ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದಂತೆ ಮೈಸೂರಿನಲ್ಲಿ ಚುನಾವಣಾ ಕಣ ರಂಗೇರಿದೆ. ಎನ್.ಆರ್. ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅಜ್ಜು ನಿವಾಸಕ್ಕೆ ಜಮೀರ್ ಅಹಮದ್ ಖಾನ್ ಭೇಟಿ ನೀಡಿ ಮಾತುಕತೆ ನಡೆಸಿದ್ರು. ಸ್ವತಂತ್ರ ಅಭ್ಯರ್ಥಿಯಾಗಿ ಅಜೀಜ್ ವುಲ್ಲಾ ಅಜ್ಜು ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದರು ಅಜ್ಜುರನ್ನ ಚುನಾವಣಾ ಕಣದಿಂದ ಹಿಂದೆ ಸರಿಸುವಲ್ಲಿ ಜಮೀರ್ ಯಶಸ್ವಿಯಾಗಿದ್ದಾರೆ. ಅಜ್ಜು ಕಾಂಗ್ರೆಸ್ಗೆ ಬೆಂಬಲ ಸೂಚಿಸಿ ನಾಮಪತ್ರ ವಾಪಸ್ ಪಡೆದ ಬಗ್ಗೆ ಶಾಸಕ ಜಮೀರ್ ಅಹಮದ್ ಖಾನ್ ಅಧಿಕೃತವಾಗಿ ಘೊಷಣೆ ಮಾಡಿದ್ದಾರೆ.
ಈ ವೇಳೆ ಜಮೀರ್ ಮಾಧ್ಯಮ ಗಳ ಜೊತೆ ಮಾತಾಡಿದ್ರು. ವರುಣದಲ್ಲಿ ಸಿದ್ದರಾಮಯ್ಯ ಒಂದು ಲಕ್ಷ ಲೀಡ್ನಲ್ಲಿ ಗೆದ್ದೇ ಗೆಲ್ತಾರೆ. ಪ್ರತಾಪ್ ಸಿಂಹಗೆ ಸಿದ್ದರಾಮಯ್ಯರಿಂದಲೇ ಹೆಸರು ಬಂದಿದೆ. ಸಿದ್ದರಾಮಯ್ಯ ಪ್ರತಾಪ್ ಸಿಂಹ ಅವರ ಕನಸಿನಲ್ಲಿ ಬರ್ತಾನೇ ಇರ್ತಾರೆ. ಅದಕ್ಕೆ ಅವರು ಸಿದ್ದರಾಮಯ್ಯ ಹೆಸರು ಬಳಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ವಿರುದ್ದ ಶಾಸಕ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದ್ರು.

ಚಮರಾಜಪೇಟೆಲಿ ಎದುರಾಳಿ ಇಲ್ಲ..
ತಮ್ಮನ್ನ ಚಾಮರಾಜಪೇಟೆಲಿ ಸೋಲಿಸಬೇಕೆಂದು ಅನೇಕರು ಪ್ರಯತ್ನ ಪಡುತ್ತಿದ್ದಾರೆ. 4 ಚುನಾವಣೆಗಳಿಂದ ಹಂತ ಹಂತವಾಗಿ ಲೀಡ್ ಹೆಚ್ಚುತ್ತಲೇ ಇದೆ. ಈ ಬಾರಿ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ. ಅಂತ ಹೇಳಿದ್ರು. ಮುಂದಿನ ವಾರದಿಂದ ಮೈಸೂರಿನ 11 ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡ್ತೇನೆ. ಎಲ್ಲೆಡೆ ಕಾಂಗ್ರೆಸ್ ಗೆ ಉತ್ತಮ ವಾತಾವರಣ ಇದೆ. ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಅಂತ ಹೇಳಿದ್ರು. ರಾಜ್ಯ ಸುತ್ತಿ ಸಂಘಟನೆ ಮಾಡ್ತೇನೆ. ಚಾಮರಾಜಪೇಟೆಲಿ ಕೇವಲ 2 ದಿನ ಪ್ರಚಾರ ಮಾಡ್ತೇನೆ. ಈ ಬಗ್ಗೆ ಕ್ಷೇತ್ರದ ಜನರ ಗಮನಕ್ಕೆ ತಂದಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಜನರು ಆಶಿಸುತ್ತಿದ್ದಾರೆ. ಎಲ್ಲೆಡೆ ಬಿಜೆಪಿ ವಿರೋಧಿ ಅಲೆ ಇದೆ. ಬಿಜೆಪಿ ದುರಾಡಳಿತಕ್ಕೆ ಜನರು ಬೇಸತಿದ್ದಾರೆ. ರಾಜ್ಯದಲ್ಲಿ ಬದಲಾವಣೆ ಕಟ್ಟಿಟ್ಟಬುತ್ತಿ ಅಂತ ಹೇಳಿದ್ರು.

ಮೀಸಲಾತಿ ವಿಚಾರದಲ್ಲಿ ನಾವು ನ್ಯಾಯಲಯದ ಮೊರೆ ಹೋಗಿದ್ದೇವೆ.ಬಿಜೆಪಿ ಚುನಾವಣೆಗಾಗಿ ಈ ರೀತಿ ಗಿಮಿಕ್ ಮಾಡ್ತಿದೆ.ಕೋರ್ಟ್ ನಲ್ಲಿ ಈ ವಿಚಾರದಲ್ಲಿ ಗೆಲ್ಲುತ್ತೀವಿ. ಬಿಜೆಪಿ ಸಾಧನೆ ಶೂನ್ಯ. ಮತದಾರರು ಎಲ್ಲವನ್ನ ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಂಡವಾಡುತ್ತಿದೆ. ಬಿಜೆಪಿ ನಾಯಕರು ಸುಳ್ಳು ಹೇಳೋದ್ರಲ್ಲಿ ಮಾತ್ರ ಬುದ್ಧಿವಂತರು . ಕೋಮುವಾದ ಸೃಷ್ಟಿಸಿ ಅಶಾಂತಿ ಮೂಡಿಸಿದ್ದಾರೆ. ಅಂತ ಜಮೀರ್ ಅಹಮದ್ ಆಕ್ರೋಶ ಹೊರಹಾಕಿದ್ರು.