• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೈ ಪಾಳಯದಲ್ಲಿ ಬಂಡಾಯ ಸ್ಫೋಟಕ್ಕೆ ಕಾರಣವಾಗ್ತಿದ್ದಾರಾ ಯತೀಂದ್ರ..?

ಪ್ರತಿಧ್ವನಿ by ಪ್ರತಿಧ್ವನಿ
December 11, 2025
in Top Story, ಕರ್ನಾಟಕ, ರಾಜಕೀಯ
0
ಕೈ ಪಾಳಯದಲ್ಲಿ ಬಂಡಾಯ ಸ್ಫೋಟಕ್ಕೆ ಕಾರಣವಾಗ್ತಿದ್ದಾರಾ ಯತೀಂದ್ರ..?
Share on WhatsAppShare on FacebookShare on Telegram

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರದ ಬಗ್ಗೆ ಕೆಲವು ಕಾಂಗ್ರೆಸ್‌ (Congress) ನಾಯಕರು ಇದೊಂದು ಮುಗಿದ ಹೋದ ಅಧ್ಯಾಯ ಎನ್ನುತ್ತಿದ್ದಾರೆ. ಹೈಕಮಾಂಡ್‌ ತೀರ್ಮಾನಕ್ಕೆ ನಾವಿಬ್ಬರೂ ಬದ್ಧರಾಗಿದ್ದೇವೆ, ಬ್ರದರ್ಸ್‌ ಆಗಿ ಇರುತ್ತೇವೆ. ಹೀಗಂತಾ ಖುದ್ದು ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌(DK Shivakumar) ಬಹಿರಂಗವಾಗಿಯೇ ಹೇಳಿದ್ದಾರೆ. ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ತಂತ್ರದ ಮೂಲಕ ಗೊಂದಲಗಳಿಗೆ ಬ್ರೇಕ್‌ ಹಾಕಲು ಯತ್ನಿಸಿತ್ತು. ಆದರೆ ಅದೂ ಅಷ್ಟೊಂದು ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಲಿಲ್ಲ.

ADVERTISEMENT
Belagavi Winter Session: ಸದನದಲ್ಲಿ ವಿಪಕ್ಷದ ಶಾಸಕರಿಗೆ ಕೈ ಮುಗಿದು DCM ಡಿಕೆ ಕೇಳಿದ್ದೇನು ಗೊತ್ತಾ?

ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ರಾಜ್ಯದ ಜನರ ಸಮಸ್ಯೆಗಳು, ಅಭಿವೃದ್ದಿಯ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದರೆ ಪಟ್ಟದ ಆಟ ಬೆಂಗಳೂರಿನಿಂದ ಬೆಳಗಾವಿಗೆ ಶಿಫ್ಟ್‌ ಆದಂತೆ ಕಂಡು ಬರುತ್ತಿದೆ. ಇಂದು ಅಧಿವೇಶನದ ನಾಲ್ಕು ದಿನವಾದರೂ ನಾಯಕತ್ವ ಬದಲಾವಣೆಯ ಮಾತುಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ನಾಲ್ಕು ದಿನಗಳಲ್ಲಿ ಮೂರು ಬಾರಿ ನಾಯಕತ್ವ ಬದಲಾವಣೆಯ ಕುರಿತು ಸಿಎಂ ಪುತ್ರ ಹಾಗೂ ಪರಿಷತ್‌ ಸದಸ್ಯ ಡಾ. ಯತೀಂದ್ರ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಪಾಳಯದಲ್ಲಿ ಪವರ್‌ ಶೇರಿಂಗ್‌ ವಿಚಾರ ಬೂದಿ ಮುಚ್ಚಿದ ಕೆಂಡದಂತಾಗಿದೆ.

