ಎಲೆಕ್ಶನ್ ಹೊಸ್ತಿಲಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ವಾಗ್ಯುದ್ಧ ಜೋರಾಗಿದೆ.ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ ಮುಂದುವರೆಸಿದ್ದಾರೆ. ಸಿದ್ದರಾಮಯ್ಯ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಅವರನ್ನು ಚಕ್ರವ್ಯೂಹದಿಂದ ಬಿಡಿಸಲು ಕೃಷ್ಣ ಅವರ ಜೊತೆ ಇಲ್ಲ. ಕೃಷ್ಣ ಬಿಜೆಪಿಯಲ್ಲಿ ಇದ್ದಾನೆ. ಡಿ.ಕೆ ಶಿವಕುಮಾರ್ ಸಹ ಸಿದ್ದರಾಮಯ್ಯ ಜೊತೆಗಿಲ್ಲ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಅವರೂ ತಮ್ಮ ಎಲ್ಲಾ ಅಸ್ತ್ರ ಬಳಸುತ್ತಿದ್ದಾರೆ ಅಂತ ಬಿಜೆಪಿ ಮುಖಂಡ ಶಾಸಕ ಸಿಟಿ ರವಿ ಕಿಡಿಕಾರಿದ್ದಾರೆ. ಮೈಸೂರಲ್ಲಿ ಮಾತಾಡಿದ ಅವ್ರು ,ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್ ಶಾಪ ತಟ್ಟದೆ ಬಿಡುವುದಿಲ್ಲ. ತನಗೆ ಸಿಕ್ಕದ್ದು ಬೇರೆಯವರಿಗೆ ಸಿಗಬಾರದು ಅನ್ನೋ ಮನಸ್ಥಿತಿ ಅವರಿಗಿದೆ. ಖರ್ಗೆ, ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಅನ್ನೋ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರದಂತೆ ತಡೆಯಲು ಈ ರೀತಿ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಲಿಂಗಾಯತ ಸಿಎಂ ಭ್ರಷ್ಟರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಿಟಿ ರವಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ರು. ಸಿದ್ದರಾಮಯ್ಯ ಅವರು ತಮ್ಮ ಅಸಹನೆ ಆಕ್ರೋಶ ಹೊರ ಹಾಕಿದ್ದಾರೆ. ವರುಣದಲ್ಲಿ ಲಿಂಗಾಯತರು ಎಸ್ಸಿ, ಎಸ್ಟಿ ಎಲ್ಲರೂ ಒಂದಾಗಿದ್ದಾರೆ. ಅಹಿಂದ ಕಾರ್ಡ್ ನಡೆಯುತ್ತಿಲ್ಲ. ಹಿಂದು ಕಾರ್ಡ್ ನಡೆಯುತ್ತಿದೆ ಅನಿಸಿರಬಹುದು. ಭಯಮಿಶ್ರಿತ ಆಕ್ರೋಶವಾಗಿ ಈ ಮಾತು ಬಂದಿದೆ. ಎರಡು ರೀತಿಯ ಸಿಟ್ಟು ಸಿದ್ದರಾಮಯ್ಯಗೆ ಇದೆ. ಒಂದು ಕೋಲಾರ ವರುಣದಲ್ಲಿ ಸ್ಪರ್ಧೆ ಮಾಡಬೇಕು ಅಂತಾ ಇತ್ತು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಸಿದ್ದರಾಮಯ್ಯ ಒತ್ತಡದಿಂದ ಏನೇನೋ ಮಾತಾಡುತ್ತಿದ್ದಾರೆ ಅಂತ ಟೀಕೆ ಮಾಡಿದ್ರು.

ಹಿಂದುತ್ವದ ಡ್ಯಾಂ ಗಟ್ಟಿಯಾಗಿದೆ..
ಕಾಂಗ್ರೆಸ್ ರಾಜಕೀಯ ಕಾರಣಕ್ಕೆ ಸಮಾಜ ಒಡೆಯುವ ಕೆಲಸ ಮಾಡಿದೆ. ಹಿಂದೆ ವೀರಶೈವ ಲಿಂಗಾಯತ ಹೆಸರಲ್ಲಿ ಒಡೆದು ಅದನ್ನು ಅನುಭವಿಸಿದ್ದರು. ನಾವು ಲಿಂಗಾಯತರ ಡ್ಯಾಂನ್ನು ಗಟ್ಟಿ ಮಾಡಿದ್ದೇವೆ. ಬೇರೆ ಬೇರೆ ಸಮುದಾಯದವನ್ನು ಸೇರಿಸಿಕೊಂಡು ಡ್ಯಾಂ ಗಟ್ಟಿ ಮಾಡಿದ್ದೇವೆ. ಹಿಂದುತ್ವದ ಡ್ಯಾಂನ್ನು ಗಟ್ಟಿ ಮಾಡಿ ಎತ್ತರಿಸಿದ್ದೇವೆ. ಚುನಾವಣೆಯಲ್ಲಿ ಮುಳುಗಿದಾಗ ನಿಮಗೆ ಗೊತ್ತಾಗುತ್ತದೆ. ಕಾಂಗ್ರೆಸ್ ಮುಳುಗುವುದು ನಿಶ್ಚಿತ ಎಂದು ವಾಗ್ದಾಳಿ ನಡೆಸಿದ್ರು.

ಹೊಸಬರಿಗೆ ಟಿಕೆಟ್
ಈ ಬಾರಿ ಕರ್ನಾಟಕದಲ್ಲಿ ಹಳೆಬೇರು ಹೊಸ ಚಿಗುರು ಮಾದರಿಯಲ್ಲಿ ಟಿಕೆಟ್ ನೀಡಲಾಗಿದೆ. ಕಾಲ ಕಾಲಕ್ಕೆ ಬದಲಾವಣೆ ಅಗತ್ಯ. ರಾಜಕೀಯ ಪಕ್ಷದಲ್ಲೂ ಒಳಹರಿವು ಇರಬೇಕು. ಬಡವರಿಂದ ಮೇಧಾವಿಗಳವರೆಗೂ ರಾಜಕೀಯ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ ಒದಗಿಸೋದು ನಮ್ಮ ಬದ್ದತೆ. ಕೆಲವು ಪಕ್ಷಗಳಿಗೆ ಅದು ಬರೀ ಘೋಷಣೆ ಮಾತ್ರ. ಬಿಜೆಪಿ ಅಂದುಕೊಂಡಿದ್ದನ್ನ ಮಾಡಿ ಜನರ ವಿಶ್ವಾಸ ಗಳಿಸುತ್ತೆ ಅಂತ ಹೇಳಿದ್ರು.

ಸ್ಪಷ್ಟ ಬಹುಮತ..
ಚುನಾವಣಾ ಕಾವು ಜೋರಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಯಾವ ಭರವಸೆಗಳನ್ನ ಜನರು ನಂಬೋದಿಲ್ಲ. ಬಿಜೆಪಿ ಅಭಿವೃದ್ಧಿ ಆಧಾರದಲ್ಲಿ ಮತ ಕೇಳುತ್ತಿದೆ. ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ. ಮೇ 13 ಕ್ಕೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ ಅಂತ ಸಿಟಿ ರವಿ ಹೇಳಿದ್ರು.