ಚಳಿಗಾಲದಲ್ಲಿ ಬೀಸುವ ತಂಪಾದ ಗಾಳಿಗೆ ಚರ್ಮ ಒಣಗುತ್ತದೆ. ಚಳಿಗಾಲದಲ್ಲಿ ತ್ವಚೆಯನ್ನ ಹೈಡ್ರೇಟ್ ಆಗಿರುವುದು ಕೂಡ ತುಂಬಾನೇ ಮುಖ್ಯ. ಅಷ್ಟೇ ಅಲ್ಲದೆ ದೇಹ ಡಿಹೈಡ್ರೇಟ್ ಆಗಿರುತ್ತದೆ..ಹಾಗಾಗಿ ಹೆಚ್ಚಿನ ಮಟ್ಟದಲ್ಲಿ ನೀರನ್ನು ಕುಡಿಯುವುದು ಉತ್ತಮ.ಇದರ ಜೊತೆಗೆ ರೆಮಿಡಿಯನ್ನ ಬಳಸುವುದರಿಂದ ತ್ವಚೆ ಹೈಡ್ರೇಟ್ ಆಗಿರುತ್ತದೆ.
ಸೌತೆಕಾಯಿ ಮತ್ತು ಪುದಿನ
ಬಿಸಿ ನೀರಿನಲ್ಲಿ ಸೌತೆಕಾಯಿಯ ಸ್ಲೈಸ್ ಅನ್ನು ಹಾಗೂ ಪುದಿನಾ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಅದರಲ್ಲಿ ಉಳಿದಿರುವ ರಸವನ್ನ ಟೋನರ್ ಆಗಿ ಬಳಸುವುದರಿಂದ ತ್ವಚೆ ಹೈಡ್ರೇಟ್ ಆಗಿರುತ್ತದೆ.
ರೋಸ್ ವಾಟರ್ ಮತ್ತು ಗ್ಲಿಸರಿನ್ ಸ್ಪ್ರೇ:
ಸಮಾನ ಭಾಗಗಳಲ್ಲಿ ರೋಸ್ ವಾಟರ್ ಮತ್ತು ಗ್ಲಿಸರಿನ್ ಮಿಶ್ರಣ ಮಾಡಿ.ನಂತರ ಅದನ್ನು ತ್ವಚೆಗೆ ಸಿಂಪಡಿಸಿ..ಪ್ರತಿದಿನ ಹೀಗೆ ಮಾಡುವುದರಿಂದ ಚರ್ಮ ಹೈಡ್ರೇಟ್ ಆಗಿರುತ್ತಾದೇ.
ಗ್ರೀನ್ ಟೀ ಮತ್ತು ಅಲೋವೆರಾ ಟೋನರ್:
ಗ್ರೀನ್ ಟೀ ಮತ್ತು ಅಲೋವೆರಾ ಜೆಲ್ ಮಿಶ್ರಣ ಮಾಡಿ. ನಂತರ ಆ ಮಿಶ್ರಣವನ್ನು ಟೋನರ್ ಆಗಿ ಬಳಸುವುದರಿಂದ ತ್ವಚೆ ಹೈಡ್ರೇಟ್ ಆಗಿರುತ್ತದೆ.