ಉತ್ತರಪ್ರದೇಶದ ಆರೋಗ್ಯ ವ್ಯವಸ್ಥೆ ಅನಾರೋಗ್ಯಕ್ಕೆ ತುತ್ತಾಗಿದೆ: ಆಸ್ಪತ್ರೆ ವ್ಯವಸ್ಥೆಯ ಚಿತ್ರಣ ಇಲ್ಲಿದೆ.!

ಕರೋನಾ ಸಾಂಕ್ರಾಮಿಕದ ಎರಡನೇ ಅಲೆ ದೇಶಾದ್ಯಂತ ವ್ಯಪಿಸುತ್ರಿದ್ದಂತೆ ದೇಶದ ಆಸ್ಪತ್ರೆಗಳು ಮತ್ತು ಸರ್ಕಾರಿ ವ್ಯವಸ್ಥೆಯ ಸ್ಥಿತಿಗತಿ ಭಟಬಯಲಾಗಿದೆ. ಅತ್ತ ಆಸ್ಪತ್ರೆಯ ಹೊರಗೆ ಚಿಕಿತ್ಸೆಗಾಗಿ ಮತ್ತು ಉಸಿರಾಟದಿಂದ ತೊಂದರೆಯಿಂದಾಗಿ ಅಲೆದಾಡುವ ರೋಗಿಗಳ ಚಿತ್ರಣ ರಾಜ್ಯ ಮತ್ತು ಕೇಂದ್ರ ಸರ್ಕಾರದ ವ್ಯವಸ್ಥೆಯ ಬಗ್ಗೆ ಸತ್ಯವನ್ನು ಹೇಳುತ್ತಿದ್ದರೆ ಇತ್ತ ಎಲ್ಲವೂ ಉತ್ತಮವಾಗಿದೆ ಎಂದು ಸರ್ಕಾರಗಳು ಹೇಳಿಕೊಳ್ಳುತ್ತಿವೆ. ಹಳ್ಳಿಗಳಲ್ಲಿನ ಆರೋಗ್ಯ ವ್ಯವಸ್ಥೆ ಇನ್ನಷ್ಟು ಶಿಥಿಲಗೊಂಡಿರುವುದಂತು ಸತ್ಯ. ಇದನ್ನು ತೋರಿಸಲು, ದಿ ಕ್ವಿಂಟ್ ಯುಪಿಯ ಕೆಲ ಜಿಲ್ಲೆಗಳ ಕೆಲವು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದೆ.

ಅಯೋಧ್ಯೆ

ಅಯೋಧ್ಯೆ ಜಿಲ್ಲೆಯಲ್ಲಿಯ ರುಡೌಲಿ ಕತ್ರ ಹನುಮಾನ್ ದೇವಸ್ಥಾನದ ಬಳಿಯಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬರುವುದಿಲ್ಲ, ಅದಕ್ಕಾಗಿಯೇ ಜನರು ಯಾವಾಗಲೂ ಇಲ್ಲಿ ಬೀಗ ಹಾಕುವುದನ್ನು ನೋಡುತ್ತಾರೆ.

ಅಯೋಧ್ಯೆ ಜಿಲ್ಲೆಯ ರುಡೌಲಿ ಬ್ಲಾಕ್‌ನ ಪಕಾಡಿಯಾ ಗ್ರಾಮದಲ್ಲಿರುವ ಈ ಆರೋಗ್ಯ ಕೇಂದ್ರಕ್ಕೆ ಯಾವ ವೈದ್ಯರೂ ಬರುವುದಿಲ್ಲ. ಇದು ಪೋಲಿಯೊ ಹನಿಗಳನ್ನು ನೀಡುವ ಸಮಯದಲ್ಲಿ ಮಾತ್ರ ತೆರೆಯುತ್ತದೆ. ಇಲ್ಲಿ ಸೌಲಭ್ಯ ಲಭ್ಯವಿದ್ದರೆ ಹತ್ತಿರದ ಒಂಬತ್ತು ಗ್ರಾಮಗಳಿಗೆ ಅನುಕೂಲವಾಗುತ್ತಿತ್ತು. ಪ್ರಸ್ತುತ ಇದನ್ನು ವಾಹನ ಪಾರ್ಕಿಂಗ್ ಮತ್ತು ವಿಶ್ರಾಂತಿಗಾಗಿ ಬಳಸಲಾಗುತ್ತಿದೆ. ಇದರೊಂದಿಗೆ ಹಿಂಭಾಗದಲ್ಲಿ ಪಶು ಆಹಾರಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.

ಸೊನ್ಭದ್ರ

ಸೋನ್ಭದ್ರ ಜಿಲ್ಲೆಯ ಕೋನ್ ಪ್ರದೇಶದಲ್ಲಿ, ಅಂದಿನ ಸಮಾಜವಾದಿ ಪಕ್ಷದ ಸರ್ಕಾರದ ಸದರ್ ಶಾಸಕ ಅವಿನಾಶ್ ಕುಶ್ವಾಹ ಅವರು 2015 ರಲ್ಲಿ ಸಿಎಚ್‌ಸಿಗೆ ಅನುಮೋದನೆ ನೀಡಿದ್ದರು, ಇದರ ನಿರ್ಮಾಣದ 2016 ರಿಂದ ಪ್ರಾರಂಭವಾಗಿ 2019 ರ ಡಿಸೆಂಬರ್‌ನಲ್ಲಿ ಪೂರ್ಣಗೊಂಡಿತು. ಆದರೆ ಇಂದಿಗೂ ಇಲ್ಲಿ ಕಟ್ಟಡ ಮಾತ್ರ ಇದೆ. ಈ ಕೇಂದ್ರದಲ್ಲಿ ಯಾವುದೇ ವೈದ್ಯರನ್ನು ನೇಮಿಸಲಾಗಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಸಹ ಯಾವುದೇ ವೈದ್ಯರು ಇಲ್ಲಿಗೆ ಬಂದಿಲ್ಲ.

ಝಾನ್ಸಿ

ಝಾನ್ಸಿಯ ಕರಾರಿ ಗ್ರಾಮದಲ್ಲಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೆವ್ವ ಇದೆ ಎಂದು ಘೋಷಿಸಲಾಗಿದೆ. ಈ ಭಯದಿಂದಾಗಿ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಇದರೊಂದಿಗೆ ವೈದ್ಯರು ಕೂಡ ಈ ವದಂತಿಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ದೆವ್ವ ಮತ್ತು ಮಾಟಗಾತಿಯರು ವಾಸಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ, ಇದರಿಂದಾಗಿ ಸಿಬ್ಬಂದಿ ಮತ್ತು ವೈದ್ಯರು ಇಲ್ಲಿಗೆ ಬರುವುದಿಲ್ಲ. ಪ್ರಧಾನ ಕಚೇರಿಯಿಂದ 8 ಕಿಲೋಮೀಟರ್ ದೂರದಲ್ಲಿರುವ ಕರಾರಿಯಲ್ಲಿ ಇದೆ.

ಫತೇಪುರ

ಈ ಪ್ರಾಥಮಿಕ ಕೇಂದ್ರವನ್ನು 3 ವರ್ಷಗಳ ಹಿಂದೆ ಫತೇಪುರ ಜಿಲ್ಲೆಯ ಐರನ್ಯಾ ಬ್ಲಾಕ್‌ನ ಮೊಹಮ್ಮದ್‌ಪುರ ಎಂಬ ಗ್ರಾಮದಲ್ಲಿ ತೆರೆಯಲಾಯಿತು. ಕೋವಿಡ್ ಪ್ರಾರಂಭವಾಗುವ ಮೊದಲು ಹತ್ತು ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ ಎಂದು ಹಳ್ಳಿಯ ಮುಖ್ಯಸ್ಥ ಕಫೀಲ್ ಅಹ್ಮದ್ ಹೇಳಿದ್ದಾರೆ. ಕಳೆದ ಒಂದು ವರ್ಷದಿಂದ ಇದನ್ನು ಲಾಕ್ ಮಾಡಲಾಗಿದೆ. ಜನರು ಚಿಕಿತ್ಸೆಗಾಗಿ 10 ಕಿ.ಮೀ ದೂರದಲ್ಲಿ ಹೋಗಬೇಕು ಎಂದು ಹೇಳಿದ್ದಾರೆ.

ಫತೇಪುರದ ಸರ್ಕಂಡಿಯದಲ್ಲಿರು ಪಿಎಚ್‌ಸಿ ಆರೋಗ್ಯ ಕೇಂದ್ರದ ಸ್ಥಿತಿಯೆಂದರೆ ಇದುವರೆಗೂ ಇಲ್ಲಿ ಯಾವುದೇ ಚಿಕಿತ್ಸೆಯನ್ನು ನೀಡಲಾಗಿಲ್ಲ. ಇಂದು ಈ ಆರೋಗ್ಯ ಕೇಂದ್ರವು ಸಂಪೂರ್ಣ ಹಾಳಾಗಿದೆ.

ಲಲಿತಪುರ

ಯುಪಿಯ ಲಲಿತಪುರ ಜಿಲ್ಲೆಯ ಬಗ್ಗೆ ಮಾತನಾಡುವುದಾದರೆ, ಪಟ್ಟಣದ ನರ್ಹತ್ ಪ್ರದೇಶದ ಡೋಗ್ರಾ ಖುರ್ದ್ ಗ್ರಾಮದಲ್ಲಿ ಲಕ್ಷಾಂತರ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಯಿಗಿದೆ. ಆದರೆ ಅಂದಿನಿಂದ ಇದು ವೈದ್ಯರ ಕೊರತೆಯಿಂದ ಮುಚ್ಚಲ್ಪಟ್ಟಿದೆ.

ಲಲಿತಪುರ ಜಿಲ್ಲೆಯ ತಹಸಿಲ್ ಮದವರ ಅಡಿಯಲ್ಲಿ ಬರುವ ಗಿರಾರ್ ಗ್ರಾಮದಲ್ಲಿ ವೈದ್ಯರ ಕೊರತೆಯಿಂದಾಗಿ ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲ. ಆದ್ದರಿಂದ ಆಸ್ಪತ್ರೆಯ ಬಹುಪಾಲು ಮುಚ್ಚಲಾಗಿದೆ.

ಜಲಾನ್

ಜಲಾನ್ ಜಿಲ್ಲೆಯ ಮಹೇಬಾದ ಈ ಚುರ್ಖಿ ಗ್ರಾಮವು ಐತಿಹಾಸಿಕವಾಗಿದೆ, ಏಕೆಂದರೆ ಇಲ್ಲಿಯೇ ಮಗುವನ್ನು ಬೆನ್ನಿಗೆ ಕಟ್ಟೆಕೊಂಡು ಹೋರಾಡಿದ ರಾಣಿ ಲಕ್ಷ್ಮಿ ಬಾಯಿ ಇದ್ದ ಊರಿದು ಸದ್ಯ ಈಗ ಅವರ ಸಹೋದರಿಯ ಅಳಿಯಂದಿರು ಇಲ್ಲಿದ್ದಾರೆ. ಆದರೆ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯ ಮಾತ್ರ ಇದೆ. ಔಷಧಿ ಮಳಿಗೆ ಮತ್ತು ಆಮ್ಲಜನಕದ ಸೌಲಭ್ಯವಿಲ್ಲ. ಆದರೆ ಇದು 7 ಸಾವಿರ ಜನಸಂಖ್ಯೆ ಹೊಂದಿರುವ ಆಸ್ಪತ್ರೆಯಾಗಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...