ರಾಜ್ಯದಲ್ಲಿ ನಡೆಯುತ್ತಿರೋದು ವಿಧಾನಸಭಾ ಚುನಾವಣೆಯೇ ಹೊರತು ಲೋಕಸಭಾ ಚುನಾವಣೆಯಲ್ಲ. ಹೀಗಾಗಿ ಇದು ಸಿಂಗಲ್ ಇಂಜಿನ್ ಚುನಾವಣೆಯೇ ಹೊರತು ಡಬಲ್ ಇಂಜಿನ್ ಚುನಾವಣೆಯಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಇಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೋ ಆ ಪಕ್ಷದವರು ಸಿಎಂ ಆಗಿ ಆಡಳಿತ ನಡೆಸುತ್ತಾರೆ. ಆದರೆ ಇಲ್ಲಿ ಪ್ರಧಾನಿಗಳು, ಗೃಹ ಸಚಿವರು, ಬಿಜೆಪಿ ರಾಷ್ಟ್ರಾಧ್ಯಕ್ಷರು ಇದನ್ನು ಡಬಲ್ ಇಂಜಿನ್ ಎಂದು ಏಕೆ ಬಿಂಬಿಸುತ್ತಿದ್ದಾರೋ ತಿಳಿಯುತ್ತಿಲ್ಲ ಎಂದಿದ್ದಾರೆ.
ಈ ಡಬಲ್ ಇಂಜಿನ್ ಸರ್ಕಾರ ಎಂದರೆ ಏನು? ಮೋದಿ ಅವರ ಪ್ರಕಾರ ದೆಹಲಿಯಲ್ಲಿ ನಾನು ಪ್ರಧಾನಮಂತ್ರಿಯಾಗಿದ್ದೇನೆ ರಾಜ್ಯದಲ್ಲಿ ನನ್ನ ಕೈಗೊಂಬೆಯಗಿರುವ ಮುಖ್ಯಮಂತ್ರಿ ಬೇಕು ಎಂದರ್ಥ. ಇದು ನಮ್ಮ ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಗಳ ಮೇಲಿನ ದಾಳಿಯಾಗಿದೆ. ಈ ಡಬಲ್ ಇಂಜಿನ್ ಸರ್ಕಾರ ಎಂದರೆ ಯಾವ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆದಾಯ ಬರುತ್ತದೆಯೋ ಅದು ನಿಜವಾದ ಡಬಲ್ ಇಂಜಿನ್ ಸರ್ಕಾರವಾಗುತ್ತದೆ. ಮಣಿಪುರ, ಅಸ್ಸಾಂ, ಹಿಮಾಚಲ, ಉತ್ತರಾಖಂಡ, ಜಮ್ಮು ಕಾಶ್ಮೀರ ರಾಜ್ಯಗಳಿಗೆ ಶೇ.90- 95ರಂಷ್ಟು ಆದಾಯ ಕೇಂದ್ರ ಸರ್ಕಾರದಿಂದ ಬರುತ್ತದೆ. ಆದರೆ ಕರ್ನಾಟಕದಲ್ಲಿ ಶೇ.94ರಷ್ಟು ಆದಾಯ ಸ್ವಂತ ಆದಾಯವಾಗಿದೆ. ರಾಜ್ಯದ ತೆರಿಗೆ, ಕೇಂದ್ರ ತೆರಿಗೆಯಲ್ಲಿ ಪಾಲುಗಳು ಪ್ರಧಾನಮಂತ್ರಿಗಳ ಆಶೀರ್ವಾದದಿಂದ ಬರುವಂತಹುದಲ್ಲ. ಇದು ಸಂವಿಧಾನದ ಪ್ರಕಾರ, ಹಣಕಾಸು ಆಯೋಗದ ಪ್ರಕಾರ ಬರುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ದೆಹಲಿ ಮೇಲೆ ಅವಲಂಬಿತವಾಗಿಲ್ಲ. ಪ್ರಧಾನಮಂತ್ರಿಗಳು 40% ಕಮಿಷನ್ ಬಗ್ಗೆ ಯಾವುದೇ ಮಾತನಾಡುತ್ತಿಲ್ಲ. ಹೀಗಾಗಿ ಅವರು ಡಬಲ್ ಇಂಜಿನ್ ಎಂದು ಮಾತನಾಡುತ್ತಿದ್ದಾರೆ. ನಿಜವಾದ ಡಬಲ್ ಇಂಜಿನ್ ಎಂದರೆ ಒಂದು ಇಂಜಿನ್ ಆರ್ಥಿಕ ವಿಕಾಸಕ್ಕೆ ಇರಬೇಕು. ರೈತರು, ಮಹಿಳೆಯರು, ಯುವಕರಿಗೆ ನೆರವಾಗಬೇಕು. ಎರಡನೇಯದು ಸಾಮಾಜಿಕ ಸದಭಾವನೆ ಇಂಜಿನ್ ಇರಬೇಕು. ಆಗ ನಿಜವಾದ ಡಬಲ್ ಇಂಜಿನ್ ಸರ್ಕಾರವಾಗಲಿದೆ. ಇದನ್ನು 80 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಬೇರೆ ಬೇರೆ ರಾಜ್ಯಗಳ ನೀಡುತ್ತಾ ಬಂದಿದೆ ಎಂದು ಹೇಳಿದರು .