• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ʼಚರ್ಮದಿಂದ ಚರ್ಮಕ್ಕೆʼ ಸಂಪರ್ಕವಾದರಷ್ಟೇ ಲೈಂಗಿಕ ದೌರ್ಜನ್ಯ: ಈ ಕುರಿತು ʼಪ್ರತಿಧ್ವನಿʼಗೆ ಹೋರಾಟಗಾರ್ತಿಯರು ಹೇಳಿದ್ದೇನು?

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
November 20, 2021
in ಕರ್ನಾಟಕ
0
ʼಚರ್ಮದಿಂದ ಚರ್ಮಕ್ಕೆʼ ಸಂಪರ್ಕವಾದರಷ್ಟೇ ಲೈಂಗಿಕ ದೌರ್ಜನ್ಯ: ಈ ಕುರಿತು ʼಪ್ರತಿಧ್ವನಿʼಗೆ ಹೋರಾಟಗಾರ್ತಿಯರು ಹೇಳಿದ್ದೇನು?
Share on WhatsAppShare on FacebookShare on Telegram

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ, 2012 ರ ಅಡಿಯಲ್ಲಿ, ಲೈಂಗಿಕ ದೌರ್ಜನ್ಯದ ಅಪರಾಧಕ್ಕೆ “ಚರ್ಮದಿಂದ ಚರ್ಮಕ್ಕೆ” ಸಂಪರ್ಕ ಅಗತ್ಯ ಎಂದು ಬಾಂಬೆ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿಹಾಕಿದೆ.

ADVERTISEMENT

ನ್ಯಾಯಮೂರ್ತಿ ಯು,ಯು ಲಲಿತ್ ನೇತೃತ್ವದ ಪೀಠವು, ಅಂತಹ ಪ್ರಕರಣಗಳಲ್ಲಿ ಲೈಂಗಿಕ ಉದ್ದೇಶವು ಮುಖ್ಯವಾಗಿದೆ ಮತ್ತು ಅದನ್ನು ಕಾಯಿದೆಯ ವ್ಯಾಪ್ತಿಯಿಂದ ತೆಗೆದು ಹಾಕಲಾಗದು ಎಂದು ಹೇಳಿತು. ಅಪರಾಧಿಯನ್ನು ಕಾನೂನಿನ ಜಾಲಗಳಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದು ಕಾನೂನಿನ ಉದ್ದೇಶವಾಗಿರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವರ್ಷದ ಜನವರಿಯಲ್ಲಿ, ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು, ಲೈಂಗಿಕ ಕಿರುಕುಳದ ಆರೋಪ ಹೊತ್ತ ಪುರುಷನನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ನೇರವಾಗಿ “ಚರ್ಮದಿಂದ ಚರ್ಮಕ್ಕೆ” ದೈಹಿಕ ಸಂಪರ್ಕವಿಲ್ಲದೆ ಮಗುವಿನ ಸ್ತನಗಳನ್ನು ಆಕೆಯ ಬಟ್ಟೆಯ ಮೇಲೆ ಒತ್ತಿದರೆ ಅದು “ಲೈಂಗಿಕ ದೌರ್ಜನ್ಯ” ಆಗುವುದಿಲ್ಲ ಎಂದು POCSO ಕಾಯಿದೆ ವಿವರಿಸುತ್ತದೆ ಎಂದು ಬಾಂಬೆ ಹೈಕೋರ್ಟ್ ವಿವರಣೆ ನೀಡಿತ್ತು. ಈ ತೀರ್ಪು ನೀಡಿದವರು ನ್ಯಾಯಮೂರ್ತಿ ಪುಷ್ಪಾ ಎಂಬ ಮಹಿಳೆ ಎಂಬುದು ಸೋಜಿಗದ ವಿಷಯವಾಗಿತ್ತು.

ಈ ಕುರಿತು ʼಪ್ರತಿಧ್ವನಿʼಗೆ ಮಹಿಳಾ ಆಕ್ಟಿವಿಸ್ಟ್ಗಳು ನೀಡಿದ ಅಭಿಪ್ರಾಯ ಇಲ್ಲಿವೆ:

