• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೇಸಿಗೆಯ ಬಿಸಿಲ ಧಗೆಯಿಂದ ಬಚಾವ್ ಆಗೋಕೆ ಇಲ್ಲಿದೆ ಸಿಂಪಲ್ ಟಿಪ್ಸ್.. ಫಾಲೋ ಮಾಡಿ ಆರಾಮಾಗಿರಿ..

Any Mind by Any Mind
March 14, 2024
in Top Story, ಇತರೆ / Others, ಕರ್ನಾಟಕ
0
ಬೇಸಿಗೆಯ ಬಿಸಿಲ ಧಗೆಯಿಂದ ಬಚಾವ್ ಆಗೋಕೆ ಇಲ್ಲಿದೆ ಸಿಂಪಲ್ ಟಿಪ್ಸ್.. ಫಾಲೋ ಮಾಡಿ ಆರಾಮಾಗಿರಿ..
Share on WhatsAppShare on FacebookShare on Telegram

ಅಬ್ಬಬ್ಬಾ.. ಎಲ್ಲೆಲ್ಲೂ ಬೇಸಿಗೆಯ(Summer) ಉರಿ ಬಿಸಿಲು ವಿಪರೀತ ಆಗಿದೆ. ಭಯಂಕರ ಶೆಖೆ, ದಿನದಿಂದ ದಿನಕ್ಕೆ ಸೂರ್ಯನ ಶಾಖ ಜಾಸ್ತಿ ಆಗುತ್ತಾ ಹೋಗುತ್ತಿದೆ. ಕೆಲವು ಕಡೆಗಳಲ್ಲಿ ಬಿಸಿಲಿನ ಬೇಗೆ, ಧಗೆ ಏರುತ್ತಿದ್ದು, ಸೆಖೆಯ ಹೊಡೆತಕ್ಕೆ ಜನ ಸುಸ್ತಾಗಿ ಬಿಟ್ಟಿದ್ದಾರೆ.

ADVERTISEMENT

ಅದರಲ್ಲೂ ಮಧ್ಯಾಹ್ನದ(Afternoon) ಸಮಯದಲ್ಲಿ ಕಂಡುಬರುವ ಅತಿಯಾದ ಬಿಸಿಲಿನಿಂದಾಗಿ ತಾಪಮಾನ ಏರುತ್ತಿದ್ದು, ಜನರು ಮನೆಯಿಂದ ಹೊರಬೀಳಲು ಹಿಂದೆ ಮುಂದೆ ನೋಡುವಂತಾಗಿದೆ. ಅತಿಯಾದ ಬಾಯಾರಿಕೆಯ ಜೊತೆಗೆ ಮೈಯಿಂದ ಬೆವರುವಿಕೆಯ ಸಮಸ್ಯೆ ಕೂಡ ಹೆಚ್ಚಾಗಿದೆ. ಕೆಲವೊಮ್ಮೆ ಇದೇ ಬೆವರುವಿಕೆ ಸಮಸ್ಯೆ, ದೇಹದ ಕೆಲವು ವಿಷಕಾರಿ ಅಂಶಗಳ ಜೊತೆಗೆ ಹೊರಗಿನ ಧೂಳು ಮತ್ತು ಕೊಳೆ ಸೇರಿ ಕೊಂಡು ಸೆಖೆ ಗುಳ್ಳೆಗಳು ಅಥವಾ ಬಿಸಿ ಗುಳ್ಳೆಗಳು ಉಂಟಾಗಲು ಪ್ರಾರಂಭವಾಗುತ್ತದೆ. ಸೆಖೆಯಿಂದ ಪಾರಾಗಲು ಪ್ರತಿಯೊಬ್ಬರು ಅನುಸರಿಸಲೇಬೇಕಾದ ಟಿಪ್ಸ್ಗಳೇನು(Tips) ಒಮ್ಮೆ ನೋಡಿ.

ದೇಹ ಡಿಹೈಡ್ರೇಟ್ ಆಗದ ರೀತಿ ನೋಡಿಕೊಳ್ಳಿ..
ಬಿಸಿಲು ಹೆಚ್ಚಾಗ್ತಿದ್ದಂತೆ ಹೃದಯಾಘಾತ ಹಾಗೂ ಸ್ಟ್ರೋಕ್ ಆಗುವ ಸಂಭವ ಹೆಚ್ಚು. ಹೀಗಾಗಿ ಎಲ್ಲರೂ ಪ್ರತಿನಿತ್ಯ 2.5 ಲೀಟರ್ ನೀರನ್ನ(Water) ಕುಡಿಯಲೇ ಬೇಕು. ಜೊತೆಗೆ ಹೆಚ್ಚಾಗಿ ಧ್ರವಾಹಾರ ಸೇವಿಸಿ ದೇಹ ಡಿಹೈಡ್ರೇಟ್ ಆಗದೇ ಇರೋ ರೀತಿ ನೋಡಿಕೊಳ್ಳಬೇಕು. ಇದ್ರಿಂದ ಆರೋಗ್ಯ ಸಮಸ್ಯೆ ಉದ್ಭವಿಸಲ್ಲ.

ಹೊರಹೋಗುವಾಗ ಎಚ್ಚರ ಅಗತ್ಯ: ಸರಾಸರಿ ಬಿಸಿಲಿನ ತಾಪಮಾನ 35 ಡಿಗ್ರಿ(Degree) ಇದೆ. ಬಿಸಿಲಿನ ಧಗೆ ನೇರ ನೆತ್ತಿ ಮೇಲೆ ಬಿದ್ದರೆ ಸಾಕಷ್ಟು ತೊಂದರೆ ಆಗುತ್ತೆ. ಹೀಗಾಗಿ ಹೊರಹೋಗುವಾಗ ಟೊಪ್ಪಿ(Cap) ಹಾಗೂ ಕೊಡೆ ಬಳಸಿದ್ರೆ ಉತ್ತಮ. ಆದಷ್ಟು ತೆಳುವಿನ ಬಟ್ಟೆ ಬಳಸಿ ಹೊರಹೋದ್ರೆ ಒಳ್ಳೇದು.

