ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗಿ ಪದೋನ್ನತಿ ಪಡೆದುಕೊಂಡರು. ಅಂದಿನಿಂದ ಇದೀಗ ಸತತ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಕಳೆದ ಎರಡು ಬಾರಿ ಬಿಜೆಪಿ ಪಕ್ಷದಿಂದ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ಈ ಬಾರಿ ಅಧಿಕೃತವಾಗಿ ಎನ್‌ಡಿಎ ಮೈತ್ರಿಕೂಟದ ಪ್ರಧಾನಿಯಾಗುತ್ತಿದ್ದಾರೆ. ಆದರೆ ಇಳೆದ ಎರಡೂ ಅವಧಿಯಲ್ಲಿ ಮೌನವ್ರತ ಮಾಡಿದ್ದ ಪ್ರಧಾನಿ ಮೋದಿ, ಮಾಧ್ಯಮಗಳಿಂದಲೇ ಅಂತರ ಕಾಯ್ದುಕೊಂಡಿದ್ದರು. ಇಲ್ಲೀವರೆಗೂ ಒಮ್ಮೆಯೂ ಮಾಧ್ಯಮಗೋಷ್ಠಿ ನಡೆಸದ ಪ್ರಧಾನಿ ಮೋದಿ, ಈ ಬಾರಿಯ ಚುನಾವಣೆ ನಡೆಯುವಾಗ ಮಾಧ್ಯಮಗಳ ಜೊತೆಗೆ ಮಾತನಾಡಿ ಒಂದಿಷ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಮತ್ತೆ ಎನ್‌ಡಿಎ ನಾಯಕನಾಗಿ ಆಯ್ಕೆಯಾದ ಹೊಸತರಲ್ಲೇ ಹಾಸ್ಯಾಸ್ಪದಕ್ಕೆ ಒಳಗಾಗಿದ್ದಾರೆ.

ಎನ್‌ಡಿಎ ಮೈತ್ರಿಕೂಟದಲ್ಲಿ ಭಾಗಿಯಾಗಿರುವ ಜೆಡಿಯು ಪಕ್ಷದ ನಿತೀಶ್ ಕುಮಾರ್ ಹಾಗು ಟಿಡಿಪಿ ಪಕ್ಷದ ಚಂದ್ರಬಾಬು ನಾಯ್ಡು, ಅಧಿಕಾರ ಸಿಗುವ ಕಡೆಗೆ ವಲಸೆ ಹೋಗುವ ನಾಯಕರು ಅನ್ನೋದು ಈ ಹಿಂದಿನ ಘಟನೆಗಳಿಂದ ಸಾಬೀತಾಗಿದೆ. ಇದೀಗ ಇಬ್ಬರು ನಾಯಕರು ಹಲವಾರು ಕಂಡೀಷನ್ಸ್ ಹಾಕಿದ್ದಾರೆ ಎನ್ನುವ ಚರ್ಚೆಗಳ ನಡುವೆ, ಭಾಷಣಕ್ಕೆ ಟೆಲಿಪ್ರಾಮ್ಟರ್ ಬಳಸುವಂತಿಲ್ಲ ಹಾಗು ವಾರಕ್ಕೊಮ್ಮೆ ಮಾಧ್ಯಮಗೋಷ್ಠಿ ಕರೆದು ಎಲ್ಲಾ ಮಾಹಿತಿಯನ್ನು ಮಾಧ್ಯಮಗಳ ಜೊತೆಗೆ ಹಂಚಿಕೊಳ್ಳಬೇಕು ಎನ್ನುವ ಜೋಕ್‌ಗಳು ವಾಟ್ಸ್‌ಆ್ಯಪ್‌ನಲ್ಲಿ WhatsApp ನಲ್ಲಿ ಹರಿದಾಡುತ್ತಿವೆ. ಈ ನಡುವೆ ಪ್ರಮಾಣ ವಚನಕ್ಕೆ ಹಕ್ಕು ಮಂಡಿಸಿ ಹೊರ ಬಂದ ಪ್ರಧಾನಿ ಭಾಷಣ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾದ್ದಾರೆ. ಅವಶ್ಯಕತೆ ಇಲ್ಲದ ಕಡೆ ಮಾತನಾಡಲು ಮುಂದಾಗಿ ಎಡವಟ್ಟು ಮಾಡಿಕೊಂಡಿದ್ದಾರೆ.
