ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲೂ ವಕ್ಫ್ ಬೋರ್ಡ್ ಆಸ್ತಿ ಕಿಚ್ಚು ಹೊತ್ತಿಕೊಂಡಿದೆ. ದೇವಸ್ಥಾನ, ತಾಲೂಕು ಕಚೇರಿ, ಜಿಲ್ಲಾ ಆಟದ ಮೈದಾನ, ಮಹಾತ್ಮಾ ಗಾಂಧಿ ಪಾರ್ಕ್ ವಕ್ಫ್ ಬೋರ್ಡ್ನಿಂದ ಕಬಳಿಕೆ ಯತ್ನ ನಡೆದಿದೆ ಎಂದು ಬಿಜೆಪಿ MLC ಸಿ.ಟಿ ರವಿ ವಕ್ಫ್ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ಸುಮೋಟೋ ಮೂಲಕ ವಕ್ಫ್ ಬೋರ್ಡ್ ನೋಟಿಫಿಕೇಶನ್ ಮಾಡಿಕೊಂಡಿದೆ. ಚಿಕ್ಕಮಗಳೂರು ನಗರದ ತಾಲೂಕು ಕಚೇರಿ ಸೇರಿದಂತೆ, ಪೊಲೀಸ್ ಕವಾಯತು ಮೈದಾನವನ್ನ ವಕ್ಫ್ ಆಸ್ತಿ ಎಂದು ನೋಟಿಫಿಕೇಶನ್ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಬೇಲೂರು ರಸ್ತೆಯಲ್ಲಿರುವ ಶನೇಶ್ವರ ದೇವಾಲಯ ತಮ್ಮ ಆಸ್ತಿ ಅನ್ನುತ್ತಿದ್ದಾರೆ. ದಾಖಲೆಗಳನ್ನ ಮುಂದಿಡಿ ಎಂಬ ಒತ್ತಡವನ್ನ ವಕ್ಫ್ ಬೋರ್ಡ್ ಮಾಡುತ್ತಿದೆ. ಚಿಕ್ಕಮಗಳೂರು ನಗರದ BSNL ಕಚೇರಿ ಕೂಡ ವಕ್ಫ್ ಬೋರ್ಡ್ ಸೇರಿದ್ದು ಎಂದಿದ್ದಾರೆ. ನಮಗೆ ಪರಿಹಾರ ನೀಡಿಲ್ಲ ಎಂದು ರೆಸಲ್ಯೂಷನ್ ಮಾಡಿಕೊಂಡಿದ್ದಾರೆ. ಇದರ ಎಲ್ಲ ದಾಖಲೆ ನನಗೆ ಸಿಕ್ಕಿದೆ ಎಂದಿದ್ದಾರೆ ರವಿ.
ಸರ್ಕಾರಿ ದಾಖಲೆಗಳಲ್ಲಿ ವಕ್ಫ್ ಹೆಸರಿನಲ್ಲಿ 18 * 89 ಮಾತ್ರ ಇದೆ. ಆದ್ರೆ ಮೂರೂವರೆ ಎಕರೆಯಿಂದ ನಾಲ್ಕು ಎಕರೆ ಪರಿಹಾರ ಕೇಳುತ್ತಿದ್ದಾರೆ. ಮೂಲ ದಾಖಲೆಗಳನ್ನು ನಲ್ಲೂರು ಮಠದವರು ನೀಡಿದ್ರು. ನೋಟಿಫಿಕೇಶನ್ ಹೊರತುಪಡಿಸಿ ವಕ್ಫ್ ಬಳಿ ಯಾವುದೇ ದಾಖಲೆ ಇಲ್ಲ ಎಂದಿದ್ದಾರೆ.
ರತ್ನಗಿರಿ ಬೋರೆಯಲ್ಲಿ ಹಳೆಯ ಕಾಲದ ದೇವಾಲಯವಿದೆ. ಈ ಜಾಗವನ್ನ ವಕ್ಫ್ ಆಸ್ತಿ ಎಂದು ನೋಟಿಫಿಕೇಶನ್ ಮಾಡಿಕೊಂಡಿದ್ದಾರೆ. ದೇವಾಲಯ ಇರುವ ಜಾಗದಲ್ಲಿ ಎಲ್ಲಿದೆ ದರ್ಗಾ ?. ಇದು ಲ್ಯಾಂಡ್ ಜಿಹಾದ್ನ ಒಂದು ಭಾಗವಾಗಿದೆ ಎಂದು ಸಿ.ಟಿ ರವಿ ಕಿಡಿಕಾರಿದ್ದಾರೆ.
ವಾಕ್ಫ್ ಬೋರ್ಡ್ ಬೋಗಸ್ ದಾಖಲೆಗಳನ್ನು ಇಟ್ಟುಕೊಂಡು ನೋಟಿಫಿಕೇಶನ್ ಮಾಡಿ ಆಸ್ತಿ ಕಬಳಿಕೆ ಮಾಡುತ್ತಿದ್ದಾರೆ. ಈ ರೀತಿ ಅಕ್ರಮವಾಗಿ ಖಾತೆಯಿಡಿ ಅನ್ನುತ್ತಿರೋದಕ್ಕೆ ರಾಜ್ಯದಲ್ಲಿ ಆಕ್ರೋಶ ಎದ್ದಿದೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ರದ್ದು ಮಾಡ್ಬೇಕು. ವಕ್ಫ್ ಬೋರ್ಡ್ ಅಕ್ರಮದ ಹಿಂದೆ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯನವರ ವರ್ತನೆ ಸಿದ್ರಾಮುಲ್ಲಾ ಖಾನ್ ರೀತಿ ಆಗಿದೆ ಎಂದಿದ್ದೆ.
ಸಿದ್ದರಾಮಯ್ಯ ಅವರು ಎರಡು ರೀತಿ ಆ್ಯಕ್ಟ್ ಮಾಡುತ್ತಾರೆ. ಹಿಂದೂಗಳ ವೋಟ್ ಬೇಕಾದ್ರೆ ಸಿದ್ದರಾಮಯ್ಯ. ಮುಸ್ಲಿಂ ವೋಟ್ ಬೇಕಾದ್ರೆ ಸಿದ್ರಾಮುಲ್ಲಾ ಆಗುತ್ತಾರೆ. ಒಂದು ರೀತಿಯ ಡಬಲ್ ಆಕ್ಟಿಂಗ್ ಎಂದು ಕಿಡಿಕಾರಿದ್ದಾರೆ.