
ಬಳ್ಳಾರಿ: ಮುಡಾ ಪ್ರಕರಣವನ್ನು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಕೊಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಎಲ್ಲಾ ಸಚಿವರಿಗೆ ಬುಲಾವ್ ನೀಡಿದ್ದಾರೆ. ಕೂಡಲೇ ಎಲ್ಲರೂ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ.
ಶನಿವಾರ (ಆ.17) ಸಂಜೆ ಐದು ಗಂಟೆಗೆ ಸಚಿವ ಸಂಪುಟ ಸಭೆಗೆ ಬರುವಂತೆ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಸಚಿವ ಜಮೀರ್ ಅಹಮದ್ ಅವರು ಮಧ್ಯಾಹ್ನ ನಿಗದಿಯಾಗಿ ಕೆಡಿಪಿ ಸಭೆ ಮೊಟಕುಗೊಳಿಸಿ ಬೆಂಗಳೂರಿಗೆ ಹೊರಡಿದ್ದಾರೆ.
ಹೀಗಾಗಿ ಜಮಿರ್ ಬಳ್ಳಾರಿ ಉಸ್ತುವಾರಿ ಸಚಿವರಾದ ಮೇಲೆ ಆಯೋಜನೆಯಾಗಿದ್ದ ಮೊದಲ ಕೆಡಿಪಿ ಸಭೆ ರದ್ದಾಗಿದೆ. ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಬೆಂಗಳೂರಿಗೆ ಹೊರಟಿದ್ದಾರೆ.