ಮೈಸೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಂಬದ ಮೂರನೇ ತಲೆಮಾರು ರಾಜಕೀಯ ಜೀವನಕ್ಕೆ ಎಂಟ್ರಿ ಕೊಡುವ ತಯಾರಿಯಲ್ಲಿದೆ. ಸಿದ್ದರಾಮಯ್ಯ ಎರಡನೇ ಪುತ್ರ ದಿವಂಗತ ರಾಕೇಶ್ ಪುತ್ರ ಧವನ್ ರಾಕೇಶ್ ತಾತನ ಪ್ರಚಾರ ನಡೆಸಲು ಸಿದ್ದರಾಮನಹುಂಡಿಗೆ ಆಗಮಿಸಿದ್ದಾರೆ.

ತಂದೆಯ ನಿಧನದ ಬಳಿಕ ತಾಯಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿರುವ ಧವನ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ತಾತನ ಪರ ಪ್ರಚಾರಕ್ಕೆಂದು ಸಿದ್ದರಾಮನಹುಂಡಿಯಲ್ಲಿ ತಾಯಿಯೊಂದಿಗೆ ತಂಗಿದ್ದಾರೆ.
ಇನ್ನು ತಾತನ ರಾಜಕೀಯವ ಜೀವನದ ಬಗ್ಗೆ ತಮಗಿರುವ ಆಸಕ್ತಿ ಕುರಿತಂತೆ ಮಾತನಾಡಿದ ಧವನ್, ನನಗೆ ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಚಾರ ಸೇರಿದಂತೆ ಈ ಚುನಾವಣೆಯ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲವಿದೆ. ಹೀಗಾಗಿ ಸಿದ್ದರಾಮನಹುಂಡಿಗೆ ಆಗಮಿಸಿದ್ದೇನೆ. ತಾತನಂತೆಯೇ ಕಾನೂನು ಪದವಿ ಪಡೆದು ರಾಜಕೀಯ ಜೀವನಕ್ಕೆ ಎಂಟ್ರಿ ನೀಡೋದಾಗಿ ಧವನ್ ಹೇಳಿದ್ದಾರೆ.






