ಪ್ರತಿಯೊಬ್ಬರು ಕೂಡಾ ತಮ್ಮ ತ್ವಜೆ ಚನ್ನಾಗಿರಬೇಕು,ಯಾವುದೆ ಒಂದು ಕಪ್ಪುಕಲೆ,ಮೊಡವೆ,ಸುಕ್ಕು ಇಲ್ಲದೆ ಕ್ಲಿಯರ್ ಆಗಿ ಇರಬೇಕು ಅಂತ ಆಸೆ ಪಡ್ತಾರೆ. ತ್ವಜೆಯನ್ನು ಮೆಂಟೇನ್ ಮಾಡೋದುಕೋಸ್ಕರ ಸಾಕಷ್ಟು ಜನ ವಿಧವಿಧವಾದ ಫೇಸ್ ಪ್ಯಾಕ್ ಗಳನ್ನ ಬಳಸ್ತಾರೆ.ದುಬಾರಿ ಖರ್ಚು ಮಾಡ್ತಾರೆ.ಆದ್ರೆ ಇದೆಲ್ಲದರ ಜೊತೆಗೆ ಈ ಹಣ್ಣುಗಳನ್ನು ಸೇವಿಸುವುದರಿಂದ ಅಥವ ಫೇಸ್‌ಪ್ಯಾಕ್ ಆಗಿ ಬಳಸುವುದರಿಂದ ನಿಮ್ಮ ತ್ವಜೆಯ ಹೊಳಪು,ಕಲೆ ರಹಿತ ಸ್ಕಿನ್ ನಿಮ್ಮದಾಗುತ್ತದೆ.

ಕಿತ್ತಳೆ ಹಣ್ಣು
ಈ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿರುವುದರಿಂದ ತ್ವಜೆಯಲ್ಲಿ ಮೂಡಿರುವಂತಹ ಮೊಡವೆಗಳು ಹಾಗೂ ಕಪ್ಪು ಕಲೆಗಳನ್ನು ಶಮನ ಮಾಡುತ್ತದೆ..ತ್ವಜೆಗೆ ತುಂಬಾನೆ ಒಳ್ಳೆಯದು ಮಾತ್ರವಲ್ಲದೆ..ಈ ಹಣ್ಣಿನಲ್ಲಿ ಇರುವಂತಹ ನ್ಯಾಚುರಲ್ ಆಯಿಲ್ ನಮ್ಮ ದೇಹವನ್ನು ಹೈಡ್ರೆಟ್ ಮಾಡುತ್ತದೆ ಹಾಗೂ ಇದರಿಂದ ಸುಕ್ಕುಗಟ್ಟುವುದು ಕೂಡಾ ಕಡಿಮೆಯಾಗುತ್ತದೆ.

ಪಪ್ಪಾಯ
ತ್ವಜೆಯ ಆರೋಗ್ಯಕ್ಕೆ ಬಹಳ ಮುಖ್ಯವಾದ ಹಣ್ಣು.ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ ಬಿ ಮತ್ತು ಸಿ ಹೆಚ್ಚಿರುತ್ತದೆ..ಇದು ನಿಮ್ಮ ತ್ವಜೆಯನ್ನು ನ್ಯಾಚುರಲ್ ಆಗಿ ಮಾಶ್ಚರೈಸ್ ಮಾಡುತ್ತದೆ..ಹಾಗೂ ಸ್ಕಿನ್‌ನ ಹೈಡ್ರೆಟ್ ಮಾಡುವುದರ ಜೊತೆಗೆ ಸಾಫ್ಟ್ ಆಗಿಡುತ್ತದೆ.ಒಟ್ಟಿನಲ್ಲಿ ಮುಖದಲ್ಲಿರುವ ಪಿಗ್‌ಮೆಂಟೆಶನ್‌ನ ನಿವಾರಣೆ ಮಾಡುತ್ತದೆ..ಪಪ್ಪಾಯವನ್ನು ಸೇವಿಸಬಹುದು,ಇಲ್ಲವಾದಲ್ಲಿ ಫೇಸ್ ಪ್ಯಾಕ್ ಆಗಿ ಬಳಸಬಹುದು..

ಕಲ್ಲಂಗಡಿ ಹಣ್ಣು
ಈ ಹಣ್ಣಿನಲ್ಲಿ ರಿಫ್ರೆಶಿಂಗ್ ಅಂಶಗಳಿವೆ, ಹಾಗೂ ಫೈಬರ್ ಕಂಟೆಂಟ್ ಜಾಸ್ತಿಯಿದೆ. ಮತ್ತು ೯೦ % ಅಷ್ಟು ವಾಟರ್ ಕಂಟೆಂಟ್ ಇರುವುದರಿಂದ ದೇಹವನ್ನು ಹೈಡ್ರೆಟ್ ಮಾಡುತ್ತದೆ, ಸಾಫ್ಟ್ ಸ್ಕಿನ್ ನಿಮ್ಮದಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವಂತಹ ವಿಟಮಿನ್ ಸಿ,ವಿಟಮಿನ್ ಎ ಬ೧ ಬಿ೬ ಲೈಕೋಪಿನ್ ಅಂಶ ನಿಮ್ಮ ಒವರ್ ಆಲ್ ತ್ವಜೆಯನ್ನು ಇಂಪ್ರೂವ್ ಮಾಡುತ್ತದೆ,ಹೊಳೆಯುವ ಸ್ಕಿನ್ ನಿಮ್ಮದಾಗುತ್ತದೆ..

ಪೈನಾಪಲ್
ಇದು ವಿಟಮಿನ್ ಎ ಸಿ ಮತ್ತು ಕೆ ಅಂಶಗಳನ್ನು ಹೊಂದಿದೆ.ಹಾಗೂ ಮಿನರ್ಲ್ಸ್ ಜಾಸ್ತಿಯಿದ್ದು ಕ್ಲಿಯರ್ ಮತ್ತು ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತದೆ.ಹಾಗೂ ಹೆಲ್ದಿ ಸ್ಕಿನ್‌ನ ಸೆಲ್ಸ್‌ನ ಪಡೆಯಬಹುದು.