ಅಂಬಿಕಾ ಜಾಲಗಾರ, ರಾಜ್ಯ ಮಹಿಳಾ ಆಯೋಗದ ಮಾಜಿ ಸದಸ್ಯೆ

ಅಂಬಿಕಾ ಜಾಲಗಾರ, ರಾಜ್ಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಮಾತನಾಡಿ, ʼಚರ್ಮ-ಚರ್ಮ ಸಂಪರ್ಕ ಎಂಬ ವ್ಯಾಖ್ಯಾನದ ಬಾಂಬೆ ಹೈಕೋರ್ಟ್ತೀರ್ಪೇ ಅಸಹ್ಯವಾಗಿತ್ತು. ಸದ್ಯ ಅದನ್ನು ರದ್ದು ಮಾಡಿ ಸುಪ್ರೀಂಕೋರ್ಟ್ ಸ್ವಾಗತಾರ್ಹ ಕೆಲಸ ಮಾಡಿದೆ. ಯಾವುದೇ ಕಾನೂನು ಅಥವಾ ಶಾಸನವನ್ನು ನ್ಯಾಯಮೂರ್ತಿಗಳು ಮಾನವೀಕ ನೆಲೆಯಿಂದ ನೋಡಬೇಕು. ಮೇಲ್ ಸ್ತರದ ವಾತಾವರಣದಲ್ಲಿ ಬೆಳೆದ ಮಹಿಳೆಯರಿಗೆ ಕೆಳಸ್ತರದ ಮಹಿಳೆಯ ನೋವು ಅರ್ಥವಾಗುವುದಿಲ್ಲ. ಅವರು ಓದು, ಒಡನಾಟದ ಮೂಲಕ ಅದನ್ನು ಅರ್ಥ ಮಾಡಿಕೊಂಡು ತೀರ್ಪು ನೀಡಬೇಕು. ನ್ಯಾಯಾಧೀಶೆ ಪುಷ್ಪಾ ಅವರು ಮತ್ತೆ ಇಂತಹ ತಪ್ಪುಮಾಡದಿರಲಿ.

ಮಲ್ಲಿಗೆ ಸಿರಿಮನೆ, ಸಾಮಾಜಿಕ ಕಾರ್ಯಕರ್ತೆ

ಮಲ್ಲಿಗೆ ಸಿರಿಮನೆ, ಸಾಮಾಜಿಕ ಕಾರ್ಯಕರ್ತೆ ಮಾತನಾಡಿ, ʼಮಕ್ಕಳಿಗೆ ಕೆಟ್ಟ ಚಿತ್ರ ತೋರಿಸುವುದು, ಲೈಂಗಿಕ ವಿಡಿಯೋಗಳನ್ನು ಕಳಿಸುವುದು, ಅಂಗಚೇಷ್ಠೆ ಮಾಡುವುದು-ಇವೆಲ್ಲ ಪೊಸ್ಕೊ ಕಾಯ್ದೆ ಅಡಿ ಲೈಂಗಿಕ ಅಪರಾಧವೇ ಆಗುತ್ತದೆ. ಅಂಥದ್ದರಲ್ಲಿ ಮಗುವೊಂದರ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ ವ್ಯಕ್ತಿಯನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ್ದು ಮತ್ತು ಅದಕ್ಕೆ ಚರ್ಮ-ಚರ್ಮದ ಸಂಪರ್ಕವಿಲ್ಲ ಎಂಬ ಕಾರಣ ನೀಡಿದ್ದು ನಾಚಿಕೆಗೇಡು. ಸುಪ್ರಿಂಕೋರ್ಟ್ ಬಾಂಬೆ ಹೈಕೋರ್ಟ್ನ ನಾಗಪುರ ಪೀಠದ ತೀರ್ಪನ್ನು ರದ್ದು ಮಾಡಿದ್ದು ಸ್ವಾಗತಾರ್ಹ ಬೆಳವಣಿಗೆʼ.

ರಾಜಲಕ್ಷ್ಮಿ ಅಂಕಲಗಿ, ಹೈಕೋರ್ಟ್ ವಕೀಲೆ

ರಾಜಲಕ್ಷ್ಮಿ ಅಂಕಲಗಿ, ಹೈಕೋರ್ಟ್ ವಕೀಲೆ ಮಾತನಾಡಿ, ʼಒಬ್ಬ ಮಹಿಳೆಯಾಗಿ ನ್ಯಾಯಮೂರ್ತಿ ಪುಷ್ಪಾ ಆ ತೀರ್ಪು ನೀಡಿದ್ದು ನಿಜವಾಗಿಯೂ ಖೇದಕರ ವಿಷಯವೇ. ಇಲ್ಲಿ ಪುರುಷ ಅಥವಾ ಮಹಿಳಾ ಜಡ್ಜ್ ಎಂದು ನೋಡುವ ಬದಲು, ಅವರ ಮೈಂಡ್ಸೆಟ್ ಅಥವಾ ಮನೋಸ್ಥಿತಿ ಯಾವ ವಾತಾವರಣದಿಂದ ರೂಪುಗೊಂಡಿದೆ ಎಂಬುದೂ ಇಲ್ಲಿ ಮುಖ್ಯ. ಆದರೆ ಒಂದು ಘನತೆಯ ಹುದ್ದೆ ತಲುಪುವ ಮೊದಲು ಇಡೀ ಸಮಾಜದ ಅಂತರಂಗ ಅರಿಯಬೇಕು. ಪುಷ್ಪಾ ಅವರ ತೀರ್ಪು ಅನೂರ್ಜಿತವಾಗಲು 11 ತಿಂಗಳು ಬೇಕಾಗಿತು ಎಂಬುದು ನಮ್ಮ ನ್ಯಾಯ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿ.

