`ಸಿದ್ದರಾಮಯ್ಯ(Siddaramaiah) ಬಾವಿಯೊಳಗಿನ ಕಪ್ಪೆ, ಮೋದಿ(Narendra Modi) ಸಮುದ್ರದಲ್ಲಿ ಈಜಿದ ಮನುಷ್ಯ, ಅವರಿಗೂ ಇವರಿಗೂ ಎಲ್ಲಿಯ ಹೋಲಿಕೆ’ ಎಂದು ಸಿಎಂ(CM) ಸಿದ್ದರಾಮಯ್ಯ ವಿರುದ್ಧ ಸಂಸದ ವಿ. ಶ್ರೀನಿವಾಸ್ ಪ್ರಸಾದ್(Srinivas Prasad) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸುಮ್ಮನೆ ಬಾಯಿಗೆ ಬಂದಂತೆ ಕಿರುಚಾಡುತ್ತಾರೆ. ಸಿದ್ದರಾಮಯ್ಯಗೂ ಆ ಜಮೀರ್ ಅಹ್ಮದ್ಗೂ(Zamer Ahmed) ಏನೂ ವ್ಯತ್ಯಾಸ ಇದೆ ಹೇಳಿ. ಇಬ್ಬರು ಸುಮ್ಮನೆ ಕೂಗುತ್ತಾರೆ. ಇವರು ಹೆರಿಗೆ ವಾರ್ಡ್ ನಲ್ಲಿ ಕಿರುಚಿದರೆ ಹೆರಿಗೆಯೇ ಆಗಿಬಿಡುತ್ತದೆ, ಆ ರೀತಿಯಲ್ಲಿ ಕೂಗುವುದನ್ನು ಕಲಿತಿದ್ದಾರೆ ಎಂದು ಲೇವಡಿ ಮಾಡಿದರು.
ನಿರ್ಮಲಾ ಸೀತರಾಮನ್(Nirmala Seetharaman) ಬಗ್ಗೆ ರಾಷ್ಟ್ರಪತಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಂತಹ ಸಿದ್ದರಾಮಯ್ಯನ ಬಗ್ಗೆ ಏನು ಮಾತಮಾಡಲಿ. ಗ್ಯಾರಂಟಿಯಿಂದ ಗೆದ್ದು ಅದೇ ಗುಂಗಿನಲ್ಲಿ ಇದ್ದಾರೆ. ಮೋದಿ(Modi Government) ಸರ್ಕಾರ ಮಾಡಿರುವ ಜನಪರ ಯೋಜನೆಗಳ ಮುಂದೆ ಇದೆಲ್ಲ ನಡೆಯುತ್ತ ನೋಡೋಣ ಎಂದ ಅವರು, ನಮ್ಮ ಹಕ್ಕ ತೆರಿಗೆ ಅಂತ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ದಾರೆ. ನಮ್ಮ ತೆರಿಗೆಯನ್ನು ಕೇಳುವ ರೀತಿಯಲ್ಲಿ ಕೇಳಿದ್ರೆ ನಮ್ಮ ತೆರಿಗೆ ಬರುತ್ತೆ. ಯಾವ ಸರ್ಕಾರವು ನಮಗೆ ಅನ್ಯಾಯ ಮಾಡುವುದಿಲ್ಲ. ನಾನು ಹಿಂದೆ ಕಂದಾಯ ಸಚಿವನಾಗಿದ್ದಾಗಲೂ ಹೋಗಿ ಕೇಳಿದ್ದಕ್ಕೆ ನಮ್ಮ ಹಣ ನಮಗೆ ಬಂದಿತ್ತು ಎಂದರು.
#Siddaramaiah #VSrinivasprasad #BJPMP #CMofKarnataka #Mysore
ತಳಸಮಾಜಕ್ಕೆ ತಲುಪದ ಬಜೆಟ್ ಎಂಬ ಪ್ರಹಸನ
ನವ ಉದಾರವಾದಿ ಕಾರ್ಪೋರೇಟೀಕರಣ ಹಾದಿಯಲ್ಲಿ ಬಜೆಟ್ ಒಂದು ಸಾಂತ್ವನದ ಹೆಜ್ಜೆ ಮಾತ್ರ ನಾ ದಿವಾಕರ ಭಾಗ 2 ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಬಜೆಟ್ ಎಂಬ ಪ್ರಕ್ರಿಯೆ ಸಮಾಜದ...
Read more