1988ರಲ್ಲಿ ವೃದ್ದರೊಬ್ಬರ ಮೇಲೆ ಹಲ್ಲೆ ಹಾಗು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧುಗೆ ನ್ಯಾಯಾಲಯ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಸದ್ಯ ಪಟಿಯಾಲ ಕೇಂದ್ರ ಕಾರಾಗೃಹದಲ್ಲಿರುವ ಸಿಧುಗೆ ದಿನಕ್ಕೆ 90 ರೂಪಾಯಿ ಸಂಬಳದಂತೆ ಗುಮಾಸ್ತನ ಕೆಲಸ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಬೆಳ್ಳಗ್ಗೆ 9-1 ಹಾಗು ಮಧ್ಯಾಹ್ನ 3-5 ಪಾಳಿಯ್ಲಿ ಸಿಧು ಕಾರ್ಯ ನಿರ್ವಹಿಸಲಿದ್ದಾರೆ. ಕೊಠಡಿ ಸಂಖ್ಯೆ 10ರಲ್ಲಿರುವ ಸಿಧುಗೆ ಜೈಲ್ಲಿನ ಸಿಬ್ಬಂದಿಗಳು ಹೆಚ್ಚಿನ ಭದ್ರತೆಯನ್ನ ಒದಗಿಸಲಾಗಿದೆ. ಭದ್ರತೆಯ ಕಾರಣಗಳಿಂದಾಗಿ ಸಿಧುಗೆ ವರ್ಕ್ ಫ್ರಮ್ ಸೆಲ್ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅದೀಕಾರಿಯೊಬ್ಬರು ತಿಳಿಸಿದ್ದಾರೆ.
ಸಿಧು ಜೊತೆ ಇನ್ನು ನಾಲ್ಕು ಕೈದಿಗಳು ಕೊಠಡಿ ಸಂಖ್ಯೆ 10ರ್ಲಿ ಇದ್ದಾರೆ.