ಹಣ್ಣುಗಳ ಸೇವನೆ ಒಳ್ಳೇದು..: ಹೆಚ್ಚಾಗಿ ನೀರಿನ ಅಂಶವಿರೋ ನಿಂಬೆಹಣ್ಣು, ಕಲ್ಲಂಗಡಿಹಣ್ಣು ಸೇವಿಸಿದ್ರೆ ಒಳ್ಳೇದು. ಇದರ ಜೊತೆಗೆ ರಾಗಿಗಂಜಿ, ಸಜ್ಜಿಗೆ ಎಂತಹ ಹಗು ಪದಾರ್ಥಗಳ ಹೆಚ್ಚಿನ ಸೇವನೆ ಹೊಟ್ಟೆಗೆ ಬಿದ್ರೆ ಆರೋಗ್ಯ ಚೆನ್ನಾಗಿರತ್ತೆ. ಗಟ್ಟಿ ಆಹಾರ ಸೇವನೆ ಜೀರ್ಣ ಕ್ರಿಯೆಗೆ ಕಷ್ಟ ಹೀಗಾಗಿ ಲಘು ಆಹಾರ ಸೇವಿಸಿದ್ರೆ ಆರಾಮಾಗಿರಬಹುದು.

ಮಕ್ಕಳ ಬಗ್ಗೆ ಇರಲಿ ಕಾಳಜಿ: ಬೇಸಿಗೆಯಲ್ಲಿ ಶಿಶುಗಳ(Kids) ಪಾಲನೆ ಪ್ರಮುಖ ವಿಚಾರ. ಸೂರ್ಯನ ಶಾಖಕ್ಕೆ ಚರ್ಮಬಾಧೆ ಲಕ್ಷಣ ಗೋಚರಿಸುತ್ತೆ. ಈ ಬಗ್ಗೆ ಪೋಷಕರು ಹೆಚ್ಚು ನಿಗಾ ವಹಿಸಬೇಕು. ಮಕ್ಕಳಿಗೆ ಒಳ್ಳೆಯ ಗಾಳಿ ಸಿಗುವ ರೀತಿ ನೋಡಿಕೊಳ್ಳಬೇಕು. ಆದಷ್ಟು ತಂಪು ಬಟ್ಟೆಗಳನ್ನ ಕಿಟಕಿಗೆ ನೇತು ಹಾಕಬೇಕು. ಗ್ರಾಮೀಣ ಭಾಗದ ಜನ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರೋದ್ರಿಂದ ಕೊಳಚೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.

ಒಟ್ನಲ್ಲಿ ಮೇ(May) ಅಂತ್ಯದವರೆಗೂ ಬೇಸಿಗೆ ಇರಲಿದ್ದು, ಉಡಾಫೆ ಮನೋಭಾವ ತೋರದೇ ಜನರು ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಿ ಜಾಗೃತೆಯಾಗಿ ಇರಬೇಕು.

#Summer #SunBurn #Heat #Water #Childrens #Karnataka

Previous Post

ಬಿಜೆಪಿ ನೀರಿನ ವಿಚಾರದಲ್ಲಿ ರಾಜಕೀಯ ಬಿಟ್ಟು ಕೇಂದ್ರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ: ಡಿ.ಕೆ ಶಿವಕುಮಾರ್

Next Post

ದೇವೇಗೌಡರು ಮತ್ತು ಅವರ ಪಕ್ಷದ ವರ್ಚಸ್ಸು ಕುಗ್ಗಿಹೋಗಿದೆ ! ಸಂಸದ ಡಿ.ಕೆ.ಸುರೇಶ್​ ವ್ಯಂಗ್ಯ 

Related Posts

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!
Top Story

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

by ಪ್ರತಿಧ್ವನಿ
April 26, 2026
0

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ “ದೀರ್ಘಾಯುಷ್ಯ ಮತ್ತು ಅಮರತ್ವ” ಕನಸಿಗೆ ಹೊಸ ವೇಗ ಸಿಕ್ಕಿರುವಂತೆ ಕಾಣುತ್ತಿದೆ. ರಷ್ಯಾದ ವಿಜ್ಞಾನಿಗಳು ಮಾನವ ಜೀವನಾವಧಿಯನ್ನು 150 ವರ್ಷಗಳವರೆಗೆ ವಿಸ್ತರಿಸಬಹುದಾದ...

Read moreDetails
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಅಮೆರಿಕ ರಾಜಕೀಯದಲ್ಲಿ ಆತಂಕ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

ಲಕ್ಷ್ಮಣ ಸವದಿ ಎದುರೇ ಅವರ ಆಪ್ತನ ಅಕಾಲಿಕ ನಿಧನ

April 24, 2026
Next Post
ದೇವೇಗೌಡರು ಮತ್ತು ಅವರ ಪಕ್ಷದ ವರ್ಚಸ್ಸು ಕುಗ್ಗಿಹೋಗಿದೆ ! ಸಂಸದ ಡಿ.ಕೆ.ಸುರೇಶ್​ ವ್ಯಂಗ್ಯ 

ದೇವೇಗೌಡರು ಮತ್ತು ಅವರ ಪಕ್ಷದ ವರ್ಚಸ್ಸು ಕುಗ್ಗಿಹೋಗಿದೆ ! ಸಂಸದ ಡಿ.ಕೆ.ಸುರೇಶ್​ ವ್ಯಂಗ್ಯ 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada