• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಾಂಗ್ರೆಸ್​ ಬಿಡ್ತಿದ್ದಾರಾ ಸಿದ್ದರಾಮಯ್ಯ ಪರಮಾಪ್ತ ಶಿಷ್ಯ? ಏನಾಗ್ತಿದೆ ಕಾಂಗ್ರೆಸ್​ನಲ್ಲಿ

Any Mind by Any Mind
December 28, 2022
in ಕರ್ನಾಟಕ, ರಾಜಕೀಯ
0
ಕಾಂಗ್ರೆಸ್​ ಬಿಡ್ತಿದ್ದಾರಾ ಸಿದ್ದರಾಮಯ್ಯ ಪರಮಾಪ್ತ ಶಿಷ್ಯ? ಏನಾಗ್ತಿದೆ ಕಾಂಗ್ರೆಸ್​ನಲ್ಲಿ
Share on WhatsAppShare on FacebookShare on Telegram

ಕಾಂಗ್ರೆಸ್​ ಹೈಕಮಾಂಡ್​ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್​ ಅವರಿಗೆ ಬುಲಾವ್​ ನೀಡಿದೆ. ಕಾಂಗ್ರೆಸ್​​ನಲ್ಲಿ ಪ್ರಬಾವಿ ಮುಸ್ಲಿಂ ನಾಯಕನಾಗಿ ಗುರುತಿಸಿಕೊಂಡಿದ್ದ ಬಿ.ಝಡ್​ ಜಮೀರ್​ ಅಹ್ಮದ್​ ಖಾನ್​, ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಕ್ಷೇತ್ರ ಚಾಮರಾಜಪೇಟೆಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯವನ್ನೂ ಮಾಡಿದ್ದರು. ಇದೀಗ ಜಮೀರ್​ ಅಹ್ಮದ್​ ಖಾನ್​ ಕಾಂಗ್ರೆಸ್​ ಪಕ್ಷವನ್ನೇ ಬಿಟ್ಟು ಬಿಡ್ತಾರಾ..? ಎನ್ನುವ ಶಂಕೆ ಮೂಡಿದೆ. ಇದೇ ಕಾರಣಕ್ಕೆ ಕಾಂಗ್ರೆಸ್​ ಹೈಕಮಾಂಡ್​ ಜಮೀರ್​ ಅಹ್ಮದ್​ ಖಾನ್​ ಜೊತೆಗೆ ಚರ್ಚೆ ಮಾಡುವ ಉದ್ದೇಶದಿಂದ ದೆಹಲಿಗೆ ಬರುವಂತೆ ಬುಲಾವ್​ ಕೊಟ್ಟಿದೆ. 

ADVERTISEMENT

ಕಾಂಗ್ರೆಸ್​ನಿಂದ ಮಾನಸಿಕವಾಗಿ ದೂರ ಆಗಿದ್ದ ಜಮೀರ್​..!

ಜಮೀರ್​ ಮನೆ ಮೇಲೆ ಐಡಿ ಹಾಗು ಇಡಿ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಕಾಂಗ್ರೆಸ್​ನಿಂದ ಜಮೀರ್​ ಅಹ್ಮದ್​ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡಿದ್ದರು. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳುತ್ತಿದ್ದ ಜಮೀರ್​ ಅಹ್ಮದ್​ ಖಾನ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಕೂಡ ಚಾಟಿ ಬೀಸಿದ್ದರು. ಆ ಬಳಿಕ ಮಗನ ಸಿನಿಮಾ ಬಿಡುಗಡೆ ವೇಳೆ ಹಿಂದೂ ಸಂಪ್ರದಾಯದಂತೆ ಗಣೇಶನನ್ನು ಕೂರಿಸಿ ಪೂಜೆ ಮಾಡಿದ್ದರು. ಕಾಂಗ್ರೆಸ್​ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಜಮೀರ್​ ಅಹ್ಮದ್​ ಖಾನ್​, ಸಿಎಂ ಹಾಗು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕುತೂಹಲ ಮೂಡಿಸಿದ್ದರು. ಆದರೀಗ ಜಮೀರ್​ ಆಹ್ಮದ್​ ಖಾನ್​​ ದೃಷ್ಟಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಸ್ಥಾಪಿಸಿರುವ ಭಾರತ್​ ರಾಷ್ಟ್ರೀಯ ಸಮಿತಿ ಕಡೆಗೆ ಹೊರಳಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 

ಕೆಸಿಆರ್​ ಕೈ ಹಿಡಿಯುತ್ತಾರಾ ಜಮೀರ್​ ಅಹ್ಮದ್​ ಖಾನ್​ ?