U. T. Khader : ಬುಗುರಿ, ರಿಂಗ್, ಬಂಡಿ,ಗೋಲಿ ಆಡಿದ ಯು.ಟಿ. ಖಾದರ್..! #sports #Speaker #KarnatakaLegislative

ಇನ್ನು ಸಿದ್ದರಾಮಯ್ಯನವರೇ ಪೂರ್ಣಾವಧಿ ಸಿಎಂ ಆಗಿರಲಿದ್ದಾರೆ. ಹೀಗಿರುವಾಗ ಹೈಕಮಾಂಡ್‌ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆದರೆ ಯತೀಂದ್ರ ಆಡುತ್ತಿರುವ ಮಾತುಗಳು ಒಂದೊಂದಾಗಿ ಆರಂಭದಲ್ಲಿ ಕಿಡಿ ಹೊತ್ತಿಸಿದ್ದವು, ಇಂದಿನ ಹೇಳಿಕೆಯು ಬೆಂಕಿ ಹೊತ್ತಿಸಿ ತುಪ್ಪ ಸುರಿದಂತಾಗಿದೆ. ಡಿಸಿಎಂ ಅವರಿಗೆ ನಾಯಕತ್ವದ ಬಗ್ಗೆ ಹೈಕಮಾಂಡ್‌ ಆಲೋಚಿಸಿಲ್ಲ ಎಂದಿರುವುದು ಡಿಕೆ ಶಿವಕುಮಾರ್‌ ಟೀಂ ಕೊತ ಕೊತ ಕುದಿಯುವಂತೆ ಮಾಡಿದೆ.

Belagavi session ಟೈಮ್​ನಲ್ಲಿ ಮತ್ತೆ ಬಿಗ್​ ಬಾಂಬ್ ಸಿಡಿದ ಶಾಸಕ ಯತೀಂದ್ರ ಸಿದ್ರಾಮಯ್ಯ #pratidhvani

ಯಾವುದೇ ಲಂಗು ಲಗಾಮುಗಳಿಲ್ಲದೆ ಮನ ಬಂದಂತೆ ಮಾತನಾಡುತ್ತಿರುವ ಯತೀಂದ್ರ ತಾವೊಬ್ಬ ಜವಾಬ್ದಾರಿಯುತ ಶಾಸಕನಾಗಿದ್ದೇನೆ ಎನ್ನುವುದನ್ನು ಮರೆತರಾ? ನಾನು ಸಿಎಂ ಮಗ, ನಾನು ಏನೇ ಹೇಳಿದರೂ ನಡೆಯುತ್ತದೆ ಅನ್ನೋ ಭ್ರಮೆನಾ?. ಕಾಂಗ್ರೆಸ್‌ ಪಕ್ಷದಲ್ಲಿ ನಾನು ಯಾವುದೇ ರೀತಿಯ ಹೇಳಿಕೆ ನೀಡಿದರೂ ಯಾರೇನು ಮಾಡಲ್ಲ ಎನ್ನುವ ಮನಸ್ಥಿತಿಯಲ್ಲಿದ್ದಾರಾ ಸಿಎಂ ಪುತ್ರ ಎನ್ನುವ ಪ್ರಶ್ನೆ ಮೂಡುತ್ತಿದೆ.

Satish Jarkiholi: ಯತೀಂದ್ರಗೆ ನೋಟಿಸ್ ನೀಡು ಅಂತ ಹೇಳೋಕೆ ನಾನ್ಯಾರು..! #YathindraSiddaramaiah

ಅಲ್ಲದೇ ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್‌ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ದ ಶಾಸಕ ಇಕ್ಬಾಲ್‌ ಹುಸೇನ್‌ ಅವರಿಗೆ ಕಾಂಗ್ರೆಸ್‌ ನೋಟಿಸ್‌ ನೀಡಿತ್ತು. ನಾಯಕತ್ವದ ಬಗ್ಗೆ ಹೇಳಿಕೆ ನೀಡದಂತೆ ತಾಕೀತು ಮಾಡಿತ್ತು. ಆದರೆ ಈಗ ಮೌನ ಮುರಿದಿರುವ ಕೈ ಶಾಸಕ, ನಾವು ಏನಾದರೂ ಮಾತನಾಡಿದರೆ ನೋಟಿಸ್ ಕೊಡುತ್ತಾರೆ. ನಮ್ಮ ಹೈಕಮಾಂಡ್ ಅಷ್ಟೊಂದು ವೀಕ್ ಆಗಿಲ್ಲ, ಬಲಿಷ್ಠವಾಗಿದೆ ಎಂದು ಯತೀಂದ್ರ ಹೇಳಿಕೆಯನ್ನು ಖಂಡಿಸಿದ್ದಾರೆ.