Tags: BJPCongress Partyಚರ್ಮದಿಂದ ಚರ್ಮಕ್ಕೆನರೇಂದ್ರ ಮೋದಿಪ್ರತಿಧ್ವನಿಬಿಜೆಪಿಲೈಂಗಿಕ ದೌರ್ಜನ್ಯಹೋರಾಟಗಾರ್ತಿಯರು
Previous Post

ಕೃಷಿ ಕಾನೂನು ರದ್ದು ನಿರ್ಧಾರ ಪ್ರಕಟಿಸಿ ಪ್ರಧಾನಿ ನರೇಂದ್ರ ಮೋದಿ ‘ನೈತಿಕ ಸೋಲು’ ಒಪ್ಪಿಕೊಂಡರೇ?

Next Post

ಬೆಳೆದ ಬೆಳೆ ಕಣ್ಮುಂದೆಯೇ ಕೊಚ್ಚಿಹೋಗುತ್ತಿದೆ, ಅನ್ನ ಕೊಡುವ ಅನ್ನದಾತ ಆಪತ್ತಿನಲ್ಲಿದ್ದಾನೆ – ಎಚ್‌ಡಿಕೆ

Related Posts

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?
ಕರ್ನಾಟಕ

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?

by ಪ್ರತಿಧ್ವನಿ
August 13, 2026
0

ಬೆಂಗಳೂರು: ಶಿವಗಂಗೆ ಬೆಟ್ಟಕ್ಕೆ ಏಕಾಂಗಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ಕಳೆದ ಹಲವು ದಿನಗಳಿಂದ ಬೆಟ್ಟದಲ್ಲಿ ನಿರಂತರ ಶೋಧ...

Read moreDetails
ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

August 13, 2026
ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

August 13, 2026
ಮತ್ತೊಮ್ಮೆ ಕಾರ್ಮಿಕ ಖಾತೆ ಪಡೆದ ಸಂತೋಷ್ ಲಾಡ್: ‘ಶ್ರಮಮೇವ ಜಯತೇ’ ಪಾಲಿಸಲು ಸಜ್ಜು

ಮತ್ತೊಮ್ಮೆ ಕಾರ್ಮಿಕ ಖಾತೆ ಪಡೆದ ಸಂತೋಷ್ ಲಾಡ್: ‘ಶ್ರಮಮೇವ ಜಯತೇ’ ಪಾಲಿಸಲು ಸಜ್ಜು

August 12, 2026
BREAKING NEWS : ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಇಲಾಖೆ ಇಲ್ಲಿದೆ..!

ಶಿವಲಿಂಗೇಗೌಡಗೆ ಅಬಕಾರಿ, ಜಮೀರ್‌ಗೆ ವಸತಿ : ಖಾತೆ ಹಂಚಿಕೆಯಲ್ಲೂ ಸಿಎಂ ಡಿಕೆ ಶಿವಕುಮಾರ್ ದೂರದೃಷ್ಟಿಯ ನಡೆ ..

August 12, 2026
Next Post
ಬೆಳೆದ ಬೆಳೆ ಕಣ್ಮುಂದೆಯೇ ಕೊಚ್ಚಿಹೋಗುತ್ತಿದೆ, ಅನ್ನ ಕೊಡುವ ಅನ್ನದಾತ ಆಪತ್ತಿನಲ್ಲಿದ್ದಾನೆ – ಎಚ್‌ಡಿಕೆ

ಬೆಳೆದ ಬೆಳೆ ಕಣ್ಮುಂದೆಯೇ ಕೊಚ್ಚಿಹೋಗುತ್ತಿದೆ, ಅನ್ನ ಕೊಡುವ ಅನ್ನದಾತ ಆಪತ್ತಿನಲ್ಲಿದ್ದಾನೆ - ಎಚ್‌ಡಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada