ಗರ್ಭಿಣಿಯಾಗಿರುವ ಸೋನಮ್ ಕಪೂರ್ (Sonam Kapoor) ನಿವಾಸಕ್ಕೆ ನುಗ್ಗಿದ ಕಳ್ಳರು 2.4 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಸೋನಂ ಕಪೂರ್ ಮತ್ತು ಪತಿ ಆನಂದ್ ಅಹುಜಾ ಅವರ ದೆಹಲಿಯ ಮನೆಯಲ್ಲಿ ಫೆಬ್ರವರಿ 11 ರಂದು ಕಳ್ಳತನವಾಗಿದ್ದು, ಎರಡು ದಿನಗಳ ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆ ನಡೆದು ಸುಮಾರು 2 ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ಸೋನಮ್ ಕಪೂರ್ ಅವರ ಮಾವನನ್ನು ಸೈಬರ್ ಕ್ರಿಮಿನಲ್ ಗಳು 27 ಲಕ್ಷ ರೂ. ವಂಚಿಸಿದ್ದರು.