Prasannananda Swamiji : ಸಿದ್ದರಾಮಯ್ಯ  ಸಿಎಂ ಆಗಿ ಮುಂದುವರೆದರೆ ನಮ್ಮ ಅಭ್ಯಂತರ ಏನೂ ಇಲ್ಲ..! #siddaramaiah

ಸದ್ಯ ನಾಯಕತ್ವದ ವಿಚಾರ ಮತ್ತೆ ಚರ್ಚೆಗೆ ತಂದಿರುವ ಯತೀಂದ್ರ ವಿರುದ್ಧ ಪಕ್ಷ ಯಾವ ಕ್ರಮ ಕೈಗೊಳ್ಳುತ್ತದೆ ಎಂಬ ಪ್ರಶ್ನೆಯು ಉದ್ಭವಿಸಿದೆ. ಶಾಸಕರಿಗೆ ಒಂದು ನ್ಯಾಯ? ಸಿಎಂ ಪುತ್ರನಿಗೆ ಇನ್ನೊಂದು ನ್ಯಾಯನಾ? ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಅಧಿವೇಶನದ ಹೊತ್ತಲ್ಲಿ ರಾಜ್ಯದ ಹಿತ ಚಿಂತನೆ ಮಾಡಬೇಕಾಗಿದ್ದವರು ಹೀಗೆ ಅನವಶ್ಯಕ ಹೇಳಿಕೆಗಳನ್ನು ನೀಡುವ ಮೂಲಕ ಕಾಲ ಹರಣ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಯತೀಂದ್ರ ಹೇಳಿಕೆಗಳು ಕಾಂಗ್ರೆಸ್‌ ಸರ್ಕಾರದ ಆಪತ್ತಿಗೆ ಕಾರಣವಾದರು ಅಚ್ಚರಿ ಪಡಬೇಕಿಲ್ಲ.

Tags: congressKarnatakaKarnataka PoliticsPolitics
Previous Post

ದರ್ಶನ್‌ ಡೆವಿಲ್‌ ಸಿನಿಮಾಗೆ ರೇಟಿಂಗ್‌ ಕೊಡಲು ಕೋರ್ಟ್‌ ತಡೆ: ಯಾಕೆ ಗೊತ್ತಾ..?

Next Post

ಸೂರಿ ಅಣ್ಣ ಚಿತ್ರದ ʼನೀ ನನ್ನ ದೇವತೆʼ ಸಾಂಗ್ ರಿಲೀಸ್‌

Related Posts

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?
Top Story

ಮಿತವ್ಯಯಕ್ಕೆ ಮೋದಿ ಹೊಸ ಹೆಜ್ಜೆ; ಪ್ರಧಾನಿ ಬೆಂಗಾವಲು ವಾಹನಗಳ ಸಂಖ್ಯೆ ಇಳಿಕೆ

by ಪ್ರತಿಧ್ವನಿ
May 13, 2026
0

ನವದೆಹಲಿ: ಇಂಧನ ಉಳಿತಾಯ ಮತ್ತು ಮಿತವ್ಯಯ ಕ್ರಮಗಳ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಇದೀಗ ದೇಶಾದ್ಯಂತ ಚರ್ಚೆಗೆ...

Read moreDetails
ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

May 13, 2026
BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

May 13, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
Next Post
ಸೂರಿ ಅಣ್ಣ ಚಿತ್ರದ ʼನೀ ನನ್ನ ದೇವತೆʼ ಸಾಂಗ್ ರಿಲೀಸ್‌

ಸೂರಿ ಅಣ್ಣ ಚಿತ್ರದ ʼನೀ ನನ್ನ ದೇವತೆʼ ಸಾಂಗ್ ರಿಲೀಸ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada