಮಾನ..?

Related Posts

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ
ಸಿನಿಮಾ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

by ಪ್ರತಿಧ್ವನಿ
April 14, 2026
0

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ’ ಸಿನಿಮಾಗೆ ಸೆನ್ಸಾರ್ ಸಂಬಂಧಿತ ಅಡಚಣೆಗಳು ಎದುರಾಗಿದ್ದು, ಕೇಂದ್ರ ಸೆನ್ಸಾರ್ ಮಂಡಳಿಯ ಕ್ರಮದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂಬ...

Read moreDetails
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

ಗಾಯಕಿ ಆಶಾ ಭೋಂಸ್ಲೆ ಆಸ್ಪತ್ರೆಗೆ ದಾಖಲು: ಆರೋಗ್ಯದ ಬಗ್ಗೆ ಕುಟುಂಬ ಸ್ಪಷ್ಟನೆ

April 12, 2026
Next Post

ಸುಹಾಸ್​ ಶೆಟ್ಟಿ ಮುಗಿಸಲು ಸಾಥ್​ ಕೊಡ್ತಾ ಪೊಲೀಸ್​ ಇಲಾಖೆ..? ಯಾಕೀ ಅನುಮಾನ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada