ಸೈನಸ್ ಅನ್ನೋದು ತುಂಬಾನೆ ಕಾಮನ್ ಸಮಸ್ಯೆ ಯಾಗಿದ್ದು , ಸೈನಸ್ ಶುರುವಾದಾಗ ಮೂಗು ಬ್ಲಾಕ್ ಆಗಿ ಉಸಿರಾಡಲು ತೊಂದರೆಯಾಗುತ್ತದೆ. ಹಣೆಯ ಭಾಗದಲ್ಲಿ ಅದು ಕೂಡ ಹುಬ್ಬುಗಳ ಮಧ್ಯದಲ್ಲಿ ನೋವು ಶುರುವಾಗುತ್ತದೆ.ಕೆನ್ನೆಯ ಭಾಗದಲ್ಲಿ ನೋವಿರುತ್ತದೆ.. ಸೈನಸ್ ಕಡಿಮೆ ಆಗಲು ಈ ಸಿಂಪಲ್ ಮನೆಮದ್ದುಗಳನ್ನು ಟ್ರೈ ಮಾಡಿ.

ಸ್ಟೀಮ್
ಸೈನಸ್ ಹೆಚ್ಚಾದಾಗ ಸ್ಟೀಮ್ ತೆಗೆದುಕೊಳ್ಳುವಂಥದ್ದು ಉತ್ತಮ.ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿ, ನಂತರ ಆ ಪಾತ್ರೆಯನ್ನ ಕೆಳಗಿಳಿಸಿ ಆ ನೀರಿನೊಳಗೆ ಲವೆಂಡರ್ ಆಯಿಲ್ ಅನ್ನು ಹಾಕಿ. ಆ ಸ್ಟೀಮ್ ತೆಗೆದುಕೊಳ್ಳುವುದರಿಂದ ಬ್ಲಾಕೇಜಸ್ ಬೇಗನೆ ಕಡಿಮೆಯಾಗುತ್ತದೆ, ಉಸಿರಾಡಲು ಸುಲಭವಾಗುತ್ತದೆ.

ವಾರ್ಮ್ ಕಂಪ್ರೆಸ್
ಲೋಳೆಯನ್ನು ಸಡಿಲಗೊಳಿಸಲು ಮತ್ತು ನೋವನ್ನು ಕಡಿಮೆ ಮಾಡಲು ಒಂದು ಬೌಲ್ ಅಲ್ಲಿ ಬಿಸಿನೀರನ್ನು ಹಾಕಿ ಒಂದು ಬಟ್ಟೆಯನ್ನು ಆ ನೀರಿನಲ್ಲಿ ಅದ್ದು ನಂತರ ನಿಮ್ಮ ಮುಖಕ್ಕೆ ಬೆಚ್ಚಗಿನ, ಒದ್ದೆಯಾದ ಬಟ್ಟೆಯನ್ನು ಅನ್ವಯಿಸಿ.

ಸ್ಪೈಸಿ ಪದಾರ್ಥಗಳು
ನೆಗಡಿ ಕಡಿಮೆಯಾಗಲು ಬ್ಲಾಕ್ ನಿಂದ ನಿವಾರಣೆ ಪಡೆಯಲು, ಕಾರವಿರುವಂತಹ ಅದರಲ್ಲೂ ಕೂಡ ಮೆಣಸಿನ ಸಾರು , ಮೆಣಸಿನ ಪುಡಿಯ ಕಷಾಯವನ್ನು ಕುಡಿಯುವುದರಿಂದ ಬೇಗನೆ ಮುಕ್ತಿ ಸಿಗುತ್ತದೆ.

ಆಪಲ್ ಸೈಡರ್ ವಿನೆಗರ್
ಒಂದು ಲೋಟ ಬಿಸಿ ನೀರಿಗೆ ಎರಡು ಟೇಬಲ್ ಸ್ಪೂನ್ ನಷ್ಟು ಆಪಲ್ ಸೈಡರ್ ವಿನಿಗರನ್ನ ಚೆನ್ನಾಗಿ ಬೆರೆಸಿ ನಂತರ ಆ ನೀರನ್ನ ಕುಡಿಯುವುದರಿಂದ ಬ್ಲಾಕ್ಸ್ ಕಡಿಮೆಯಾಗುತ್ತದೆ ಹಾಗೂ ನೈಸರ್ಗಿಕವಾಗಿ ಕಫವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿ
ಹಸಿ ಬೆಳ್ಳುಳ್ಳಿ ಹಾಗೂ ಮೆಣಸನ್ನ ಬೆರೆಸಿ ತಿನ್ನೋದ್ರಿಂದ ಕಫ ಬೇಗನೆ ಕಡಿಮೆಯಾಗುತ್ತದೆ .ಹಾಗೂ ಇದರ ಜೊತೆಗೆ ಶುಂಠಿಯನ್ನು ಕೂಡ ನೀವು ಮಿಕ್ಸ್ ಮಾಡಿ ಕಷಾಯವನ್ನು ಕುಡಿಯುವುದನ್ನು ಬ್ಲಾಕ್ ಕಡಿಮೆಯಾಗುತ್ತದೆ ಹಾಗೂ ಇದರಲ್ಲಿ ನೈಸರ್ಗಿಕ ಜೀವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳಿರುವುದರಿಂದ ಸೈನಸ್ಗೆ ಉತ್ತಮ ಮದ್ದು.