NDA ಸರ್ಕಾರ ರಚನೆಗೆ ರಾಷ್ಟ್ರಪತಿ ಭವನದಲ್ಲಿ ಹಕ್ಕು ಮಂಡಿಸಿ ಹೊರಕ್ಕೆ ಬಂದ ಹಂಗಾಮಿ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಸಂಜೆ ಭಾಷಣ ಮಾಡಿದ್ದರು. ಈ ವೇಳೆ ಟೆಲಿಪ್ರಾಮ್ಟರ್ ಇಲ್ಲದೆ ಹಿಂದೆ ಮುಂದೆ ಮಾತನಾಡಲು ತಡವರಿಸಿದರು. ಒಂದೆರಡು ಮಾತನಾಡುತ್ತಿದ್ದಂತೆ ಮುಜುಗರಕ್ಕೆ ಒಳಗಾದ ನರೇಂದ್ರ ಮೋದಿ ಟೆಲಿಪ್ರಾಮ್ಟರ್ ಇಲ್ಲದೆ ಮಾತನಾಡಲು ಬರುವುದಿಲ್ಲ ಎನ್ನುವುದನ್ನು ಬಹಿರಂಗ ಮಾಡಿಕೊಂಡರು. ಇದು ಸಾಮಾಜಿಕ ಜಾಲತಾಣದಲ್ಲಿ ಟೀಕಾಕಾರರಿಗೆ ಅಸ್ತ್ರ ಎನ್ನುವಂತಾಗಿದೆ. ಮೂರನೇ ಬಾರಿಗೆ ಪ್ರಧಾನಿ ಆಗುತ್ತಿರುವ ನರೇಂದ್ರ ಮೋದಿ ಅವರನ್ನು ಜಾಲತಾಣದಲ್ಲಿ ಟೀಕಿಸುತ್ತ, ಮಾತನಾಡಲು ಬಾರದ ಪ್ರಧಾನಿ ಎಂಬಂತೆ ಬಿಂಬಿಸುವ ಕೆಲಸವನ್ನು ವಿರೋಧಿಗಳು ಮಾಡುತ್ತಿದ್ದಾರೆ.

ಪ್ರಧಾನಿ ಆಗಿ ಅಧಿಕಾರ ಹಿಡಿಯುತ್ತಿರುವ ನರೇಂದ್ರ ಮೋದಿಗೆ ಈ ಬಾರಿಯ ಅಧಿಕಾರ ಮುಳ್ಳಿನ ಹಾಸಿಗೆ ಎನ್ನುವುದು ಕಹಿಸತ್ಯ. ಆದರೆ ಈ ಬಾರಿ ಮಾಧ್ಯಮಗಳ ಎದುರು ಬರುವ ಮನಸ್ಸು ಮಾಡುತ್ತಾರಾ..? ಎನ್ನುವ ಕುತೂಹಲ ಹೆಚ್ಚಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಮಾಧ್ಯಮಗಳ ಎದುರು ಕಾಣಿಸಿಕೊಂಡಿದ್ದ ಹಂಗಾಮಿ ಪ್ರಧಾನಿ ಮೋದಿ, ಮತ್ತೆ ಮೌನಕ್ಕೆ ಜಾರುತ್ತಾರಾ..? ಅಥವಾ ಈಗ ಶುರು ಮಾಡಿರುವ ಮಾಧ್ಯಮ ಸಂವಾದವನ್ನು ಮುಂದುವರಿಸ್ತಾರಾ..? ಅನ್ನೋ ಬಗ್ಗೆಯೂ ಚರ್ಚೆಗಳು ಶುರುವಾಗಿವೆ.













