ಮೈಸೂರು : ವರುಣ ಕ್ಷೇತ್ರದಲ್ಲಿ ಬಿ.ವೈ ವಿಜಯೇಂದ್ರ ಅಬ್ಬರದ ಪ್ರಚಾರದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಫುಲ್ ಅಲರ್ಟ್ ಆಗಿದ್ದಾರೆ . ಇಂದು ವರುಣ ಅಖಾಡಕ್ಕೆ ಧುಮುಕಲಿರುವ ಸಿದ್ದರಾಮಯ್ಯ ರಾತ್ರಿಯವರೆಗೂ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ವರುಣ ಕ್ಷೇತ್ರದ ಸ್ಪರ್ಧೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ ವಿಶೇಷ ಹೆಲಿಕಾಪ್ಟರ್ನಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ರಾತ್ರಿ 8 ಗಂಟೆಯವರೆಗೂ ಕಾರ್ಯ , ಕಾರೇಪುರ, ಹಾಡ್ಯ, ಬಾಣುರು, ಚನ್ನಂಬಳ್ಳಿ, ತಗಡೂರು, ವರಹಳ್ಳಿ, ಚುಂಚನಹಳ್ಳಿ, ಹನುಮನಪುರ, ದಾಸನೂರು, ಕಾರೆಮೋಳೆ ಸೇರಿದಂತೆ ಹಲವೆಡೆ ಅಬ್ಬರದ ಕ್ಯಾಂಪೇನ್ ನಡೆಸಲಿದ್ದಾರೆ.