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೂ ಬಾರದೆ, ಎಲ್ಲಿದ್ದಾರೆ..? ಏನು ಮಾಡ್ತಿದ್ದಾರೆ ಎನ್ನುವುದೂ ಗೊತ್ತಾಗದೆ ಕಾಂಗ್ರೆಸ್​ ಸಂಘಟನೆಯಿಂದಲೂ ದೂರ ಸರಿದಿದ್ದ ಸಿದ್ದರಾಮಯ್ಯ ಬಲಗೈ ಬಂಟ ಜಮೀರ್​ ಅಹ್ಮದ್​ ಖಾನ್​ ಗೌಪ್ಯವಾಗಿ ಕೆ.ಚಂದ್ರಶೇಖರ್​ ರಾವ್​ ಅವರನ್ನು ಭೇಟಿಯಾಗಿದ್ದಾರೆ ಎನ್ನುವುದು ಬಯಲಾಗಿದೆ. ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ ರಾವ್​ ಭಾರತ್​ ರಾಷ್ಟ್ರೀಯ ಸಮಿತಿ ಪಕ್ಷವನ್ನು ಸ್ಥಾಪನೆ ಮಾಡಿ ಬೇರೆ ಬೇರೆ ರಾಜ್ಯಗಳಲ್ಲೂ ಪಕ್ಷ ಸಂಘಟನೆಗೆ ಮುಂದಾಗಿರುವುದು, ಇದೇ ವೇಳೆ ಶಾಸಕ ಜಮೀರ್​ ಅಹ್ಮದ್​ ಭೇಟಿ ಆಗಿರುವುದು ಒಂದಕ್ಕೊಂದು ಸಂಬಂಧ ಇದೆ ಎನ್ನುತ್ತಿದೆ. ಜಮೀರ್​ ಕಾಂಗ್ರೆಸ್​ ಬಿಡ್ತಾರೆ ಅನ್ನೋ ಮಾಹಿತಿ ಕಾಂಗ್ರೆಸ್​ ವಲಯದಲ್ಲೇ ಹರಿದಾಡ್ತಿದ್ದು, ಹೈಕಮಾಂಡ್​ ಜೊತೆಗಿನ ಚರ್ಚೆ ಬಳಿಕ ಜಮೀರ್​ ಅಂತಿಮ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆಗಳಿವೆ. 

ಕಾಂಗ್ರೆಸ್​ನಿಂದ ದೂರ ಆಗ್ತಿವೆಯಾ ಮುಸ್ಲಿಂ ಮತಗಳು ?

ದೆಹಲಿಗೆ ಬರುವಂತೆ ಜಮೀರ್ ಅಹ್ಮದ್​​ಗೆ ಕಾಂಗ್ರೆಸ್​ ಹೈಕಮಾಂಡ್​ ಬುಲಾವ್​ ನೀಡಿದೆ. ಕಾಂಗ್ರೆಸ್​ನಲ್ಲಿ ಇದೀಗ ಹೇಳಿಕೊಳ್ಳುವಂತ ಪ್ರಬಲ ಮುಸ್ಲಿಂ ಸಮುದಾಯದ ನಾಯಕರು ಯಾರೂ ಇಲ್ಲ ಎನ್ನುವಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಜೆಡಿಎಸ್​ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಮುಸ್ಲಿಂ ಮತಗಳು ಕಾಂಗ್ರೆಸ್​ಗೆ ಎನ್ನುವುದು ಶುದ್ಧ ಸುಳ್ಳು, ಈ ಬಾರಿ ಬೇರೆ ಪಕ್ಷಗಳಿಗೆ ಮುಸ್ಲಿಂ ಮತಗಳು ಹರಿಯಲಿವೆ ಎಂದು ಸುಳಿವು ಕೊಟ್ಟಿದ್ದರು. ಇದೀಗ ಜಮೀರ್​ ಅಹ್ಮದ್​ ಖಾನ್​ ಕೂಡ ಕಾಂಗ್ರೆಸ್​ನಿಂದ ದೂರ ಆಗ್ತಿರೋದನ್ನು ನೋಡಿದಾಗ ಮುಸ್ಲಿಂ ಮತಗಳು ಕಾಂಗ್ರೆಸ್​ ಮತ ಬುಟ್ಟಿಯಿಂದ ಹೊರಕ್ಕೆ ಬೀಳುವ ಸಂಭವ ಹೆಚ್ಚು ಅಂತಾನೇ ಹೇಳಬಹುದು. ಸಲೀಂ ಅಹ್ಮದ್​, ರಿಜ್ವಾನ್​ ಅರ್ಷದ್​ ಸೇರಿದಂತೆ ಸಣ್ಣ ಪುಟ್ಟ ನಾಯಕರು ಕಾಂಗ್ರೆಸ್​ನಲ್ಲಿ ಇರಬಹುದು. ಆದರೆ ಸಮುದಾಯದ ಮತ ಸೆಳೆಯುವ ಸಂಪೂರ್ಣ ತಾಕತ್ತು ಇದೆ ಎಂದು ಹೇಳಲು ಸಾಧ್ಯವಿಲ್ಲ. 

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿಕೋವಿಡ್-19ನರೇಂದ್ರ ಮೋದಿಬಿಜೆಪಿಸಿದ್ದರಾಮಯ್ಯ
Previous Post

ಜವಾರಿ ಭಾಷೆಯ ‘ಬಯಲುಸೀಮೆ’ ರಿಲೀಸ್ ಗೆ ರೆಡಿ

Next Post

ಜಮ್ಮುಕಾಶ್ಮೀರ: ಕಣಿವೆಯಲ್ಲಿ ಎನ್‌ಕೌಂಟರ್; ನಾಲ್ವರು ಉಗ್ರರ ಹತ್ಯೆ

Related Posts

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?
ರಾಜಕೀಯ

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

by ಪ್ರತಿಧ್ವನಿ
May 21, 2026
0

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “Cockroach Janata Party” ಎಂಬ ಪದ ಭಾರೀ ವೈರಲ್ ಆಗುತ್ತಿದೆ. ಮೊದಲ ನೋಟಕ್ಕೆ ಇದು ಹಾಸ್ಯ, ಮೀಮ್ ಅಥವಾ ಟ್ರೋಲ್ ರಾಜಕೀಯದ...

Read moreDetails
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
Next Post
ಜಮ್ಮುಕಾಶ್ಮೀರ: ಕಣಿವೆಯಲ್ಲಿ ಎನ್‌ಕೌಂಟರ್; ನಾಲ್ವರು ಉಗ್ರರ ಹತ್ಯೆ

ಜಮ್ಮುಕಾಶ್ಮೀರ: ಕಣಿವೆಯಲ್ಲಿ ಎನ್‌ಕೌಂಟರ್; ನಾಲ್ವರು ಉಗ್ರರ ಹತ್ಯೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada